Ad Widget

ಕೊಂಬಾರು ಸ.ಉ.ಹಿ.ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಚಿದಾನಂದ ಗೌಡ ನಿವೃತ್ತಿ

ಕಡಬ ತಾಲೂಕಿನ ಕೊಂಬಾರು ಸ.ಉ.ಹಿ.ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿ, ಶಿಕ್ಷಣ ಕ್ಷೇತ್ರದಲ್ಲಿ 34 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿರುವ ಚಿದಾನಂದ ಗೌಡರವರು ಮೇ.31ರಂದು ನಿವೃತ್ತರಾದರು. ಕಡಬ ತಾಲೂಕಿನ ಕೊಂಬಾರು ಗ್ರಾಮದ ಶ್ರೀಯುತ ಶಿವಣ್ಣ ಗೌಡ ಹಾಗೂ ಶ್ರೀಮತಿ ವೆಂಕಮ್ಮ ದಂಪತಿಗಳ ಪುತ್ರನಾಗಿ ದಿನಾಂಕ 01.06.1964 ರಂದು ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಕೊಂಬಾರು ಇಲ್ಲಿ...

ಆಲೆಟ್ಟಿ ಗ್ರಾ.ಪಂ. ಮಾಜಿ ಸದಸ್ಯ ಮಾಧವ ಕಲ್ಲೆಂಬಿ ನಿಧನ

ಆಲೆಟ್ಟಿ ಪಂಚಾಯತ್ ಮಾಜಿ ಸದಸ್ಯ ಕಲ್ಲೆಂಬಿ ಮಾಧವ ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಬೆಳಗ್ಗೆ ನಿಧನರಾದರು. ಅವರಿಗೆ 62 ವರ್ಷ ವಯಸ್ಸಾಗಿತ್ತು.ಇಂದು ಅವರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿ ದಾರಿ ಮಧ್ಯೆ ಕೊನೆಯುಸಿರೆಳೆದರೆನ್ನಲಾಗಿದೆ. ಮೃತರು ಪತ್ನಿ ಶ್ರೀಮತಿ ನಾಗವೇಣಿ, ಪುತ್ರರಾದ ಜೀವನ್, ಪುನೀತ್ ಮತ್ತು ಪುತ್ರಿ ಶ್ರೀಮತಿ ಪ್ರೀತಿ,...
Ad Widget

ಸುಳ್ಯ: ಸೈಂಟ್ ಬ್ರಿಜಿಡ್ಸ್ ಚರ್ಚ್ ನಲ್ಲಿ ಸಿಸ್ಟರ್ ಬಿನೋಮರಿಗೆ ಬೀಳ್ಕೊಡುಗೆ

ಸುಳ್ಯ ಸಂತ ಜೋಸೆಫ್ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಬಿನೋಮರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಜೂನ್ 2 ರಂದು ಸುಳ್ಯದ ಸೈಂಟ್ ಬ್ರಿಜಿಡ್ ಚರ್ಚ್ ನಲ್ಲಿ ನಡೆಯಿತು. ಆಂಧ್ರಪ್ರದೇಶದ ಗುಂಟೂರಿಗೆ ವರ್ಗಾವಣೆಗೊಂಡಿರುವ ಕಾರಣ ಇವರನ್ನು ಬೀಳ್ಕೊಡಲಾಯಿತು.ಭಾನುವಾರದ ಬಲಿಪೂಜೆಯ ನಂತರ ಚರ್ಚ್ ಧರ್ಮಗುರುಗಳಾದ ರೆ. ಫಾ. ವಿಕ್ಟರ್ ಡಿ. ಸೋಜಾ, ಪಾಲನಾ ಸಮಿತಿ ಉಪಾಧ್ಯಕ್ಷ ನವೀನ್ ಮಾಚಾದೊ, ಕಾರ್ಯದರ್ಶಿ...

“ಅಳಿಯುವ ಮುನ್ನ ಒಂದಿಷ್ಟು ಅಳಿಲಸೇವೆ” ಎನ್ನುವ ಧ್ಯೇಯವಾಕ್ಯದೊಂದಿಗೆ ರಕ್ತದಾನ, ನೇತ್ರದಾನ ಹಾಗೂ ಕೇಶದಾನದ ಜಾಗೃತಿ ಮೂಡಿಸುತ್ತಿರುವ “ಅಮೃತಗಂಗಾ ಸಮಾಜಸೇವಾ ಸಂಸ್ಥೆ”

2 ವರ್ಷಗಳಲ್ಲಿ 200ಕ್ಕೂ ಅಧಿಕ ಜನರಿಂದ ಕೇಶದಾನ ಹಾಗೂ ನೇತ್ರದಾನದ ಸಂಕಲ್ಪ ತಡರಾತ್ರಿ ಕರೆಮಾಡಿದರೂ ರಕ್ತದ ವ್ಯವಸ್ಥೆ, ಇಲ್ಲಿಯವರೆಗೆ ಸಾವಿರಾರು ಯುನಿಟ್ ರಕ್ತದ ಪೂರೈಕೆ ಸುಳ್ಯದಲ್ಲಿ ಕಳೆದ 9 ವರ್ಷಗಳ ಹಿಂದೆ ಪ್ರಾರಂಭಗೊಂಡ ಸಮಾಜಸೇವಾ ಸಂಸ್ಥೆಯೊಂದು “ಅಳಿಯುವ ಮುನ್ನ ಒಂದಿಷ್ಟು ಅಳಿಲಸೇವೆ” ಎನ್ನುವ ಧ್ಯೇಯವಾಕ್ಯದೊಂದಿಗೆ ರಕ್ತದಾನ, ನೇತ್ರದಾನ ಹಾಗೂ ಕೇಶದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ವಾಟ್ಸ್...

ಐವರ್ನಾಡು : ನಾಡಿಗೆ ಕಾಳಿಂಗ ಸರ್ಪವನ್ನು ಕಾಡಿಗೆ ಬಿಟ್ಟ ಮಾದೇಶ

ಐವರ್ನಾಡಿನ ಹಸಿಯಡ್ಕ ಸಮೀಪ ರಸ್ತೆ ಬದಿ ಇದ್ದ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಡಲಾಯಿತು. ಕೇಶವ ಹಸಿಯಡ್ಕರವರ ಮನೆಯ ಗೇಟ್‌ ಸಮೀಪ ರಸ್ತೆ ಬದಿ ಕಾಳಿಂಗ ಸರ್ಪವನ್ನು ನಿಡುಬೆ ಕಾಲೋನಿ ನಿವಾಸಿ ಮಾದೇಶ ಎಂಬವರು ಹಿಡಿದು ಕಾಡಿಗೆ ಕೊಂಡೊಯ್ದು ಬಿಡಲಾಯಿತು.

ಜೇಸಿಐ ವಲಯ ಮಧ್ಯಂತರ ಸಮ್ಮೇಳನ – ಜೇಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ಔಟ್ ಸ್ಟ್ಯಾಂಡಿಂಗ್ ಲೋ ಪ್ರೆಸಿಡೆಂಟ್ ರನ್ನರ್ ಪ್ರಶಸ್ತಿ

ವಿಟ್ಲ ದಲ್ಲಿ ಜೂ.02 ರಂದು ನಡೆದ ಜೇಸಿಐ ವಲಯ ಮಧ್ಯಂತರ ಸಮ್ಮೇಳನದಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ಹಲವು ಪ್ರಶಸ್ತಿ ಲಭಿಸಿದೆ. ಘಟಕಾಧ್ಯಕ್ಷ ಗುರುಪ್ರಸಾದ್ ನಾಯಕ್ ಇವರಿಗೆ ಯುವ ರತ್ನ ಪ್ರಶಸ್ತಿ,ರಜತ ಸಿಂಚನ ಪ್ರಶಸ್ತಿ, ಜೆಸಿ ಬೆಳ್ಳಿ ತಾರೆ ಪ್ರಶಸ್ತಿ, ಔಟ್ ಸ್ಟ್ಯಾಂಡಿಂಗ್ ಲೋ ಪ್ರೆಸಿಡೆಂಟ್ ರನ್ನರ್ ಪ್ರಶಸ್ತಿ ,ಜೇಸಿ ಮಿನುಗುತಾರೆ ಪ್ರಶಸ್ತಿ ಲಭಿಸಿದೆ. ಸುಳ್ಯ...

ಮಂಗಳೂರಿನಲ್ಲಿ ಗಣಕ ವಿಜ್ಞಾನ ಉಪನ್ಯಾಸಕರುಗಳಿಗೆ ತರಬೇತಿ ಕಾರ್ಯಾಗಾರ

ಮಂಗಳೂರು: ರಜೆಯಲ್ಲಿಯೂ ತಮ್ಮ ಸಮಯವನ್ನು ಬಿಡುವುಗೊಳಿಸಿ ಕಾರ್ಯಾಗಾರದಲ್ಲಿ ಉಪನ್ಯಾಸಕರು ಪಾಲ್ಗೊಂಡಿರುವುದು ಶ್ಲಾಘನೀಯ. ಇಂತಹ ಉಪನ್ಯಾಸಕರ ಕಾರ್ಯತತ್ಪರ ಕರ್ತವ್ಯವು ಜಿಲ್ಲೆಯ ದ್ವಿತೀಯ ಪಿಯುಸಿಯ ಫಲಿತಾಂಶ ಉನ್ನತ ಮಟ್ಟಕ್ಕೆ ಏರಿಕೆಯಾಗಲು ಭೂಷಣವಾಗಿದೆ.ಉಪನ್ಯಾಸಕರ ನಿಷ್ಠೆಯ ಶ್ರಮ ವಾರ್ಷಿಕ ಪರೀಕ್ಷಾ ಫಲಿತಾಂಶ ಉನ್ನತಿಗೆ ಅಡಿಗಲ್ಲಾಗಿದೆ.ವಿದ್ಯಾರ್ಥಿಗಳ ಭವಿಷ್ಯದ ಔನತ್ಯಕ್ಕೆ ಬೇಕಾದ ಸೂಕ್ತ ಮಾರ್ಗದರ್ಶನ ಮತ್ತು ಮಾಹಿತಿಗಳನ್ನು ಪಡೆಯಲು ಇಂತಹ ಕಾರ್ಯಾಗಾರಗಳು ಬುನಾದಿಯಾಗುತ್ತದೆ ಎಂದು...

ಸುಬ್ರಹ್ಮಣ್ಯ : ಹೆಡ್ ಕಾನ್‌ಸ್ಟೇಬಲ್ ನಾರಾಯಣ ಗೌಡ ಕಳಿಗೆ ನಿಧನ

ಸುಬ್ರಹ್ಮಣ್ಯ ಪೋಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಬಿಳಿನೆಲೆಯ ಚೇರು ನಿವಾಸಿ ನಾರಾಯಣ ಗೌಡ ಕಳಿಗೆ ಅವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಅವರ ಸ್ವಗೃಹದಲ್ಲಿ  ನಿಧನರಾದರು. 2023 ಸೆಪ್ಟೆಂಬರ್ ನಲ್ಲಿ ಬ್ರೈನ್ ಸ್ಟ್ರೋಕ್ ಆಗಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಮೃತರು ಪತ್ನಿ ಆರೋಗ್ಯ ಸಹಾಯಕಿ ಮಾಲತಿ, ಒರ್ವ ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಡಾ.ಪುನೀತ್ ಕುಮಾರ್ ಬೊಳುಗಲ್ಲು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಪ್ರಥಮ ಸ್ಥಾನ

ಯುಎಸ್ಎ ಯ ಲೂಸಿಯಾನ ಸ್ಟೇಟ್ ಯೂನಿವರ್ಸಿಟಿಯಲ್ಲಿ ನಡೆದ ಒಂಬತ್ತನೇ ವಾರ್ಷಿಕ ರೀಜನಲ್ ಸ್ಪೂಡೆಂಟ್ ಸ್ಕಾಲರ್ಸ್ ಫೋರಮ್ ನಲ್ಲಿ ಡಾ. ಪುನೀತ್ ಕುಮಾ‌ರ್ ಬೊಳುಗಲ್ಲುರವರು ಪ್ರಸ್ತುತಪಡಿಸಿದ " Optimizing Forensic Workflows: Crime Scene Documentation With Image Stiching Software" ಎಂಬ ವಿಷಯದ ಸಂಶೋಧನಾ ಪ್ರಬಂಧಕ್ಕೆ ಪ್ರಥಮ ಸ್ಥಾನ ಲಭಿಸಿದೆ. ಯುಎಸ್‌ಎ ಯ ಅಲ್ಕಾರ್ನ್ ಸ್ಟೇಟ್...

ಪೇರಾಲು : ಬೈಕ್ ಸ್ಕಿಡ್ – ಸವಾರರು ಅಪಾಯದಿಂದ ಪಾರು

ಪೇರಾಲು ಕುಕ್ಕೇಟಿ ಬಳಿ ಬೈಕ್ ಸ್ಕಿಡ್ ಆಗಿ ಮೆಸ್ಕಾಂ ಪವರ್ ಮ್ಯಾನ್ ಗಳಿಗೆ ಅಲ್ಪಸ್ವಲ್ಪ ಗಾಯಗಳಾದ ಘಟನೆ ಇಂದು ನಡೆದಿದೆ. ಲೈನ್ ದುರಸ್ತಿ ಮಾಡಿ  ಬರುತ್ತಿರುವಾಗ ಬೈಕ್ ಸ್ಕಿಡ್ ಆದ ಪರಿಣಾಮ ಪವರ್ ಮ್ಯಾನ್ ಗಳಾದ ಸಚಿನ್ ಮತ್ತು ಸದರ್ಶನ್ ಗಾಯಗೊಂಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
Loading posts...

All posts loaded

No more posts

error: Content is protected !!