

ಇಳೆಯು ಮಳೆಯನ್ನು ಮನತುಂಬಿ ಕರೆದಿದೆ, ಇಳೆಯ ಕರೆಗೆ ಮಳೆಯು ಧರೆ ತುಂಬಾ ಸುರಿದಿದೆ…
ರಾತ್ರಿ-ಹಗಲೆನ್ನದೇ ಸುರಿಯುತ್ತಿರುವ ಈ ಮಳೆಗೆ ತುಂಬಿ ಹರಿಯುತ್ತಿವೆ ನದಿ-ಹಳ್ಳಗಳೆಲ್ಲಾ, ನದಿಯ ಬಳಿ ತೆರಳುವಾಗ ಎಚ್ಚರವಹಿಸಬೇಕು ನಾವೆಲ್ಲಾ…
ರಸ್ತೆಯಲ್ಲಿ ಸಾಗುವಾಗಲೂ, ಮನೆಯ ಹೊರಗಡೆ ನಡೆಯುವಾಗಲೂ ಜಾಗ್ರತೆ ವಹಿಸಲೇಬೇಕಿದೆ ಈ ಮಳೆಗಾಲದಲ್ಲಿ, ಕೆಸರು ತುಂಬಿದ ರಸ್ತೆಯಲ್ಲಿ, ಪಾಚಿ ತುಂಬಿದ ಮನೆಯಂಗಳದಲ್ಲಿ…
ಮಳೆಗಾಲದಲ್ಲಿ ಆದಷ್ಟು ಹೋಗದಿರಿ ಪ್ರವಾಸವನ್ನ, ತುಂಬಿ ಹರಿಯುತ್ತಿರುವ ನೀರಿನಲ್ಲಿ ಸಿಕ್ಕಿ ಪಡದಿರಿ ಪ್ರಯಾಸವನ್ನ…
ನದಿಯೆಂದೂ ನೋಡದು ಎದುರ್ಯಾರು ಇರುವರೆಂದು, ಅದು ಸಾಗುತ್ತಲೇ ಇರುವುದು ತನ್ನ ದಾರಿಯಲ್ಲಿ ಎಂದೆಂದೂ, ಯೋಚಿಸಿ ಜಾಗ್ರತೆ ವಹಿಸಬೇಕು ಬುದ್ಧಿಜೀವಿಗಳಾದ ನಾವಿಂದು…
ಬದುಕಿದ್ದರೆ ಇಂದಲ್ಲಾ ನಾಳೆ ನೋಡಿ ಅನಂದಿಸಬಹುದು ತುಂಬಿ ಹರಿಯುತ್ತಿರುವ ನದಿಯನ್ನು, ಒಂದು ಕ್ಷಣದ ಖುಷಿಗಾಗಿ ಕಳೆದುಕೊಳ್ಳದಿರಿ ಅಮೂಲ್ಯವಾದ ಪ್ರಾಣವನ್ನು…
✍️ಉಲ್ಲಾಸ್ ಕಜ್ಜೋಡಿ