ಅರಂತೋಡು: 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯಿತು. ಕಾಲೇಜಿನ ಕ್ರೀಡಾಂಗಣದಲ್ಲಿ ದಿವಂಗತ ಭಾಸ್ಕರ್ ರೈ ಪೇರಾಜೆ ಕುಟುಂಬಸ್ಥರು ನೀಡಿದ ನೂತನ ಧ್ವಜ ಸ್ತಂಭದಲ್ಲಿ ಧ್ವಜಾರೋಹಣವನ್ನು ಪ್ರಭಾಕರ್ ರೈ ನೆರವೇರಿಸಿದರು. ನಂತರ ಸಭಾ ಕಾರ್ಯಕ್ರಮ ನಡೆಯಿತು.ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯ ಪುರುಷೋತ್ತಮ ಕಿರ್ಲಾಯ ಭಾಗವಹಿಸಿ, ಮಾತನಾಡಿ ಸ್ವಾತಂತ್ರ್ಯದ ಮಹತ್ವ ಮತ್ತು ದೇಶದ ಪ್ರಜೆಗಳ ಕರ್ತವ್ಯಗಳನ್ನು ನೆನಪಿಸಿ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದರು.
ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ಹುಕ್ರಪ್ಪ ಗೌಡ ಉಳುವಾರು ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ದ್ವಿತೀಯ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದವರು 43 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.ಕಾಲೇಜಿನ ಸಂಚಾಲಕ ಕೆ ಆರ್ ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಕಾರ್ಯದರ್ಶಿ ಕೆ ಆರ್ ಪದ್ಮನಾಭ ಉಪಸ್ಥಿತರಿದ್ದರು. ಪ್ರಭಾರ ಪ್ರಾಂಶುಪಾಲ ಸುರೇಶ್ ವಾಗ್ಲೆ ಸ್ವಾಗತಿಸಿದರು. ಮುಖ್ಯಗುರು ಸೀತಾರಾಮ ಎಂ.ಕೆ.ಧನ್ಯವಾದ ಸಲ್ಲಿಸಿದರು. ವಿದ್ಯಾರ್ಥಿಗಳ ಸಮೂಹ ದೇಶಭಕ್ತಿ ಗೀತೆಗಳ ಗಾಯನ, ಭಾಷಣ ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಮೋಹನಚಂದ್ರ , ಕಿಶೋರ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.ಮನೋಜ್ ಕುಮಾರ್, ಸಂದೇಶ, ಜಯರಾಮ, ಶಾಂತಿ, ಲಿಂಗಪ್ಪ ಸೋಮಶೇಖರ, ಅಶ್ವಿನಿ,
ಭಾಗ್ಯಶ್ರೀ, ಪದ್ಮ ಕುಮಾರ್, ಧನ್ಯರಾಜ್, ಚಿದಾನಂದ ಸೇರಿದಂತೆ ಎಲ್ಲಾ ಭೋದಕ ಮತ್ತು ಬೋಧಕೇತರ ಸಿಬ್ಬಂದಿಗಳು ಸಹಕರಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿವೃತ್ತ ಪ್ರಾಂಶುಪಾಲರಾದ ರಮಾ ವೈ.ಕೆ,ಆಡಳಿತ ಮಂಡಳಿ ನಿರ್ದೇಶಕರಾದ ಅಬ್ದುಲ್.ಎ.ವಸಂತ ಎ.ಸಿ, ಸೇರಿದಂತೆ ಆಡಳಿತ ಮಂಡಳಿ ಸದಸ್ಯರು,ಹಿರಿಯ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.ಹಿರಿಯ ವಿದ್ಯಾರ್ಥಿಗಳಾದ ಜಯಂತ್,ಡಾ.ನಿತೀನ್ ಪ್ರಭು, ಧನ್ಯರಾಜ್ ಮತ್ತು ಡಿ.ವಿ.ಸದಾನಂದ ಸಿಹಿತಿಂಡಿ ನೀಡಿ ಸಹಕರಿಸಿದರು. ಶಿಕ್ಷಕ ಸೋಮಶೇಖರ ನೇತೃತ್ವದಲ್ಲಿ ಎಲ್ಲಾರಿಗೂ ಸಿಹಿ ಭೋಜನ ನೀಡಲಾಯಿತು.