- Monday
- April 21st, 2025
ಮುಡ್ನೂರು ಮರ್ಕಂಜ ಶಾಲೆಯ ಶಿಕ್ಷಕಿಯೊಬ್ಬರು ತರಗತಿಯಲ್ಲಿ ಚೇಷ್ಟೆ ಮಾಡುತ್ತಿದ್ದ ಎಲ್ಲಾ ಮಕ್ಕಳಿಗೆ ಹೊಡೆದಿದ್ದರೆನ್ನಲಾಗಿದೆ. ಪರಿಣಾಮವಾಗಿ ವಿದ್ಯಾರ್ಥಿಯೊರ್ವಳ ಅಂಗೈಯಲ್ಲಿ ರಕ್ತ ಕಂದು ಹೋಗಿರುವುದನ್ನು ಕಂಡು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಲ್ಲದೆ, ಶಿಕ್ಷಕಿ ಮೇಲೆ ಪೋಲೀಸ್ ದೂರು ನೀಡಿದ ಘಟನೆ ಜೂ.13 ರಂದು ವರದಿಯಾಗಿದೆ.

ಪ್ರತಿ ವರ್ಷ ಜೂನ್ 14 ರಂದು “ವಿಶ್ವ ರಕ್ತದಾನಿಗಳ ದಿನ” ಎಂದು ಆಚರಿಸಲಾಗುತ್ತದೆ. ಈ ಆಚರಣೆಯ ಉದ್ದೇಶ ಏನೆಂದರೆ ಪ್ರತಿಯೊಬ್ಬರೂ ಇದರಿಂದ ಪ್ರೇರಿತರಾಗಿ ಹೆಚ್ಚು ಹೆಚ್ಚು ಜನರು ರಕ್ತದಾನಕ್ಕೆ ಪ್ರೇರಣೆಗೊಳ್ಳಬೇಕೆಂಬುದು ನಮ್ಮೆಲ್ಲರ ಆಶಯ.ಜಗತ್ತಿನ ಅತೀ ದೊಡ್ಡ ಸಂಶೋಧನೆ ಎಂದರೆ, ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು...

ಪೊಲೀಸರು ಸಮಾಜದ ಸ್ವಾಸ್ಥ್ಯ ಕಾಪಾಡುವ ದೊಡ್ಡ ಹೊಣೆಗಾರಿಕೆ ಹೊಂದಿರುವವರು, ಅವರ ಬಗ್ಗೆ ಭಯ ಬೇಡ ಅವರನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಬೆಳ್ಳಾರೆ ಠಾಣೆಯ ಉಪ ನಿರೀಕ್ಷಕರಾದ ಶ್ರೀ ಸಂತೋಷ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಇಂದು (ಜೂ.13) ನಡೆದ ತೆರೆದ ಮನೆ ಕಾರ್ಯಕ್ರಮದಲ್ಲಿ JJ Act , wepons, ಬಂದೀಖಾನೆ, ಸಂಚಾರಿ ನಿಯಮ, ಫೋಕ್ಸ್ ಮತ್ತು...

ಕುರುಂಜಿ ಗುಡ್ಡೆಯಲ್ಲಿ ಕುಮಾರ ಎಂಬವರ ಮನೆಯ ಬಳಿ ಕುಡಿಯುವ ನೀರಿನ ಪೈಪ್ ಕಾಮಗಾರಿಯ ವೇಳೆ ರಸ್ತೆ ಬದಿಯ ಬರೆಯ ಮಣ್ಣು ತೆಗೆದಿದ್ದು ಎರಡು ಮರಗಳು ವಿದ್ಯುತ್ ಲೈನ್ ಮೇಲೆ ಬಾಗಿ ನಿಂತಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.. ಆದ್ದರಿಂದ ಇದನ್ನು ಆದಷ್ಟು ಶೀಘ್ರ ತೆರವುಗೊಳಿಸಲು ಸ್ಥಳೀಯರು ಆಗ್ರಹಿಸಿರುತ್ತಾರೆ.

ಗುತ್ತಿಗಾರು :ನಿವೇದಿತಾ ಸಂಚಾಲನಾ ಸಮಿತಿ ಇದರ ಗುತ್ತಿಗಾರು ಗ್ರಾಮ ಸಮಿತಿ ಇತ್ತೀಚೆಗೆ ರಚನೆಗೊಂಡಿತು. ಸಂಚಾಲಕರಾಗಿ ಶ್ರೀಮತಿ ವಿನುತಾ ಪ್ರಶಾಂತ್ ಜಾಕೆ ಹಾಗೂ ಸಹ ಸಂಚಾಲಕರಾಗಿ ಶ್ರೀಮತಿ ಅನಿತಾ ನವೀನ್ ಪೈಕ ಆಯ್ಕೆಯಾದರು, ಸದಸ್ಯರುಗಳಾಗಿ ಮಹಾದೇವಿ ಕಿಶೋರ್ ಕುಮಾರ್ ಪೈಕ, ಶ್ರೀಮತಿ ಶಿಸಿಮಾ ಜಿತೇಶ್ ಜಾಕೆ, ಶ್ರೀಮತಿ ದಿವ್ಯ ಪುರಂದರ ಬಾಕಿಲ,ಶ್ರೀಮತಿ ಪ್ರತಿಮಾ ಜಗದೀಶ್ ಗುತ್ತಿಗಾರು, ಶ್ರೀಮತಿ...

ನಿಂತಿಕಲ್ಲಿನ ಎಣ್ಮೂರು ಶ್ರೀರಾಮ್ ಕಾಂಪ್ಲೆಕ್ಸ್ ನಲ್ಲಿ ಪ್ರತಿ ಶನಿವಾರ ಮದ್ಯಾಹ್ನ 1:30 ರಿಂದ 3:30 ರ ವರೆಗೆ ಕಿಡ್ಸ್ ಪ್ಲಾಟ್ ಫಾರ್ಮ್ ನೃತ್ಯ ತರಗತಿ, ರೂಪಕ, ಜನಪದ ನೃತ್ಯ ಹಾಗೂ ಸಂಜೆ 4 ರಿಂದ 6 ರ ವರೆಗೆ ಅಭಿನಯ ರಂಗ ತರಬೇತಿ ನಡೆಯಲಿದೆ. ನಿಂತಿಕಲ್ಲು ಪರಿಸರದ ಆಸಕ್ತ ವಿದ್ಯಾರ್ಥಿಗಳು ದಾಖಲಾಗಬಹುದು. ಹೆಚ್ಚಿನ ಮಾಹಿತಿಗೆ 9686714517...

ಸುಳ್ಯ: ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪ್ರವೀಣ್ ಕುಮಾರ್ ರವರ ನೃತ್ಯ ತರಬೇತಿ ಶಿಕ್ಷಕಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗುತ್ತಿದ್ದು ಇದೀಗ ಈ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗುತ್ತಿದೆ. ನಾನು ಅಧ್ಯಕ್ಷ ನನ್ನದೇ ಈ ಕಟ್ಟಡ ಎಂಬೆಲ್ಲ ಮಾತುಗಳನ್ನು ಆಡುತ್ತಾ ಮಹಿಳೆಯನ್ನು ಅವಾಚ್ಯವಾಗಿ ನಿಂದಿಸುತ್ತಿದ್ದು ಈ ವೀಡಿಯೋ ಇದೀಗ ವೈರಲ್...

ಸುಳ್ಯ: ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪ್ರವೀಣ್ ಕುಮಾರ್ ರವರ ನೃತ್ಯ ತರಬೇತಿ ಶಿಕ್ಷಕಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗುತ್ತಿದ್ದು ಇದೀಗ ಈ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗುತ್ತಿದೆ. https://youtu.be/EGxqWMRjPDk?si=Qn6Kpab_WySLRzV- ನಾನು ಅಧ್ಯಕ್ಷ ನನ್ನದೇ ಈ ಕಟ್ಟಡ ಎಂಬೆಲ್ಲ ಮಾತುಗಳನ್ನು ಆಡುತ್ತಾ ಮಹಿಳೆಯನ್ನು ಅವಾಚ್ಯವಾಗಿ ನಿಂದಿಸುತ್ತಿದ್ದು ಈ ವೀಡಿಯೋ ಇದೀಗ...
ಸುಳ್ಯ: ಇತ್ತೀಚೆಗೆ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿ ಮುಳುಗೆದ್ದ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ದೇವರಿಗೆ ದೃಢ ಕಲಶಾಭಿಶೇಕ ಸೇವೆ ಜೂನ್ 16-17 ರಂದು ನಡೆಯಲಿದೆ. ಪೂರ್ವ ಸಂಪ್ರದಾಯದಂತೆ ನಡೆಯುವ ಈ ದೃಢ ಕಲಶಾಭಿಶೇಕದ ವಿಧಿ ವಿಧಾನಗಳು ಕುಂಟಾರು ಶ್ರೀ ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ನೆರವೇರಲಿದೆ. ಜೂ.16 ರ ಭಾನುವಾರ ಸಂಜೆ 6...

ಪಂಜ ಶ್ರೀ ಪರಿವಾರ ಪಂಚಲಿoಗೇಶ್ವರ ದೇವಸ್ಥಾನಕೆ ಹೋಗುವ ರಸ್ತೆಯಲ್ಲಿ ಇದ್ದ ಕೆಸರನ್ನು ಶ್ರಮದಾನ ಹಾಗೂ ಜೆಸಿಬಿ ಮೂಲಕ ಸರಿ ಮಾಡಲಾಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರು, ಕಲ್ಮಡ್ಕ ಗ್ರಾ.ಪಂ. ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕಲ, ವ್ಯವಸ್ಥಾಪ ಸಮಿತಿ ಸದಸ್ಯರಾದ ಸಂತೋಷ್ ಕುಮಾರ್ ರೈ, ಧರ್ಮಣ್ಣ ನಾಯ್ಕ ಗರಡಿ, ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯರಾದ ರಜಿತ್...

All posts loaded
No more posts