Ad Widget

*ಪ್ರಕೃತಿ ವಿಕೋಪದ ಮುನ್ಸೂಚನೆ ಪ್ರಾಣಿ ಪಕ್ಷಿಗಳಿಗೆ ಮೊದಲೇ ತಿಳಿದುಬರುತ್ತದೆ*

✍️ ಭಾಸ್ಕರ ಗೌಡ ಜೋಗಿಬೆಟ್ಟು

ಎಡಬಿಡದೆ ಸುರಿಯುತ್ತಿರುವ ಮಳೆಗೆ ಜನರ ಜೀವನ ಅತಂತ್ರವಾಗಿದೆ. ಹಲವು ಕಡೆಗಳಲ್ಲಿ ಭೂ ಕುಸಿತದಂತಹ ಪ್ರಕೃತಿ ವಿಕೋಪಗಳು ಆಗುತ್ತಿವೆ. ಮುಖ್ಯವಾಗಿ ಶಿರಾಡಿ ಘಾಟ್, ಶಿರೂರು , ವಯನಾಡು ಮುಂತಾದ ಕಡೆಗಳಲ್ಲಿ ಗಂಭೀರವಾದ ಸಮಸ್ಯೆಗಳಾಗಿವೆ. ಇಂತಹ ಪ್ರಕೃತಿ ವಿಕೋಪ ಆಗುವ ಮೊದಲೇ ಪ್ರಾಣಿ ಪಕ್ಷಿಗಳಿಗೆ ಮುನ್ಸೂಚನೆ ಇರುತ್ತದೆ ಎಂಬುವುದಕ್ಕೆ ಕೆಲವೊಂದು ಘಟನೆಗಳು ಪುಷ್ಠಿ ನೀಡುತ್ತವೆ.ವಯನಾಡಿನ ಭೀಕರ ದುರಂತದ ಬೆಟ್ಟ ಕುಸಿಯುವ‌ ಮೊದಲೇ ಪ್ರಾಣಿ ಪಕ್ಷಿಗಳು , ಸಾಕು ಪ್ರಾಣಿಗಳು ವಿಚಿತ್ರವಾಗಿ ಕೂಗುವುದರ ಮೂಲಕ ಸೂಚನೆಯನ್ನು ನೀಡಿದ್ದವು ಎಂದೂ ಅಲ್ಲಿನ ಜನರು ಹೇಳುತ್ತಿದ್ದರೆ. ಇಂತಹ ಸಂದರ್ಭಗಳಲ್ಲಿ ಕಾಡು ಪ್ರಾಣಿ ,ಪಕ್ಷಿಗಳು , ಸಾಕು ಪ್ರಾಣಿಗಳು ವಿಚಿತ್ರವಾಗಿ ಕೂಗಲಾರಂಭಿಸುತ್ತವೆ. *ಭೂ* *ಕುಸಿತಕ್ಕೆ* *ಒಳಗಾದವರಿಗೆ* *ಆಸರೆಯಾದ* *ಕಾಡನೆ* ..!!ವಯನಾಡಿನ ಭೀಕರವಾದ ಭೂ ಕುಸಿತದ ದಿನ ಮನೆಯೇ ಮೇಲೆ ಮರದ ದಿಮ್ನಿಗಳು ಬಿದ್ದಾಗ ಹೇಗೊ ತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳಲು ಒಂದು ಕುಟುಂಬವು ಬೆಟ್ಟದ ತಪ್ಪಲಿಗೆ ಓಡಿಹೋಗುತ್ತದೆ. ಹೀಗೆ ಹೊಗುತ್ತಿರುವಾಗಲೇ ಇವರಿಗೆ ಬೃಹತ್ ಕಾಡಾನೆಯೊಂದು ಎದುರಾಗುತ್ತದೆ. ಈ ಸಂದರ್ಭದಲ್ಲಿ ಒಟ್ಟಿಗಿದ್ದ ಅಜ್ಜಿ ಆನೆಯ ಜೊತೆ ಗೋಲಾಡುತ್ತ ನಾವು ಪ್ರವಾಹದಿಂದ ಹೇಗೊ ತಪ್ಪಿಸಿಕೊಂಡು ಬಂದಿದ್ದೇವೆ. ನಮಗೆ ಏನೂ ಮಾಡಬೇಡ ಎಂದು ಅಂಗಲಾಚುತ್ತಾರೆ. ಇದನ್ನು ನೋಡಿದ ಅನೆಯ ಮನಸ್ಸು ಕರಗಿ ಹೋಗಿ ಕಣ್ಣೀರುತ್ತದೆ . ಮುಂದೆ ಈ ಕುಟುಂಬವು ಆನೆಯ ಹತ್ತಿರವೇ ನಿಂತು ಆಸರೆ ಪಡೆಯುತ್ತರೆ. ಆನೆಯು ಇವರ ಪರಿಸ್ಥಿತಿಯನ್ನು ನೋಡಿ ತನ್ನ ಹತ್ತಿರ ಮಾಡಿಕೊಂಡು ರಕ್ಷಣೆ ನೀಡುತ್ತದೆ. ಇದೊಂದು ಪ್ರಕೃತಿಯ ವಿಸ್ಮಯವೇ ಸರಿ. *ಕುತೂಹಲ* *ಕೆರಳಿಸಿದ* *ವಿದ್ಯಾರ್ಥಿನಿ* *ಬರೆದ* *ಪ್ರಬಂಧ*ವಯನಾಡ್ ದುರಂತದ ಪಕ್ಕದಲ್ಲಿಯೇ ಒಂದು ಶಾಲೆ ಇದ್ದು , ಆ ಶಾಲೆಯ ವಿದ್ಯಾರ್ಥಿನಿಯೊಬ್ಬಲು ಒಂದು ದಿನ ಭೂಕಂಪ ಆಗುತ್ತದೆ. ಇದಕ್ಕೂ ಮೊದಲು ಪ್ರಾಣಿ ಪಕ್ಷಿಗಳ ಚೀರಾಡುತ್ತವೆ ಎಂದು ಬರೆದಿದ್ದು, ಇದು ನಿಜಕ್ಕೂ ಕುತೂಹಲ ಕೆರಳಿಸಿದೆ. ಒಟ್ಟಾರೆಯಾಗಿ ವಯನಾಡು ಪ್ರಕೃತಿ ವಿಕೋಪದಲ್ಲಿ ನೂರಾರು ಜನರ ಬದುಕು ನಾಶವಾಗಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!