- Friday
- April 11th, 2025

ಇಂದು ಸಂಜೆ ಬೀಸಿದ ಭಾರಿ ಗಾಳಿ ಮಳೆಗೆ ಅರಂತೋಡು ಅಡ್ತಲೆ ರಸ್ತೆಯ ಹಾಸ್ಪಾರೆ ಎಂಬಲ್ಲಿ ಮರಗಳು ಮುರಿದು ಬಿದ್ದಿದೆ. ವಿದ್ಯುತ್ ಕಂಬಗಳಿಗೂ ಹಾನಿಯಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.

ಒಡಬಾಯಿ ಸಮೀಪ ಮೆಸ್ಕಾಂ 24*7 ಸರ್ವೀಸ್ ಜೀಪಿಗೆ ಖಾಸಗಿ ಬಸ್ ಡಿಕ್ಕಿಯಾದ ಘಟನೆ ಇಂದು ಸಂಜೆ ನಡೆದಿದೆ. ಒಡಬಾಯಿ ಬಳಿ ಕಾಸಗೋಡಿನಿಂದ ಸುಳ್ಯಕ್ಕೆ ಬರುತ್ತಿದ್ದ ಖಾಸಗಿ ಬಸ್ ಮೆಸ್ಕಾಂ ಸುಳ್ಯ ಶಾಖೆಯ ಜೀಪಿಗೆ ಡಿಕ್ಕಿ ಹೊಡೆದಿದೆ. ಜೀಪಿನ ಹಿಂಭಾಗ ಜಖಂಗೊಂಡಿದೆ. ಬಸ್ ನ ಮುಂಭಾಗದ ಗಾಜು ಒಡೆದಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಪ್ರಕರಣ ರಾಜಿಯಲ್ಲಿ ಇತ್ಯರ್ಥಗೊಂಡಿದೆ...

ನಾಗರಹಾವು ಕಡಿದು ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಹರಿಹರ ಪಲ್ಲತ್ತಡ್ಕದ ಕಲ್ಲೇಮಠದಲ್ಲಿ ನಡೆದಿದ್ದು, ಕಲ್ಲೇಮಠ ನಿವಾಸಿ ದೇವಮ್ಮ ಎಂಬುವವರು ತಮ್ಮ ಮನೆ ಸಮೀಪದ ಕೊಟ್ಟಿಗೆಯ ಸುತ್ತ ಸ್ವಚ್ಛಗೊಳಿಸುವ ಸಂಧರ್ಭದಲ್ಲಿ ಕೋಳಿ ಕಾಪು ಪರಿಶೀಲಿಸಲು ಕೈ ಹಾಕಿದಾಗ ನಾಗರಹಾವು ಕಡಿದಿದ್ದು, ತಕ್ಷಣವೇ ಅವರನ್ನು ಹಳ್ಳಿ ಮದ್ದಿಗೆ ಕರೆದೊಯ್ದು ಅಲ್ಲಿಂದ ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ದಾರಿ ಮಧ್ಯೆ...

ಪ್ರಕೃತಿ ವಿಕೋಪ ಎದುರಿಸಲು ಗೃಹರಕ್ಷಕ ದಳ ಸನ್ನದ್ಧವಾಗಿದ್ದು ಪೂರ್ವ ಸಿದ್ಧತೆಯಿಂದ ಹಾನಿ ಪ್ರಮಾಣವನ್ನು ಕಡಿತಗೊಳಿಸಬಹುದು ಎಂದು ಜಿಲ್ಲಾ ಗೃಹರಕ್ಷಕ ದಳ ಸಮಾಧೇಷ್ಟರಾದ. ಡಾ. ಮುರಳಿ ಮೋಹನ್ ಚೂಂತಾರ್ ಹೇಳಿದರು. ಅವರು ಸುಬ್ರಮಣ್ಯ ಗೃಹರಕ್ಷಕ ದಳ ಕಚೇರಿಗೆ ಭೇಟಿ ನೀಡಿ ಮಳೆಗಾಲ ವಿಪತ್ತು ನಿರ್ವಹಣಾ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ವಿಪತ್ತು ನಿರ್ವಹಣೆಯ ಅಗತ್ಯ ಪರಿಕರಣೆಗಳನ್ನು ವೀಕ್ಷಿಸಿದರು...

ಬಾಳಿಲದ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ಕೃಷ್ಣಮೂರ್ತಿಯವರ ವಯೋ ನಿವೃತ್ತಿಯಿಂದ ತೆರವಾದ ಸ್ಥಾನದ ಪ್ರಭಾರವನ್ನು, ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶನ ಹಾಗೂ ಆಡಳಿತ ಮಂಡಳಿಯ ಸೂಚನೆಯಂತೆ ವಿದ್ಯಾಬೋಧಿನೀ ಪ್ರೌಢಶಾಲೆಯ ಸಹಶಿಕ್ಷಕರಾದ ಉದಯಕುಮಾರ ರೈ ಎಸ್ ರವರು ವಹಿಸಿಕೊಂಡರು. ಈ ಸಂದರ್ಭ ವಿದ್ಯಾಬೋಧಿನೀ ವಿದ್ಯಾಸಂಸ್ಥೆಗಳ ಸಂಚಾಲಕ ಪಿ ಜಿ ಎಸ್ ಎನ್ ಪ್ರಸಾದ್, ವಿದ್ಯಾಬೋಧಿನೀ...

ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ 2024-25ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ನಡೆಯಿತು.ಕಾಲೇಜಿನ ಸಂಚಾಲಕರಾದ ಶ್ರೀ ಕೆ ಆರ್ ಗಂಗಾಧರ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳು ಉಪನ್ಯಾಸಕರ ಮಾರ್ಗದರ್ಶನವನ್ನು ಬಳಸಿಕೊಂಡು ಅತ್ಯುತ್ತಮ ವ್ಯಕ್ತಿತ್ವವುಳ್ಳ ವಿದ್ಯಾರ್ಥಿಗಳಾಗಿ ರೂಪುಗೊಳ್ಳಬೇಕೆಂದು ಕರೆ ನೀಡಿದರು.ಪ್ರಭಾರ ಪ್ರಾಂಶುಪಾಲ ಸುರೇಶ್ ವಾಗ್ಲೆ ಅಧ್ಯಕ್ಷತೆ ವಹಿಸಿ, ಕಾಲೇಜಿನ...

ನೈರುತ್ಯ ಪದವಿಧರ ಹಾಗೂ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಾದ ಆಯನೂರ್ ಮಂಜುನಾಥ್, ಹಾಗೂ ಡಾ| ಕೆ.ಕೆ. ಮಂಜುನಾಥ್ ಕುಮಾರ್ ರ ಪರವಾಗಿ ಪಯಸ್ವಿನಿ ಹೈ ಸ್ಕೂಲ್, ಹಿರಿಯ ಪ್ರಾಥಮಿಕ ಶಾಲೆ ಅಡ್ಕಾರ್, ಹಿರಿಯ ಪ್ರಾಥಮಿಕ ಶಾಲೆ ಪೇರಾಲು , ಹೈ ಸ್ಕೂಲ್ ಅಜ್ಜಾವಾರ, ಹಿರಿಯ ಪ್ರಾಥಮಿಕ ಶಾಲೆ ಅಡ್ಪoಗಾಯ, ಅಜ್ಜಾವಾರ ಶಾಲೆ, ಹೈ ಸ್ಕೂಲ್ ಆಲೆಟ್ಟಿ,...

ಮುಕ್ಕೂರು : ಪೆರುವಾಜೆ ಗ್ರಾಮದಲ್ಲೇ ಪ್ರಪ್ರಥಮ ಬಾರಿಗೆ ಪ್ರೊಜೆಕ್ಟರ್ ಮತ್ತು ಸ್ಕ್ರೀನ್ ಅಳವಡಿಸಿ ಸ್ಮಾರ್ಟ್ ಕ್ಲಾಸ್ ತರಗತಿ ಸೌಲಭ್ಯ ಹಾಗೂ ವಿದ್ಯಾರ್ಥಿಗಳಿಗೆ ಬೇಸಿಕ್ ಕಂಪ್ಯೂಟರ್ ಕಲಿಕೆಯು ಮುಕ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇ 31 ರಂದು ಪ್ರಾರಂಭಗೊಂಡಿತು. ತನ್ಮೂಲಕ ಈ ವರ್ಷದ ಶಾಲಾ ಪ್ರಾರಂಭೋತ್ಸವನ್ನು ವಿಶಿಷ್ಟ ಹಾಗೂ ಅರ್ಥಪೂರ್ಣ ರೀತಿಯಲ್ಲಿ ಆಚರಿಸಲಾಯಿತು. 60 ಸಾವಿರ...

ವಿಧಾನ ಪರಿಷತ್ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣಾ ಅಭ್ಯರ್ಥಿಗಳ ಪರವಾಗಿ ಸುಳ್ಯದ ಇಂಜಿನಿಯರಿಂಗ್ ಕಾಲೇಜ್, ಮೆಡಿಕಲ್ ಕಾಲೇಜ್ ,ಡೆಂಟಲ್ ಕಾಲೇಜ್, ನೆಹರು ಮೆಮೋರಿಯಲ್ ಕಾಲೇಜ್, ಮತ್ತು ಆಯುರ್ವೇದಿಕ್ ಕಾಲೇಜ್, ಸರಕಾರಿ ಜೂನಿಯರ್ ಕಾಲೇಜ್, ಸರಕಾರಿ ಪದವಿ ಪೂರ್ವ ಕಾಲೇಜು, ಕೊಡಿಯಾಲ ಬೈಲು, ಮತ್ತು ಸುಮನಾ ಬೆಳಾರ್ಕರ್,ಮನೆ ಭೇಟಿ ಮಾಡಿ ಮತದಾರರನ್ನು ಸಂಪರ್ಕಿಸಿ ಸುಳ್ಯ ಮಂಡಲದ...
ಚೆಂಬು ಸಾಹಿತ್ಯ ವೇದಿಕೆ ವತಿಯಿಂದ ಆರನೇ ವರ್ಷದ ಎಂ .ಜಿ. ಕಾವೇರಮ್ಮ ರಾಜ್ಯ ಮಟ್ಟದ ಅರೆಭಾಷೆ ಕವನ ಸ್ಪರ್ದೆಗೆ ಕವಿತೆಗಳನ್ನು ಆಹ್ವಾನಿಸುತ್ತಿದ್ದೇವೆ. ಅರೆಭಾಷೆ ಸಾಹಿತ್ಯದಲ್ಲಿ ಗಮನಾರ್ಹ ಸಾಧನೆ ಮಾಡಿದಂತಹ ಮತ್ತು ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಸಾಹಿತ್ಯ ಸೇವೆಗಾಗಿ ಪಡೆದುಕೊಂಡ ಎಂ. ಜಿ. ಕಾವೇರಮ್ಮನವರಎಂಭತ್ತೈದನೆ ಹುಟ್ಟುಹಬ್ಬದ ಅಂಗವಾಗಿ ಚೆಂಬು ಸಾಹಿತ್ಯ ವೇದಿಕೆ...

All posts loaded
No more posts