ಒಳ್ಳೆಯ ಗುಣಕೆ, ಒಳ್ಳೆಯ ತನಕೆ ಬೆಲೆಯೇ ಇಲ್ಲ ಅನಿಸುವುದಿಲ್ಲಿ, ಕೆಲವೊಮ್ಮೆ ಅನಿಸುವುದಿಲ್ಲಿ…
ಆದರೆ ಒಳ್ಳೆಯತನವೇ, ಒಳ್ಳೆಯ ಗುಣವೇ ಕೈ ಹಿಡಿಯುವುದಿಲ್ಲಿ, ಪ್ರತಿಕ್ಷಣವೂ ಕೈ ಹಿಡಿಯುವುದಿಲ್ಲಿ…
ನಾವು ಮಾಡಿದ ಪಾಪ-ಪುಣ್ಯಗಳೇ ನಮ್ಮ ಬದುಕಿನ ಲೆಕ್ಕಾಚಾರಗಳು, ಹುಟ್ಟು-ಸಾವಿನ ಮಧ್ಯದಲ್ಲೇ ನಮಗೆ ಸಿಗುವವು ನಮ್ಮ ಕರ್ಮದ ಪ್ರತಿಫಲಗಳು…
ಮೇಲ್ನೋಟಕ್ಕೆ ಎಲ್ಲರೂ ಒಳ್ಳೆಯವರಂತೆ ಕಾಣಿಸುವರಿಲ್ಲಿ, ಮನದೊಳಗಿನ ಹುಳುಕನ್ನು ಬಲ್ಲವರಾರು ಅಲ್ಲವೇ ಇಲ್ಲಿ…!?
ಹಾಗೆಂದು ಎಲ್ಲರೂ ಇಲ್ಲಿ ಕೆಟ್ಟವರಲ್ಲ, ಕೆಸರಿನ ನಡುವಿನ ಕಮಲದಂತೆ ಕೆಟ್ಟವರ ನಡುವೆ ಒಳ್ಳೆಯವರೂ ಇರುವರು ಇಲ್ಲಿ, ಒಳ್ಳೆಯತನದಿ ಬದುಕುತ್ತಿರುವರು ಇಲ್ಲಿ…
ಹಾವು-ಏಣಿ ಆಟದಂತೆ ಈ ಒಳಿತು-ಕೆಡುಕಿನ ಬದುಕು, ಕೆಡುಕೆಷ್ಟೇ ಮೇಲೆ ಸಾಗಿದರೂನು ಒಳ್ಳೆಯತನವೇ ಗೆಲ್ಲುವುದಿಲ್ಲಿ, ಒಳ್ಳೆಯತನವೇ ಉಳಿಯುವುದಿಲ್ಲಿ…
ಒಳ್ಳೆಯ ತನಕೆ-ಒಳ್ಳೆಯ ಮನಕೆ ಕಷ್ಟ-ನೋವುಗಳು ತುಸು ಹೆಚ್ಚಾದರೂ ಇಲ್ಲಿ ಒಳ್ಳೆಯ ತನವೇ-ಒಳ್ಳೆಯ ಮನವೇ ಕೊನೆಗೆ ಜಯಗಳಿಸುವುದಿಲ್ಲಿ, ಕೆಡುಕಿನ ಮೇಲೆ ಜಯಗಳಿಸುವುದಿಲ್ಲಿ…
✍️ಉಲ್ಲಾಸ್ ಕಜ್ಜೋಡಿ