Ad Widget

ಎನ್.ಎಂ.ಎಂ.ಎಸ್ ಪರೀಕ್ಷೆಯಲ್ಲಿ ಪೂಜಾ.ಬಿ.ಎನ್ ತೇರ್ಗಡೆ

ಸರಕಾರಿ ಪ್ರೌಢಶಾಲೆ ಮರ್ಕಂಜ ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಪೂಜಾ.ಬಿ.ಎನ್ 2023-24ನೇ ಸಾಲಿನಲ್ಲಿ ನಡೆದ ಎನ್.ಎಂ.ಎಂ.ಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಎನ್.ಎಂ.ಎಂ.ಎಸ್ ಸ್ಕಾಲರ್ಶಿಪ್ ಪಡೆಯಲು ಅರ್ಹತೆ ಪಡೆದಿರುತ್ತಾರೆ.ಇವರು ಮರ್ಕಂಜ ಗ್ರಾಮದ ನಿತ್ಯಾನಂದ ಭೀಮಗುಳಿ ಹಾಗೂ ಶ್ರೀಮತಿ ಚಿತ್ರಾವತಿ ದಂಪತಿಗಳ ಪುತ್ರಿ

ಸುಳ್ಯ : ತಾಲೂಕಿನ ಒಕ್ಕೂಟದ ಅಧ್ಯಕ್ಷರುಗಳ ಕೇಂದ್ರ ಸಮಿತಿಯ ಸಭೆ

ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿಟ್ರಸ್ಟ್ (ರಿ.) ಸುಳ್ಯ ತಾಲೂಕಿನ ಒಕ್ಕೂಟ ಅಧ್ಯಕ್ಷರುಗಳ ಸಭೆಯನ್ನು ಕೇಂದ್ರ ಸಮಿತಿಯ ಅಧ್ಯಕ್ಷರಾದ ಸುರೇಶ್ಕಣೆಮರಡ್ಕರವರ ಅಧ್ಯಕ್ಷತೆಯಲ್ಲಿ ಸುಳ್ಯ ಯೋಜನಾ ಕಛೇರಿಯ ಸಭಾಂಗಣದಲ್ಲಿ ನಡೆಯಿತು. ಕರಾವಳಿ ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕರಾದ ಶ್ರೀದುಗ್ಗೇಗೌಡರವರು ದೀಪಬೆಳಗಿಸಿ ಉದ್ಘಾಟನೆಯನ್ನು ಮಾಡಿ ಮಾತನಾಡುತ್ತ, ಗ್ರಾಮಾಭಿವೃಧ್ಧಿಯೋಜನೆಯು 1982 ರಲ್ಲಿ ಆರಂಭವಾಗಿದ್ದು, ಯೋಜನೆಯ ಪ್ರಾರಂಭಕ್ಕೆ ಮೊದಲು ಸದಸ್ಯನ ಸ್ಥಿತಿಗತಿ...
Ad Widget

ಪೂಜಾರಿಮನೆ ಗಂಗಾಧರ ಗೌಡ ನಿಧನ

ಅರಂತೋಡು ಗ್ರಾಮದ ಕಿರ್ಲಾಯ ಪೂಜಾರಿಮನೆ ಗಂಗಾಧರ ಗೌಡ ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಇಂದು ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಪ್ರೇಮ ಕುಮಾರಿ, ಪುತ್ರರಾದ ವಿನೋದ್, ದೀಪಕ್ ಹನೀತ್, ದರ್ಶನ್ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಮರ್ಕಂಜದಿಂದ ತೇರ್ಥಮಜಲು ವರೆಗೆ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ವಿಸ್ತರಣೆ

ಸುಳ್ಯದಿಂದ ಅರಂತೋಡು ಮಾರ್ಗವಾಗಿ ಮರ್ಕಂಜ ವರೆಗೆ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ಸನ್ನು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ತೇರ್ಥಮಜಲು ವರೆಗೆ ವಿಸ್ತರಣೆ ಮಾಡಲಾಗಿದೆ. ಬೆಳಿಗ್ಗೆ 7.45 ಕ್ಕೆ ಮರ್ಕಂಜದಿಂದ ಹೊರಟು ತೇರ್ಥಮಜಲು - ಮರ್ಕಂಜ - ಅಡ್ತಲೆ-ಅರಂತೋಡು ಮಾರ್ಗವಾಗಿ ಸುಳ್ಯಕ್ಕೆ ಸಂಚರಿಸಲು ಸಾರಿಗೆ ಇಲಾಖೆಯ ಅಧಿಕಾರಿಗಳು ಸೂಚಿಸಿರುತ್ತಾರೆ.

ಮೇನಾಲ : ಶ್ರಿಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾಗಿ ಬಾಲಕೃಷ್ಣ ಪಿ ಎಸ್ – ಕಾರ‍್ಯದರ್ಶಿಯಾಗಿ ದಿವಿತಾ ನಯನ್ – ಖಜಾಂಜಿಯಾಗಿ ಕಿರಣ್ ರೈ

ಶ್ರಿಕೃಷ್ಣ ಭಜನಾ ಮಂದಿರ ಮೇನಾಲ ಇದರ ವಾರ್ಷಿಕ ಮಹಾಸಭೆಯು ಭಜನಾ ಮಂದಿರದ ಸಭಾಂಗಣದಲ್ಲಿ ಜೂ-೯ರಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಭಜನಾ ಮಂದಿರದ ನಿಕಟಪೂವಾಧ್ಯಕ್ಷರಾದ ಪ್ರಭೋದ್ ಶೆಟ್ಟಿ ಮೇನಾಲ ವಹಿಸಿದ್ದರು. ವೇದಿಕೆಯಲ್ಲಿ ಭಜನಾ ಮಂದಿರದ ಕರ‍್ಯದರ್ಶಿ ಸುಕುಮಾರ ಕಲ್ಲಗುಡ್ಡೆ ಹಾಗೂ ಹಿರಿಯರಾದ ಕಿಟ್ಟಣ್ಣ ರೈ ಇರಂತಮಜಲು ಉಪಸ್ಥಿತರಿದ್ದರು. ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಬಾಲಕೃಷ್ಣ ಪಿ...

ಕರ್ನಾಟಕ ಅಲ್ಪಸಂಖ್ಯಾತ ಆಯೋಗ ನೂತನ ಅಧ್ಯಕ್ಷರಾಗಿ ನೇಮಕಗೊಂಡ ನಿಸಾರ್ ಅಹ್ಮದ್ ಐ. ಪಿ.ಎಸ್ ರವರಿಗೆ ಸುಳ್ಯದ ಪ್ರಮುಖ ನಾಯಕರಿಂದ ಅಭಿನಂದನೆ

ಇತ್ತೀಚೆಗೆ ಕರ್ನಾಟಕ ಸರಕಾರದಿಂದ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿ ಇತ್ತೀಚೆಗೆ ನೇಮಕಗೊಂಡು ಅಧಿಕಾರ ಸ್ವೀಕರಿಸಿದ ನಿವೃತ್ತ ಐ. ಪಿ. ಎಸ್ ಅಧಿಕಾರಿ ನಿಸಾರ್ ಅಹ್ಮದ್ ರವರನ್ನು ಬೆಂಗಳೂರಿನ ಕೆಎಂಡಿಸಿ ಭವನ ದಲ್ಲಿ ಭೇಟಿಯಾದ ಸುಳ್ಯದ ಪ್ರಮುಖ ನಾಯಕರು ನಿಸಾರ್ ಅಹ್ಮದ್ ರವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿಸಾರ್ ಅಹ್ಮದ್ ರವರು ದ. ಕ. ಜಿಲ್ಲೆಗೆ...

ವಸತಿ ಶಾಲೆಗಳ 7 ಮತ್ತು 8ನೇ ತರಗತಿಯಲ್ಲಿ ಖಾಲಿ ಉಳಿದ ಸ್ಥಾನಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ನೆಲ್ಲಿತೀರ್ಥ, ಗುರುಪುರ ಮೂಡಬಿದ್ರೆಯ ಕಲ್ಲಬೆಟ್ಟು, ಮೂಲ್ಕಿಯ ಕಮ್ಮಾಜೆ, ಬೆಳ್ತಂಗಡಿಯ ಮಚ್ಚಿನ, ಮುಂಡಾಜೆ, ಹೊಸಂಗಡಿ ಬಂಟ್ವಾಳದ ವಗ್ಗ, ಪುಂಜಾಲಕಟ್ಟೆ ಪುತ್ತೂರಿನ ಬಲ್ನಾಡು, ಉಪ್ಪಿನಂಗಡಿ ಹಾಗೂ ಸುಳ್ಯದ ಪಂಜ ಮೊರಾರ್ಜಿ ದೇಸಾಯಿ/ ಡಾ. ಬಿ. ಆರ್. ಅಂಬೇಡ್ಕರ್/ ಇಂದಿರಾ ಗಾಂಧಿ/ನಾರಾಯಣ ಗುರು ವಸತಿ ಶಾಲೆಗಳಿಗೆ 2024-25ನೇ ಶೈಕ್ಷಣಿಕ ಸಾಲಿನಲ್ಲಿ 7 ಮತ್ತು 8ನೇತರಗತಿಯಲ್ಲಿ...

ಬೆಳ್ಳಾರೆ : ಪ್ರೀತಿಸಿ ವಂಚನೆಗೆ ಯತ್ನ – ಯುವಕನ ವಿರುದ್ಧ ದೂರು ನೀಡಿದ ಯುವತಿ

ಯುವಕನೋರ್ವ ಕಳೆದೆರಡು ವರ್ಷಗಳಿಂದ ತನ್ನನ್ನು ಪ್ರೀತಿಸಿ ಇದೀಗ ಸಂಪರ್ಕಕ್ಕೆ ಸಿಗದೇ ವಂಚಿಸಿ ನಾಪತ್ತೆಯಾಗಿದ್ದಾನೆ ಎಂದು ಯುವತಿಯೋರ್ವಳು ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ನೀಡಿದ ಘಟನೆ ವರದಿಯಾಗಿದೆ. ಎಣ್ಮೂರು ಗ್ರಾಮದ ನಿಂತಿಕಲ್ಲು ಕಾಲನಿ ನಿವಾಸಿ ಅಶ್ವಿತ್ ಎಂಬ ಯುವಕ ಹಾಗೂ ಬೆಳ್ಳಾರೆ ಮೂಲದ ಯುವತಿ ಪರಸ್ಪರ ಕಳೆದೆರಡು ವರ್ಷಗಳಿಂದ ಪ್ರೀತಿಸುತ್ತಿದ್ದರೆನ್ನಲಾಗಿದೆ. ಇದೀಗ ಫೋನ್ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿರುವುದಾಗಿ...

ಸುಳ್ಯ: ಶಾಸಕಿ ಕು. ಭಾಗೀರಥಿ ಮುರುಳ್ಯ ಸೋಮವಾರ ಮಂಗಳವಾರ ಕಛೇರಿಯಲ್ಲಿ ಲಭ್ಯ

ಸುಳ್ಯ: ಸುಳ್ಯ ಶಾಸಕರು ಪ್ರತಿ ಸೋಮವಾರ ಸುಳ್ಯ ತಾಲ್ಲೂಕು ಪಂಚಾಯತ್‌ ನ ತಮ್ಮ ಕಛೇರಿಯಲ್ಲಿ ಮತ್ತು ಪ್ರತಿ ಮಂಗಳವಾರ ಕಡಬ ಮಿನಿವಿಧಾನ ಸೌಧ ಕಛೇರಿಯಲ್ಲಿ ಬೆಳಗ್ಗೆ 10ರಿಂದ ಸಂಜೆ 3ಗಂಟೆಯವರೆಗೆ  ಸಾರ್ವಜನಿಕರಿಗೆ ತಮ್ಮ ಕುಂದು ಕೊರತೆಗಳನ್ನು ಆಲಿಸಲು ಕಛೇರಿಯಲ್ಲಿ ಲಭ್ಯರಿದ್ದಾರೆ ಎಂದು ಶಾಸಕರ ಕಛೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

KPS ಶಾಲೆ ಗಾಂಧಿನಗರ ಸುಳ್ಯ ಇಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಶಾಸಕರು ಭಾಗಿ

ಸುಳ್ಯ ಗಾಂಧಿನಗರದ ಕೆಪಿಎಸ್ ಶಾಲೆಯಲ್ಲಿ ಇಂದು ವಿವಿಧ ಕಾರ್ಯಕ್ರಮಗಳಲ್ಲಿ  ಸುಳ್ಯ ವಿಧಾನ ಸಭಾಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ  ಭಾಗವಹಿಸಿದರು.ಕೋಟೆ ಫೌಂಡೇಶನ್ ವತಿಯಿಂದ ಕೊಡಲ್ಪಟ್ಟ ಡೆಸ್ಕ್ ಮತ್ತು ಬೆಂಚುಗಳನ್ನು ಮತ್ತು ಸರಕಾರದ ಅನುದಾನದಿಂದ ರಚಿಸಿದ‌ ಸುಸಜ್ಜಿತ ಗಣಕಯಂತ್ರ ವಿಭಾಗ ಹಾಗೂ 2023-2024ರಲ್ಲಿ ಹತ್ತನೆತರಗತಿಯಲ್ಲಿ ವಿಶಿಷ್ಟ ಸಾಧನೆಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನ ಕಾರ್ಯಕ್ರಮವನ್ನು ಉದ್ಘಾಟಿಸಿದರು.ನಂತರ ಮಾತನಾಡಿದ ಶಾಸಕರು  ಹಿಂದಿನ ಕಾಲದಲ್ಲಿ...
Loading posts...

All posts loaded

No more posts

error: Content is protected !!