Ad Widget

ಸುಳ್ಯ ತಾ.ಪಂ.ನಲ್ಲಿ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ – ಅಭಿವೃದ್ಧಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ.

ಸುಳ್ಯ: ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ್ ನೇತೃತ್ವದಲ್ಲಿ ಸುಳ್ಯ ತಾಲೂಕು ಪಂಚಾಯತ್ ನಲ್ಲಿ ಪ್ರಗತಿ ಪರಿಶೀಲನಾ ಸಭೆ ಆ.16ರಂದು ನಡೆಯಿತು. ಸಭೆ ಪ್ರಾರಂಭವಾಗುತ್ತಿದ್ದಂತೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿ ದಿನಗೂಲಿ ಸಂಖ್ಯೆ ಕಡಿಮೆ ಇರುವ ಗ್ರಾಮ ಪಂಚಾಯತ್ ಗಳ ಅಭಿವೃದ್ಧಿ ಅಧಿಕಾರಿಗಳಿಗೆ ಪ್ರಶ್ನಿಸಿ ಯಾವ ಕಾರಣಕ್ಕೆ ಈ ರೀತಿಯಲ್ಲಿ ಆಗಿದೆ. ನಿಮ್ಮ ಬಳಿ ಇರುವ ಮಾಹಿತಿ ನೀಡಿ ಎಂದು ಅಜ್ಜಾವರ , ಬಾಳಿಲ , ಅಮರಮುಡ್ನೂರು , ಉಬರಡ್ಕ ,ಅರಂತೋಡು , ಕಳಂಜ , ಸಂಪಾಜೆ , ಕೊಲ್ಲಮೊಗ್ರ ಗ್ರಾಮಗಳ ಪಿಡಿಒ ಗಳಲ್ಲಿ ಕೇಳಿದರು. 15ನೇ ಹಣಕಾಸು ಯೋಜನೆಗಳ ಕಾಮಗಾರಿಗಳಲ್ಲಿ ಸರಿಯಾಗಿ ಅನುದಾನ ಬಳಕೆ ಮಾಡದೇ ಇದ್ದು ಯಾವ ಕಾರಣಕ್ಕೆ ಅನುದಾನಗಳು ಬಾಕಿ ಆಗಿವೆ. ತಕ್ಷಣವೇ ಕಾಮಗಾರಿಗಳನ್ನು ಪೂರ್ಣ ಗೊಳಿಸತಕ್ಕದ್ದು ಇದನ್ನು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ನೋಡಿಕೊಂಡು ತಕ್ಷಣವೇ ಪೂರ್ಣ ಗೊಳ್ಳುವಂತೆ ಮಾಡಬೇಕು ಎಂದು ಖಡಕ್ ಆಗಿ ಹೇಳಿದರು. ಆಡಿಟ್ ತಿರುವಳಿಯಲ್ಲಿ ವಸುಲಾತಿಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳು ಏನು ಅಲ್ಲದೇ ವಸುಲಾತಿಗೆ ಸಂಬಂಧಿಸಿದ ನೋಟಿಸ್ ನೀಡಲಾಗಿದೆಯೇ ಎಂದು ಪ್ರಶ್ನಿಸಿದರು. ಅಲ್ಲದೇ ನಿಮಗೆ ಆಗದೇ ಇದ್ದಲ್ಲಿ ನನಗೆ ಕಡತ ಕಳುಹಿಸಿ ಕೊಡಿ, ನಾನು ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು. ಸ್ವಚ್ಛ ಭಾರತ್‌ ಮಿಷನ್ ಅಡಿಯಲ್ಲಿ ಗ್ರಾಮ ಪಂಚಾಯತ್ ಗಳಲ್ಲಿ ವಾಹನ ಖರೀದಿ ಬಗ್ಗೆ ಪ್ರಶ್ನಿಸಿ ಯಾವ ಕಾರಣಕ್ಕೆ ನೀವು ಖರೀದಿ ನಡೆಸಿಲ್ಲಾ ಎಂಬುವುದನ್ನು ತಿಳಿಸಿ ಎಂದು ಸೂಚಿಸಿದರು.

. . . . .

ವಸತಿ ಯೋಜನೆಯಲ್ಲಿ 2020 ಮತ್ತು ಆ ನಂತರದ ವರ್ಷಗಳಲ್ಲಿ ಮನೆ ನಿರ್ಮಿಸಲು ಸಹಾಯಧನ ಪಡೆದವರು ನಿರ್ಮಿಸದೇ ಇದ್ದು ಅಲ್ಲದೇ ಪೂರ್ಣ ಗೊಳ್ಳದ‌ ಮನೆಗಳ ಬಗ್ಗೆ ಮಾಹಿತಿಯನ್ನು ಕೇಳಿದರು ಅಲ್ಲದೇ ಅವುಗಳಿಗೆ ಏನು ಕ್ರಮ ಕೈಗೊಂಡಿದ್ದೀರಿ ಇದನ್ನು ಶೀಘ್ರವಾಗಿ ಮುಗಿಸುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ಅಮೃತ ಗ್ರಾಮ ಪಂಚಾಯತ್ ಯೋಜನೆಯಲ್ಲಿ ಇನ್ನು ಕಾಮಗಾರಿ ಮುಗಿಸದೇ ಇದ್ದು ಅವುಗಳನ್ನು ಯಾಕೆ ಈ ರೀತಿ ಮಾಡುತ್ತಿದ್ದೀರಿ ನಿಮಗೆ ಅಭಿವೃದ್ಧಿ ಮಾಡುವ ಮನಸ್ಸು ಇಲ್ಲವೇ ಅಥವಾ ನಿಮ್ಮ ಕೆಲಸವಲ್ಲ ಎಂದು ಕುಳಿತಿದ್ದಿರೋ ಎಂದು ಪ್ರಶ್ನಿಸಿ ಇಒರವರಿಗೆ ತಿಂಗಳಿನಲ್ಲಿ ಒಂದು ಬಾರಿ ರಿವಿಯ್ಯೂ ಮಾಡಬೇಕು ಎಂದು ಹೇಳಿದರು. ಜಲಜೀವನ್ ಮಿಷನ್ ಕೇಂದ್ರ ಮತ್ತು ಎಂಜಿನಿಯರಿಂಗ್ ವಿಭಾಗಕ್ಕೆ ಬರುತ್ತಿದ್ದರೂ ಅದರ ಕಾಮಗಾರಿಗಳು ನಡೆಯುವಾಗ ನೀವು ನೋಡಬೇಕು ಮತ್ತು ಪೈಪ್ ಲೈನ್ , ಕೊಳವೆ ಬಾವಿ , ವಿದ್ಯುತ್ ಸಂಪರ್ಕ , ಟ್ಯಾಂಕ್ ಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು, ಅಲ್ಲದೇ ಅವುಗಳ ಬಗ್ಗೆ ನಿಗಾ ಇರಿಸಿ ಮುಂದೆ ಗ್ರಾ.ಪಂ ನೀಡಿದಾಗ ಅದು ಉಪಯೋಗಕ್ಕೆ ಬರುವುದಿದೆ. ಅದಕ್ಕಾಗಿ ನೀವು ಮುತುವರ್ಜಿ ವಹಿಸಿಕೊಳ್ಳಿ ವಿದ್ಯುತ್ ಸಂಪರ್ಕ ಬಾಕಿ ಇರುವ 63 ಪಂಪುಗಳಿಗೆ ಸಂಪರ್ಕ ನೀಡುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ನೂತನ ತೆರಿಗೆ ವಸೂಲಾತಿ ಪ್ರಕಾರವೇ ಸಂಗ್ರಹಿಸುತ್ತಿದಾರ ಅಲ್ಲವೇ ಇಡೀ ದೇಶ ಮತ್ತು ರಾಜ್ಯದಲ್ಲಿ ನೇರವಾಗಿ ತೆರಿಗೆ ಸಂಗ್ರಹಕ್ಕೆ ಅವಕಾಶ ಇರುವುದು ಅಂದರೆ ಗ್ರಾ.ಪಂ ಗಳಿಗೆ ನೀವು ಯಾಕೆ ತೆರಿಗೆ ಸಂಗ್ರಹವನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲಾ ಅಲ್ಲದೇ ಜನರಿಗೆ ಟ್ಯಾಕ್ಸ್ ಫ್ರೀಗಳು ಇರುವಾಗ ಕಟ್ಟಿಸುವುದು ಮತ್ತು ಅವುಗಳನ್ನು ಪ್ರಚಾರಪಡಿಸಿ ಮಾಡುವುದಿಲ್ಲವೇ ಎಂದು ಪ್ರಶ್ನಿಸಿದಾಗ ವ್ಯಾಟ್ಸಪ್ ಮೂಲಕ ಮಾಹಿತಿ ನೀಡುತ್ತಿದ್ದೇವೆ ಎಂದು ಉತ್ತರಿಸಿದರು. ಈ ಸಂದರ್ಭದಲ್ಲಿ ಎಲ್ಲವನ್ನು ವ್ಯಾಟ್ಸಾಪ್ ಮೂಲಕ ಅಲ್ಲ ಮಾಡುವುದು ಅವುಗಳನ್ನು ಮೈಕ್ ಗಳ ಮೂಲಕ ಪ್ರಚಾರ ಪಡಿಸಿ ಅಲ್ಲದೇ ಸ್ವ ಸಹಾಯ ಗುಂಪುಗಳ ಕಾರ್ಯಕರ್ತೆಯರನ್ನು ಸೇರಿಸಿಕೊಂಡು ತೆರಿಗೆ ಸಂಗ್ರಹಕ್ಕೆ ಹೋಗಿ 100% ಸಂಗ್ರಹಿಸಿದವರನ್ನು ಅಭಿನಂದಿಸುವ ಕೆಲಸಗಳನ್ನು ಮಾಡಿ ಎಂದು ಹೇಳಿದರು. ಆ ಮೂಲಕ ತೆರಿಗೆ ಸಂಗ್ರಹಿಸುವ ಕೆಲಸಗಳನ್ನು ಮಾಡಿ ಎಂದು ಹೇಳಿದರು.

ಸಭೆಯಲ್ಲಿ ಪ್ರಮುಖವಾಗಿ ಕಾರ್ಯನಿರ್ವಾಹಕ ಅಧಿಕಾರಿಗಳು ನಿವೇಶನ ರಹಿತರ ಪಟ್ಟಿಗಳನ್ನು ತಯಾರಿಸಿ ಅವರಿಗೆ ನಿವೇಶನ ಹಂಚಿಕೆ ಮಾಡಬೇಕು ಅಲ್ಲದೇ ಇದೀಗ ಅರ್ಜಿಗಳನ್ನು ತುಂಬುವ ಕಾರ್ಯಗಳು ಆಗುತ್ತಿವೆ ಅದು ನಿಮಗೆ ಗೊತ್ತಿದೆಯಾ ಎಂದು ಪ್ರಶ್ನಿಸಿ ಅವುಗಳನ್ನು ತ್ವರಿತವಾಗಿ ಮಾಡಬೇಕು ಎಂದು ಸೂಚಿಸಿದರು. ಉದ್ಯೋಗ ಖಾತರಿ ಯೋಜನೆಯಲ್ಲಿ ಪ್ರಗತಿ ಸಾಧಿಸಲು ವಿಫಲವಾದ ಪಂಚಾಯತ್ ಗಳು ಅರ್ಹರು ಮತ್ತು ಪ್ರತಿ ವರ್ಷ ಕೆಲಸ ಮಾಡುತ್ತಿರುವ ಕಾರ್ಡ್ ದಾರರನ್ನು ಗುರುತಿಸಿ ಅವರಿಗೆ ಕೆಲಸ ನೀಡುವಂತವುಗಳನ್ನು ಮಾಡಿ ಅಲ್ಲದೇ ಶಾಲೆ , ಅಂಗನವಾಡಿ , ಚರಂಡಿ ದುರಸ್ತಿ ಸೇರಿದಂತೆ ಇತರೆಗಳನ್ನು ಉದ್ಯೋಗ ಖಾತರಿ ಯೋಜನೆಯಲ್ಲಿ ಮಾಡಿ ಶಾಲೆಯ ಕಂಪೌಂಡ್ , ಆಟದ ಮೈದಾನ , ಶಾಲೆಗಳ ಅಡುಗೆ ಕೋಣೆ ಅಂಗನವಾಡಿಗಳಲ್ಲಿ ಕೆಲಸಗಳು ಸೇರಿದಂತೆ ಮನಸ್ಸು ಇದ್ದರೆ ಎಲ್ಲವು ಸಾಧ್ಯವಿದೆ ಅಂತಹ ಕೆಲಸಗಳನ್ನು ಮಾಡಿ ಎಂದು ಖಡಕ್ ಆಗಿ ಸೂಚಿಸಿದರು. ಅಲ್ಲದೇ 2019 ರಲ್ಲಿ ಬಂದಿರುವ ಅನುದಾನಗಳೇ ಬಾಕಿಯಾಗಿರುವುದು ಯಾವ ಕಾರಣಕ್ಕೆ ಅವುಗಳನ್ನು ಕೂಡಲೇ ಕಾಮಗಾರಿ ಮುಗಿಸಬೇಕು ಎಂದು ಸೂಚಿಸಿದರು. ಅಲ್ಲದೇ ಗ್ರಾಮಗಳಲ್ಲಿನ ಶಾಲೆಗಳು ಅಂಗನವಾಡಿ ಕೇಂದ್ರಗಳಿಗೆ ಅಭಿವೃದ್ಧಿ ಅಧಿಕಾರಿಗಳು ಭೇಟಿ ನೀಡಬೇಕು ಎಂದು ಸೂಚಿಸಿದರು. ಅಲ್ಲದೇ ನಿವೇಶನ ರಹಿತರಿಗೆ ನಿವೇಶನವನ್ನು ಕಲ್ಪಿಸುವ ಸಲುವಾಗಿ ಗ್ರಾಮದಲ್ಲಿನ ಸರಕಾರಿ ಜಮೀನು ಗುರುತಿಸಿ ಅವುಗಳನ್ನು ಪಂಚಾಯತ್ ಪಡೆದುಕೊಂಡು ಅವುಗಳಲ್ಲಿ ಸೂರುಗಳನ್ನು ನಿರ್ಮಿಸಿ ಎಂದು ಹೇಳಿದರು . ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಸಿಡಿಪಿಒ , ಕೃಷಿ ಇಲಾಖಾ ಅಧಿಕಾರಿ , ಮೆಸ್ಕಾಂ , ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!