- Monday
- April 21st, 2025

ಲೋಕಸಭಾ ಚುನಾವಣೆ ಸಂವಿಧಾನ , ಪ್ರಜಾತಂತ್ರದ ಗೆಲುವು - ಪಿ ಸಿ ಜಯರಾಮ್ ಸುಳ್ಯ: ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟವು ಈ ಬಾರಿಯ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದು ಕಾಂಗ್ರೆಸ್ ಈ ಹಿಂದೆ ಎರಡು ಭಾರಿಯು ಅಧಿಕೃತ ವಿಪಕ್ಷ ಸ್ಥಾನವನ್ನು ಉಳಿಸುವಲ್ಲಿ ವಿಫಲವಾಗಿತ್ತು ಆದರೆ ಈ ಭಾರಿ ತಮ್ಮ ಸಂಖ್ಯೆಯನ್ನು ಮೂರಂಕಿ ತಲುಪಲು ಸಾಧ್ಯವಾಗಿದೆ ಎಂದು...

ಸುಳ್ಯ ತಾಲೂಕು ಆಟೋ ಚಾಲಕರ ಸಂಘ (ರಿ.)B.M.S ಸಂಯೋಜಿತ ಕಲ್ಲುಗುಂಡಿ ಘಟಕದ ವಾರ್ಷಿಕ ಮಹಾಸಭೆ ವರದಿಯನ್ನು ಕಲ್ಲುಗುಂಡಿ ಘಟಕದ ಅಧ್ಯಕ್ಷರಾದ ಕೇಶವ ಬಂಗ್ಲೆಗುಡ್ಡೆ ಅವರ ಉಪಸ್ಥಿತಿಯಲ್ಲಿ ಸಂಘದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ರವಿಕುಮಾರ್ ನಿಡಿಂಜಿ ಅವರು ನೀಡಿದರು. ಸಂಘದ ವಾರ್ಷಿಕ ಲೆಕ್ಕಾಚಾರವನ್ನು ಖಜಾಂಜಿ ಕೃಷ್ಣಪ್ರಸಾದ್ ಕಾಪಿಲ ಅವರು ಮಂಡಿಸಿದರು. ನೂತನ ಅಧ್ಯಕ್ಷರು ಮತ್ತು ಪದಾಧಿಕರಿಗಳ ಪದಗ್ರಹಣ...

ಅರಣ್ಯ ಇಲಾಖೆಯ ಸಂಪಾಜೆ ವಲಯದ ವತಿಯಿಂದ ರಿಯಾಯಿತಿ ದರದಲ್ಲಿ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಿದೆ. ದಾಲ್ಚಿನ್ನಿ, ಮಹಾಗನಿ, ನೇರಳೆ, ಪೆರಳೆ, ಪುನರ್ಪುಳಿ, ರಕ್ತಚಂದನ, ತೇಗ, ಹೆಬ್ಬಲಸು, ಹಿಪ್ಪೆ, ಹೊಂಗೆ, ಮಹಾಗನಿ, ಪುನರ್ಪುಳಿ, ರಾಂಪತ್ರೆ, ರಂಜಲು ಹಾಗೂ ಇನ್ನಿತರ ಸಸಿಗಳನ್ನು ಪಡೆಯಬಹುದು. ರೈತರು ತಮ್ಮ ಪಹಣಿ ಪತ್ರ (ಆರ್.ಟಿ.ಸಿ), ಅಧಾರ್ ಕಾರ್ಡ್ ನಕಲು...

2024-25ನೇ ಸಾಲಿನಲ್ಲಿ ನವೋದಯ ಮತ್ತು ಮೊರಾರ್ಜಿ ಪ್ರವೇಶ ಪರೀಕ್ಷೆ ಬರೆಯಲಿಚ್ಚಿಸುವ ವಿದ್ಯಾರ್ಥಿಗಳಿಗೆ ಬೆಳ್ಳಾರೆ, ಸುಳ್ಯ ಮತ್ತು ಉಪ್ಪಿನಂಗಡಿಯಲ್ಲಿ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ವತಿಯಿಂದ ನವೋದಯ ತರಗತಿಗಳು ಜೂ.9ರಿಂದ ಆರಂಭಗೊಳ್ಳಲಿದೆ. ಪ್ರಸ್ತುತ 5ನೇ ತರಗತಿಯಲ್ಲಿ ಓದುತ್ತಿರುವ ಸರಕಾರಿ, ಖಾಸಗಿ, ಅನುದಾನಿತ ಶಾಲೆಯ ವಿದ್ಯಾರ್ಥಿಗಳು ಪ್ರತಿ ಆದಿತ್ಯವಾರ ಮತ್ತು ರಜಾ ದಿನಗಳಲ್ಲಿ ಈ ತರಬೇತಿ ಪಡೆಯಬಹುದು. ಜ್ಞಾನದೀಪ...

ತಾಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ಆಲೆಟ್ಟಿ ಸಾಮಾಜಿಕ ಅರಣ್ಯ ವಲಯ ಸುಳ್ಯ ಅಮರ ಸಂಘಟನಾ ಸಮಿತಿ (ರಿ.) ಸುಳ್ಯ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಡ್ಯಡ್ಕ, ಜೂನಿಯರ್ ರೆಡ್‌ಕ್ರಾಸ್ ಘಟಕ, ರೋಟರಿ ಸಂ. ಪ. ಪೂ. ಕಾಲೇಜ್ ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ಅಂತರಾಷ್ಟ್ರೀಯ ಜೀವ ವೈವಿಧ್ಯತಾ ದಿನದ ಪ್ರಯುಕ್ತ ವಿಶ್ವ ಪರಿಸರ ದಿನಾಚರಣೆ ...

ಮೈಸೂರು: ವಿಧಾನ ಪರಿಷತ್ ನ ನೈರುತ್ಯ ಪದವೀದರ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಧನಂಜಯ್ ಸರ್ಜಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಅವರು ತನ್ನ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರನ್ನು 24,111 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ಸರ್ಜಿ 37,627 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ 13,516 ಮತ ಪಡೆದರು....

ಒಬ್ಬ ವ್ಯಕ್ತಿಯ “ದೈಹಿಕ, ಮಾನಸಿಕ, ಬೌದ್ಧಿಕ ಹಾಗೂ ಸರ್ವತೋಮುಖ ಬೆಳವಣಿಗೆಗೆ ಸಮತೋಲಿತ, ಸುರಕ್ಷಿತ ಆಹಾರ ಅತೀ ಅಗತ್ಯ. ಬಹುತೇಕ ರೋಗಗಳನ್ನು ನಮ್ಮ ಜೀವನ ಶೈಲಿ ಮತ್ತು ಆಹಾರ ಪದ್ಧತಿಗಳನ್ನು ಸರಿಪಡಿಸಿ ಪ್ರಾರಂಭಿಕ ಹಂತದಲ್ಲಿಯೇ ತಡೆಯಬಹುದು. ಉತ್ತಮ ದೈಹಿಕ ವ್ಯಾಯಾಮ ಮತ್ತು ವಿಟಮಿನ್, ಪ್ರೋಟಿನ್, ಲವಣಾಂಶ, ಪೋಷಕಾಂಶ, ಶರ್ಕದ ಪಿಷ್ಠ ಮತ್ತು ನಾರುಯುಕ್ತ ಸಮತೋಲಿತ ಆಹಾರದಿಂದ ನೂರು...

ಬಳ್ಪ-ಗುತ್ತಿಗಾರು ರಸ್ತೆಯ ಕ್ರಾಸ್ ನಲ್ಲಿ ಅವೈಜ್ಞಾನಿಕ ರೀತಿಯಲ್ಲಿ ರಸ್ತೆ ಹಂಪ್ ಹಾಕಲಾಗಿದ್ದು , ಹಲವು ವಾಹನ ಸವಾರರು ಹಂಪ್ಸ್ ನಿಂದ ಸಮಸ್ಯೆ ಅನುಭವಿಸಿದ್ದಾರೆ. ಇದನ್ನು ಮನಗಂಡ ಸಾಮರಸ್ಯ ಸೇವಾ ಬಳಗ ಕಮಿಲ ಇದರ ಸದಸ್ಯರು ಉಬ್ಬು ರಸ್ತೆಗೆ ಸೂಚಕ ಬಣ್ಣ ಬಳಿದು ಮುಂದೆ ಸಾರ್ವಜನಿಕರಿಗೆ ಅಗಬಹುದಾದ ಅಪಾಯವನ್ನು ತಪ್ಪಿಸಲು ಪ್ರಯತ್ನಿಸಿದ್ದಾರೆ.

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ಜೂ .05ರಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಕಾಲೇಜಿನ ಮೂಲಿಕಾ ಉದ್ಯಾನವನದಲ್ಲಿ ಔಷಧೀಯ ಸಸ್ಯಗಳನ್ನು ನೆಡುವ ಮೂಲಕ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆಯ ಕುರಿತು ಕಾಲೇಜಿನ ಭೋದಕ ಬೋಧಕೇತರ ವೃಂದದವರಿಗೆ ಹಾಗೂ ರಾಷ್ಟ್ರೀಯ ಸೇವಾ ಯೋಜನಾ...

ಜೂ.06 ರ ಗುರುವಾರದಂದು ಸ.ಕಿ.ಪ್ರಾ ಶಾಲೆ ದೊಡ್ಡೇರಿ ಶಾಲೆಯಲ್ಲಿ ಮಕ್ಕಳಿಗೆ ಪುಸ್ತಕ ಲೇಖನಿ ಹಾಗೂ ಕೊಡೆ ಸಲಕರಣೆಗಳನ್ನು ವಿತರಿಸಲಾಯಿತು. ಶಾಲಾ ಮುಖ್ಯ ಗುರುಗಳಾದ ಕೃಷ್ಣಾನಂತ ಶರಳಾಯ ಇವರು ಶಾಲೆಯಲ್ಲಿ ದಾಖಲಾಗಿರುವಂತಹ ಎಲ್ಲಾ ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಖರ್ಚಿನಿಂದ ಉಚಿತವಾಗಿ ಪುಸ್ತಕ ಲೇಖನಿ ಹಾಗೂ ಕೊಡೆ ಸಲಕರಣೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್ ಬಿ.ಇ,...

All posts loaded
No more posts