- Monday
- April 21st, 2025

ಸುಳ್ಯ: ನವದೆಹಲಿಯಲ್ಲಿ ಸತತವಾಗಿ ಮೂರನೇ ಭಾರಿಗೆ ದೇಶದ ಪ್ರಧಾನ ಮಂತ್ರಿಗಳಾಗಿ ನರೇಂದ್ರ ದಾಮೋಧರ್ ದಾಸ್ ಮೋದಿ ಪದಗ್ರಹಣ ಹಿನ್ನಲೆಯಲ್ಲಿ ತಾಲೂಕಿನಾಧ್ಯಂತ ಸಂಭ್ರಮಾಚರಣೆಯನ್ನು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ನಡೆಸಲಾಯಿತು.ಸುಳ್ಯ ನಗರ ಶಕ್ತಿ ಕೇಂದ್ರದ ವತಿಯಿಂದ ಫೈಚಾರ್ ಸರ್ಕಲ್ ನಲ್ಲಿ ಸಂಭ್ರಮಾಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಮಂಡಲ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಕಂದಡ್ಕ,ದಾಮೋದರ...

ಪೆರುವಾಜೆ ಗ್ರಾಮದ ಪೆರುವಾಜೆ-ಮಠತ್ತಡ್ಕದಲ್ಲಿ ಹಾದು ಹೋಗುವ ವಿದ್ಯುತ್ ಲೈನಿಗೆ ತಾಗಿಕೊಂಡಿರುವ ಮರಗಳನ್ನು ಶೌರ್ಯ ವಿಪತ್ತು ತಂಡದಿಂದ ಜೂ.09ರಂದು ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಸದಸ್ಯರುಗಳಾದ ರಮೇಶ್ ಮಠತ್ತಡ್ಕ, ಶೇಷಪ್ಪ ಮಠತ್ತಡ್ಕ, ಸುಂದರ ನಾಯ್ಕ್, ನಾರಾಯಣ ಮಠತ್ತಡ್ಕ, ರಾಜೇಶ್ ಮಠತ್ತಡ್ಕ, ಪುರುಷೋತ್ತಮ್ ನಾಯ್ಕ್ , ವೆಂಕಪ್ಪ ನಾಯ್ಕ, ಸೀತಾರಾಮ ಆಚಾರ್ಯ,ಯಶವಂತ್, ರಾಜೇಶ್ ಸಾರಕರೆ, ಲೈನ್ ಮಾನ್ ವಸಂತ...

ಸುಬ್ರಹ್ಮಣ್ಯ ,ಜೂನ್ 9: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಇಂದು ರವಿವಾರ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವಟಾರದಲ್ಲಿ ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು. ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆಶ್ರೀ ಸುಬ್ರಹ್ಮಣ್ಯ ಲೀಜನ್ ಹಾಗೂ ರವಿಕಕ್ಕೆ ಪದವು ಸಮಾಜ ಸೇವ ಟ್ರಸ್ಟ್ ವತಿಯಿಂದ ಜಂಟಿಯಾಗಿ ಕಾರ್ಯಕ್ರಮ...

ಸುಳ್ಯ: ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇನಾಲ ಎಂಬಲ್ಲಿ ಅಶಕ್ತ ಕುಟುಂಬವನ್ನು ಗುರುತಿಸಿ ಮನೆ ನಿರ್ಮಿಸಿ ಹಸ್ತಾಂತರ ಕಾರ್ಯಕ್ರಮವು ನಡೆಯಿತು. ಅಜ್ಜಾವರ ಗ್ರಾಮದ ಮೇನಾಲ ಬಾಡೇಲು ಎಂಬಲ್ಲಿ ಅಶಕ್ತ ವ್ಯಕ್ತಿಯೋರ್ವರು ಕೇವಲ ಟರ್ಪಲ್ ಸಹಾಯದಲ್ಲಿ ಎರಡು ಕೋಲು ಕಟ್ಟಿಕೊಂಡು ವಾಸಿಸುತ್ತಿರುವುದನ್ನು ಕಂಡ ಮೇನಾಲ ಕಾಂಗ್ರೆಸ್ ಮುಖಂಡರಾದ ಪ್ರಸಾದ್ ರೈ ಮೇನಾಲ ಮತ್ತು ಜಿಲ್ಲಾ ಗ್ಯಾರಂಟಿ ಅನುಷ್ಠಾನ...

ಸುಳ್ಯ:ಪಾಟಾಳಿಯಾನೆ ಗಾಣಿಗ ಸಮಾಜ ಸೇವಾ ಸಂಘ ರಿ ಸುಳ್ಯ ಇದರ ವಾರ್ಪಿಕ ಮಹಾಸಭೆ ಮತ್ತು ಸತ್ಯನಾರಾಯಣ ಪೂಜಾ ಕಾರ್ಯಕ್ರಮವು ದಿನಾಂಕ 16/06/24ರಂದು ನಡೆಯಲಿದ್ದು ವಾರ್ಷಿಕ ಮಹಾಸಭೆ ಮತ್ತು ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯು ದಿನಾಂಕ 02/06/24ರಂದು ಸಂಧ್ಯಾರಶ್ಮಿ ಸಭಾಭವನದಲ್ಲಿ ಬಿಡುಗಡೆ ಗೊಳಿಸಲಾಯಿತು. ಸಂಘವು ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಪೂರ್ವಾಭಾವಿ ಸಭೆ...

ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಸುಮಾರು 13 ವರ್ಷಗಳ ಕಾಲ ಗ್ರಂಥಾಲಯ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಕಂದಾಯ ಇಲಾಖೆಯಲ್ಲಿ ಗ್ರಾಮ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಧಾಕೃಷ್ಣರವರನ್ನು ಜೂ.01 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರ ಸಂಘ ಸುಳ್ಯ ಶಾಖೆಯ 2024-25ನೇ ಸಾಲಿನ...

"ಕನ್ನಡ ಮಾಧ್ಯಮ ಎಂಬ ಅಳುಕು ಬಿಟ್ಟು ಬಿಡಿ, P-Q-R-S -T ಸೂತ್ರವನ್ನು ಪಾಲಿಸಿ, ಓದುವಿಕೆಯಲ್ಲಿ ಕಠಿಣ ಶ್ರಮ ಅಗತ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ, ಉತ್ತಮ ಸಂಸ್ಕಾರಗಳನ್ನೂ ರೂಢಿಸಿಕೊಳ್ಳಿ" ಹೀಗೆಂದು ಡಾ| ರಾಧಿಕಾ.ಡಿ, ಬಾಳಿಲ ವಿದ್ಯಾಬೋಧಿನೀಹಿರಿಯ ವಿದ್ಯಾರ್ಥಿ ಹಾಗೂ ಅರಿವಳಿಕೆ ಮತ್ತು ನೋವು ನಿವಾರಣಾ ತಜ್ಞೆ, ಮೈಸೂರು ಇವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ...

ಪ್ರಧಾನಿ ನರೇಂದ್ರ ಮೋದಿಯವರ ಏಕಾದಿಪತ್ಯ,ದುರಹಂಕಾರ, ಸ್ವಜನಾ ಪಕ್ಷಪಾತ ದುರಾಡಳಿತದಿಂದಾಗಿ ಮತದಾರರು ಈ ಬಾರಿಯ ಲೋಕ ಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡಲಿಲ್ಲ ಕೇಂದ್ರದ ನರೇಂದ್ರ ಮೋದಿಯವರಿಗೆ ಈ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಿದ್ದಾರೆಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಹೇಳಿದ್ದಾರೆ. ಮೋದಿಯವರು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮುಸ್ಲಿಂಮರ ಮೀಸಲಾತಿ...

ತೆಕ್ಕಿಲ್ ಆಂಗ್ಲ ಮಾಧ್ಯಮ ಶಾಲೆ, ಗೂನಡ್ಕ. ಇಲ್ಲಿ 2024-25 ರ ಶೈಕ್ಷಣಿಕ ವರ್ಷಕ್ಕೆ ಪ್ರಜಾಪ್ರಭುತ್ವದ ಮಾದರಿಯಲ್ಲಿ "ವಿದ್ಯಾರ್ಥಿ ಶಾಲಾ ಸಂಸತ್ತು" ಚುನಾವಣೆ ನಡೆಯಿತು. ಫಾತಿಮತ್ ಶಬ್ನಂ (ಶಾಲಾ ವಿದ್ಯಾರ್ಥಿ ನಾಯಕಿ) ನಿಹಾದ್ (ಶಾಲಾ ವಿದ್ಯಾರ್ಥಿ ಉಪ ನಾಯಕ) ಶಾಲಾ ವಿದ್ಯಾರ್ಥಿ ನಾಯಕಿಯಾಗಿ ಫಾತಿಮಾತ್ ಶಬ್ನಂ, ಶಾಲಾ ವಿದ್ಯಾರ್ಥಿ ಉಪನಾಯಕನಾಗಿ ನಿಹಾದ್, ನೀರಾವರಿ ಮಂತ್ರಿಯಾಗಿ ಮುಬೀನ್ ಹಾಗೂ ...

All posts loaded
No more posts