ಪಠ್ಯಾಧಾರಿತ ಶಿಕ್ಷಣದಿಂದ ಮಾತ್ರ ಬದುಕಿನಲ್ಲಿ ಯಶಸ್ಸನ್ನು ಕಾಣಲು ಸಾಧ್ಯವಿಲ್ಲ ಬದಲಾಗಿ ಬಾಲ್ಯದಿಂದಲೇ ಬೆಳೆಸಿಕೊಳ್ಳುವ ಉತ್ತಮ ಗುಣಗಳು ಅವನನ್ನು ಉತ್ತುಂಗಕ್ಕೇರಿಸುತ್ತವೆ. ಪ್ರತಿಭಾ ಪ್ರದರ್ಶನವು ವಿದ್ಯಾರ್ಥಿಗಳಿಗೆ ತಮ್ಮ ಸೃಜನ್ಯಶೀಲತೆ ಮತ್ತು ನಾವೀನ್ಯತೆಯನ್ನು ಸಾಬೀತುಪಡಿಸಲು ಅವಕಾಶವನ್ನು ಒದಗಿಸುತ್ತದೆ. ಅದೇ ರೀತಿಯಲ್ಲಿ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪ್ರದರ್ಶನ ಜು.04ರಂದು ನಡೆಯಿತು. ಶಾಲೆಯ ನಾಲ್ಕು ದಳಗಳಾದ ಜ್ಯೋತಿ, ಶಕ್ತಿ ,ಕೀರ್ತಿ ಮತ್ತು ಸ್ಪೂರ್ತಿ ವಿದ್ಯಾರ್ಥಿಗಳಿಂದ ಪ್ರದರ್ಶನ ನಡೆಯಿತು. ಪ್ರತಿ ದಳಕ್ಕೆ 30 ನಿಮಿಷದ ಸಮಯಾವಕಾಶವನ್ನು ನೀಡಲಾಯಿತು. ವಿದ್ಯಾರ್ಥಿಗಳು ಭರತನಾಟ್ಯ, ಪ್ರಹಸನ, ಹಾಡು, ಏಕಪಾತ್ರಾಭಿನಯ, ಕೋಲಾಟ, ಭಾಷಣ ಹೀಗೆ ಹಲವು ಕಾರ್ಯಕ್ರಮಗಳನ್ನು ನೀಡಿದರು. ವಿಜೇತ ತಂಡಕ್ಕೆ ರೋಲಿಂಗ್ ಟ್ರೋಫಿಯೊಂದಿಗೆ ಬಹುಮಾನವನ್ನು ನೀಡಲಾಯಿತು. ಮುಖ್ಯ ಶಿಕ್ಷಕರಾದ ಯಶೋಧರ ಎನ್ ಬಹುಮಾನವನ್ನು ವಿತರಿಸಿದರು. ಶಿಕ್ಷಕ ಲೋಕೇಶ್ ಬಿ ಬಹುಮಾನಿತರ ಹೆಸರನ್ನು ವಾಚಿಸಿದರು. ಕಾರ್ಯಕ್ರಮದ ಒಟ್ಟು ನಿರ್ವಹಣೆಯನ್ನು ಅರವಿಂದ ಕಾಯಾರ ಮತ್ತು ಕವಿತಾ ಕೆ ಎನ್ ನಿರ್ವಹಿಸಿದರು. ಶಿಕ್ಷಕರೆಲ್ಲರ ಜವಾಬ್ದಾರಿಯೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
- Thursday
- November 21st, 2024