Ad Widget

ಶೌರ್ಯ ವಿಪತ್ತು ನಿರ್ವಹಣಾ ಘಟಕ ಐದನೇ ವರ್ಷಕ್ಕೆ ಪಾದಾರ್ಪಣೆ, ರಕ್ತ ದಾನ ಶಿಬಿರ.

ಕಲ್ಲುಂಗುಂಡಿ: ಶೌರ್ಯ ವಿಪತ್ತು ನಿರ್ವಹಣಾ ಘಟಕ ಐದನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಲೇಡಿ ಕ್ವೆಶ್ಚನ್ ಆಸ್ಪತ್ರೆ ಮತ್ತು ರೆಡ್ ಕ್ರಾಸ್ ಸಂಸ್ಥೆ ಸಹಯೋಗದಿಂದ ರಕ್ತದಾನ ಶಿಬಿರ ನಡೆಯಿತು. ಈ ಸಂದರ್ಭದಲ್ಲಿ ಸದಸ್ಯರಾದ ಅಶೋಕ ಚಿದಾನಂದ ದೇವಿಪ್ರಸಾದ್ ಸವಿತಾ ತಾರಾ ಹಾಗೂ ವಿಶಾಲಾಕ್ಷಿ ಯವರು ರಕ್ತದಾನ ಮಾಡಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತ್ ಅಧ್ಯಕ್ಷರು ಹಾಗೂ...
Ad Widget

ಸುಬ್ರಹ್ಮಣ್ಯ : ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಿಷ್ಯವೇತನ ವಿತರಣೆ                  

ಸುಬ್ರಹ್ಮಣ್ಯ ಜೂನ್ 22 : ಸುಬ್ರಹ್ಮಣ್ಯದ ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಏನೆಕಲ್ ಸರಕಾರಿ ಪ್ರೌಢಶಾಲೆಯ 2023-24ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಆರ್ಥಿಕವಾಗಿ ಹಿಂದುಳಿದ ಐದು ಮಂದಿ ವಿದ್ಯಾರ್ಥಿಗಳಿಗೆ ಶನಿವಾರ ಶಿಷ್ಯವೇತನವನ್ನು ವಿತರಿಸಲಾಯಿತು.ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾl ಎ.ಎ ತಿಲಕ್ ಹಾಗೂ...

ಸ.ಕಿ.ಪ್ರಾ.ಶಾಲೆ ಪೈಂಬಚ್ಚಾಲು ಇದರ ಹಳೆ ವಿದ್ಯಾರ್ಥಿಗಳ ನೂತನ ಸಮಿತಿ ರಚನೆ

ಆಲೆಟ್ಟಿ : ಸ.ಕಿ.ಪ್ರಾ.ಶಾಲೆ ಪೈಂಬಚ್ಚಾಲು ಇದರ ಹಳೆ ವಿದ್ಯಾರ್ಥಿಗಳ ನೂತನ ಸಮಿತಿಯನ್ನು ರಚನೆಯು , ಜೂ.23 ರ ಆದಿತ್ಯವಾರ ರಚಿಸಲಾಯಿತು.  ನೂತನ ಸಮಿತಿ ಅಧ್ಯಕ್ಷರಾಗಿ ನಿಸಾರ್.ಟಿ. ಎಂ , ಉಪಾಧ್ಯಕ್ಷರಾಗಿ ಮುಈನುದ್ದೀನ್ ಕೆ.ಎಂ., ಪ್ರ.ಕಾರ್ಯದರ್ಶಿ ಅನಸ್.ಪಿ ಎ ಜೊತೆ ಕಾರ್ಯದರ್ಶಿ: ತಮೀಂ ಟಿ. ಐ ,ಕೋಶಾಧಿಕಾರಿ: ಮುನೀರ್ ಸಿ. ಎ ಆಯ್ಕೆಯಾದರು. ಈ ಸಂದರ್ಭದಲ್ಲಿ ಶಾಲೆಯ...

ಬೊಳುಬೈಲು : ವಿದ್ಯುತ್ ಲೈನ್ ನಲ್ಲಿ ಟ್ರೀಕಟ್ಟಿಂಗ್ – ನಾಗರಿಕರ ಸಹಕಾರ

ಬೊಳುಬೈಲ್ ನಿಂದ ಪಿಲಿಕೋಡಿ ವರೆಗೆ ದೇವರಗುಂಡ ಪೀಡರ್ ಹಾದುಹೋಗುವಲ್ಲಿ ವಿದ್ಯುತ್ ಲೈನ್ ಗೆ ತಾಗುತ್ತಿರುವ ಮರದ ಗೆಲ್ಲುಗಳ ತೆರವುಗೊಳಿಸುವ ಕಾರ್ಯ ಜೂ.23 ರಂದು ನಡೆಯಿತು.‌ ಈ ಸಂದರ್ಭದಲ್ಲಿ ಮೆಸ್ಕಾಂ ಸಿಬ್ಬಂದಿಗಳಿಗೆ ಪಿಲಿಕೋಡಿ ಭಾಗದ ಬಳಕೆದಾರರು ಸಹಕಾರ ನೀಡಿದರು.

ಕಲ್ಮಡ್ಕ : ಚಾಲಕನ ನಿಯಂತ್ರಣ ತಪ್ಪಿ ಹತ್ತು ಅಡಿ ಆಳಕ್ಕೆ ಬಿದ್ದ ಬೈಕ್

ಬೈಕೊಂದು ಚಾಲಕನ ನಿಯಂತ್ರಣ ತಪ್ಪಿ 10 ಆಳಕ್ಕೆ ಬಿದ್ದ ಘಟನೆ ಕಲ್ಮಡ್ಕದಿಂದ ವರದಿಯಾಗಿದೆ. ಕಲ್ಮಡ್ಕ ತಿರುವಿನಲ್ಲಿ ಬೈಕೊಂದು ಸವಾರನ ನಿಯಂತ್ರಣ ತಪ್ಪಿ ಗುಂಡಿಗೆ ಮಗುಚಿ ಬಿದ್ದಿದೆ. ಆದರೆ ಸವಾರರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು,ಅಪಾಯದಿಂದ ಪಾರಾಗಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಆಗಮಿಸಿದ ಬಿಎಸ್ ವೈ – ಸ್ವಾಗತಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ

ಸುಳ್ಯ: ಬಿಜೆಪಿ ರಾಷ್ಟ್ರೀಯ ನಾಯಕ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಎರಡು ದಿನಗಳ ಜಿಲ್ಲಾ ಪ್ರವಾಸದಲ್ಲಿದ್ದು ಇದೀಗ ಕುಕ್ಕೆ ಸುಬ್ರಹ್ಮಣ್ಯ ದೇವಾಲಕ್ಕೆ ಆಗಮಿಸಿದ್ದು ಮಾಜಿ ಮುಖ್ಯಮಂತ್ರಿಗಳನ್ನು ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ಶಾಲು ಹೊದಿಸಿ ಹೂ ಗುಚ್ಚ ನೀಡಿ ಆತ್ಮಿಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರು ಜೊತೆಗಿದ್ದರು. ಪೂಜಾ ಕಾರ್ಯ ಮುಗಿದ...

ಕಂದ್ರಪ್ಪಾಡಿ : ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ

ಶತಮಾನೋತ್ಸವ ಆಚರಿಕೊಂಡ ಕಂದ್ರಪ್ಪಾಡಿ ಶಾಲಾ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಅವಿನಾಶ್ ಜಿ ಎಸ್ ಹಾಗೂ ಶ್ರೀಮತಿ ಸ್ವಪ್ನಾ ಅವರು ಅವಿರತ ಫೌಂಡೇಶನ್ ನ ಸಹಯೋಗದೊಂದಿಗೆ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಮಾಡಿದರು. ಅವಿನಾಶ್ ಜಿ ಎಸ್ ಹಾಗು ಶ್ರೀಮತಿ ಸ್ವಪ್ನಾ ಅವರು  ತಮ್ಮ ಮಗನಾದ ನಿರ್ಮಯ್ ಅವರ ಹೆಸರಿನಲ್ಲಿ ಗ್ರಾಮೀಣ ಪರಿಸರದ ವಿದ್ಯಾರ್ಥಿಗಳ ಕಲಿಕೆಗೆ...

ಸಂಕಲ್ಪ ತಂಡದಿಂದ ಬಾಳಿಲ ವಿದ್ಯಾಬೋಧಿನೀ ಶಾಲೆಗೆ ಶೈಕ್ಷಣಿಕ ಸಾಮಾಗ್ರಿಗಳ ಕೊಡುಗೆ

ಬಾಳಿಲದ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಗೆ ಚಿಕ್ಕಬಳ್ಳಾಪುರದ "ಸಂಕಲ್ಪ" ತಂಡ ಹಾಗೂ ಡಾ.ಕಿಶನ್‌ ರಾವ್‌ ಬಾಳಿಲ ಇವರು ಜೊತೆಯಾಗಿ ಶಾಲೆಯ ಅಗತ್ಯ ಸಾಮಾಗ್ರಿಗಳನ್ನು ನೀಡಿದ್ದು ಇದರ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.ಚಿಕ್ಕಬಳ್ಳಾಪುರದ ಸಂಕಲ್ಪ ಬಳಗವು ಚಿಕ್ಕಬಳ್ಳಾಪುರದ ಹತ್ತಾರು ಗ್ರಾಮೀಣ ಶಾಲೆಗಳಿಗೆ ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಿದೆ. ಈ ತಂಡದಲ್ಲಿ ವೈದ್ಯರುಗಳಾದ  ಡಾ.ಭಾಸ್ಕರ ಬೆಂಗಳೂರು,...

ನಡುಗಲ್ಲು: ನೂತನ ಎಸ್ಡಿಎಂಸಿ ರಚನೆ; ಅಧ್ಯಕ್ಷರಾಗಿ ಶಿವರಾಮ ಉತ್ರಂಬೆ, ಉಪಾಧ್ಯಕ್ಷರಾಗಿ ಶ್ರೀಮತಿ ಶೃತಿ ಮರಕತ ಆಯ್ಕೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿಯ ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ ಗ್ರಾಮ ಪಂಚಾಯತ್ ಗುತ್ತಿಗಾರು ಅನುಮತಿಯೊಂದಿಗೆ, ಗ್ರಾಮ ಪಂಚಾಯತ್ ಸದಸ್ಯ ವಿಜಯ್ ಕುಮಾರ್ ಚಾರ್ಮಾತ ಇವರ ಮೇಲುಸ್ತುವಾರಿಯೊಂದಿಗೆ ಮಾಡಲಾಯಿತು. ಮುಖ್ಯ ಶಿಕ್ಷಕರಾದ ಶ್ರೀ ಚಂದ್ರಶೇಖರ ಪಾರೆಪ್ಪಾಡಿ ಮೊದಲಿಗೆ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳೊಂದಿಗೆ ಎಸ್ ಡಿ ಎಂ ಸಿ ರಚನೆ...
Loading posts...

All posts loaded

No more posts

error: Content is protected !!