- Sunday
- April 20th, 2025

ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಸ್ವಸ್ಥವೃತ್ತ ವಿಭಾಗ, ಹಾಗೂ ಆಯುಷ್ ಇಲಾಖೆ ಮಂಗಳೂರು ಇದರ ಸಹಯೋಗದೊಂದಿಗೆ 10ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ.21ರಂದು ಆಚರಿಸಲಾಯಿತು. ಡಾ. ಚಿದಾನಂದ ಕೆ. ವಿ. ಅಧ್ಯಕ್ಷರು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ, ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ...

ಬೆಂಗಳೂರಿನಲ್ಲಿ ನಡೆಯಲಿರುವ ವಾರದ ಸಭೆಗೆ ತೆರಳುವ ವೇಳೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಸಕಲೇಶಪುರದಲ್ಲಿ ನಡೆದ ಆರೋಗ್ಯಕ್ಕಾಗಿ ಯೋಗ ಶಿಬಿರ ಕಾರ್ಯಕ್ರಮದಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ಭಾಗವಹಿಸಿ ಯೋಗಾ ಅಭ್ಯಾಸ ನಡೆಸಿದರು. ಈ ಸಂದರ್ಭದಲ್ಲಿ ಶಾಸಕರನ್ನು ವರ್ತಕರ ಸಂಘದ ಮತ್ತು ಯೋಗ ಚೈತನ್ಯ ಶಿಬಿರದ ವತಿಯಿಂದ ಗೌರವಿಸಿದರು.ಸಕಲೇಶಪುರ ತಾಲ್ಲೂಕು ಬಿಜೆಪಿ...

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಎಪಿಎಂಸಿ ಸುಳ್ಯ, ಪಯಸ್ವಿನಿ ಯುವಕ ಮಂಡಲ ಕೇರ್ಪಳ ಇದರ ಆಶ್ರಯದಲ್ಲಿ ಸುಳ್ಯ ಎಪಿಎಂಸಿ ಸಭಾಂಗಣದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಯೋಗಾಭ್ಯಾಸ ಒಂದು ದಿನಕ್ಕೆ ಸೀಮಿತ ಆಗಬಾರದು. ನಿರಂತರ ಯೋಗ ಅಭ್ಯಾಸದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ವೃದ್ಧಿ ಆಗುತ್ತದೆ ಎಂದು ಸುಳ್ಯ ತಹಶೀಲ್ದಾರ್ ಜಿ....

ಪೆರಾಜೆ ಶಕ್ತಿ ಕೇಂದ್ರ ಇದರ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾಗಿ ಪ್ರದೀಪ್ ಕುಂಬಳಚೇರಿ ಆಯ್ಕೆಯಾಗಿದ್ದಾರೆ.ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಸುಮನ್ ಪೀಚೆಮನೆ , ಕಾರ್ಯದರ್ಶಿಗಳಾಗಿ ನೋಹಿತ್ ನಿಡ್ಯಮಲೆ ಆಯ್ಕೆಯಾದರು.ಪೆರಾಜೆ ಪಂಚಾಯತ್ ಸಭಾಂಗಣದಲ್ಲಿ ನಡೆದ ಭಾರತೀಯ ಶಕ್ತಿ ಕೇಂದ್ರ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಈ ಸಂದರ್ಭ ಶಕ್ತಿ ಕೇಂದ್ರದ ಅಧ್ಯಕ್ಷ ಸುಭಾಷ್ ಚಂದ್ರ ಬಂಗಾರಕೋಡಿ ,...

ಸೇವಾ ಭಾರತಿ ಸುಳ್ಯ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಬದಿಯ ರಸ್ತೆ ಸುರಕ್ಷಾ ನಾಮ ಫಲಕವನ್ನು ಸುಳ್ಯದಿಂದ ಸಂಪಾಜೆ ವರೆಗೆ ಸ್ವಚ್ಛ ಗೊಳಿಸಲಾಯಿತು. ಈ ಸೇವಾ ಕಾರ್ಯದಲ್ಲಿ ಸುಳ್ಯದ ಸೇವಾ ಭಾರತಿ ಸದಸ್ಯರಾದ ಸುದರ್ಶನ, ಗುರುದತ್, ಚರಣ್, ನಾರಾಯಣ, ಅಶ್ವತ್ಥ್ , ಸತೀಶ್, ಶರತ್, ಪ್ರಶಾಂತ್ , ಚಿದಾನಂದ, ಅಶೋಕ ಮತ್ತಿತರರು ಭಾಗವಹಿಸಿದ್ದರು.

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಬ್ರಮಣ್ಯ ಇಲ್ಲಿಯ 225 ವಿದ್ಯಾರ್ಥಿಗಳಿಗೆ ಗುರುವಾರ ಪುಸ್ತಕ ವಿತರಣೆ ಮಾಡಲಾಯಿತು. ಪುಸ್ತಕಗಳ ಪ್ರಯೋಜಕರಾದ ಡಾ.ಶಿವಕುಮಾರ್ ಹೊಸಳ್ಳಿಕೆ ಮಾತನಾಡುತ್ತಾ ನಮ್ಮ ತಂದೆ ರುಕ್ಮಯಗೌಡರು ಇದೇ ಶಾಲೆಯ ವಿದ್ಯಾರ್ಥಿಯಾಗಿ ಹಲವಾರು ವರ್ಷಗಳಿಂದ ಶಿಕ್ಷಕರಾಗಿ ದುಡಿದವರು. ಇಂದು ಅವರ ಸಹೋದ್ಯೋಗಿ ನಿವೃತ್ತ...

ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ಬಿನ 2024- 25 ನೇ ಸಾಲಿನ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಹಾಗೂ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ರಾಜೇಶ್ ಏನ್ ಎಸ್, ಕಾರ್ಯದರ್ಶಿಯಾಗಿ ಕೃಷ್ಣ ಕುಮಾರ ಬಾಳುಗೋಡು, ಖಜಾಂಚಿಯಾಗಿ ಮೋಹನ್ದಾಸ್ ರೈ, ಇವರುಗಳ ಆಯ್ಕೆ ಆಗಿರುತ್ತಾರೆ. ಕ್ಲಬ್ಬಿನ ಪ್ರಥಮ ಉಪಾಧ್ಯಕ್ಷರಾಗಿ ಸತೀಶ ಕೂಜುಗೋಡು ,ದ್ವಿತೀಯ ಉಪಾಧ್ಯಕ್ಷರಾಗಿ ವಿಷ್ಣು ಪಾತಿಕಲ್ಲು, ಕ್ಲಬ್...

ಕ್ಯಾಂಪ್ಕೊ ಸಂಸ್ಥೆಯ 'ಸಾಂತ್ವನ' ಯೋಜನೆಯಡಿಯಲ್ಲಿ ಕ್ಯಾಂಪ್ಕೊ ಸುಳ್ಯ ಶಾಖೆಯ ಸದಸ್ಯರಾದ ಅಬೂಬಕರ್ ತೋಟತ್ತಿಲ ಇವರ ತೆರೆದ ಹೃದಯ ಶಸ್ತ್ರಕ್ರಿಯೆಗೆ ಸಹಾಯಧನದ ಮೊತ್ತ ರೂ.200,000/- (ರೂಪಾಯಿ ಎರಡು ಲಕ್ಷ ) ದ ಚೆಕ್ಕನ್ನು ಕ್ಯಾಂಪ್ಕೋ ಸಂಸ್ಥೆಯ ಗೌರವಾನ್ವಿತ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲರವರು ಜೂ 20ರಂದು ಅಬೂಬಕರ್ ತೋಟತ್ತಿಲ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ಶಾಖೆಯ ಪ್ರಾದೇಶಿಕ...

ತಾಲೂಕಿನ ಜನರ ಕುಂದುಕೊರತೆಗಳಿಗೆ ಶೀಘ್ರ ಸ್ಪಂದಿಸುವ ನಿಟ್ಟಿನಲ್ಲಿ ಸರಕಾರ ಜನಸ್ಪಂದನಾ ಸಭೆ ನಡೆಸಲು ತೀರ್ಮಾನಿಸಲಾಗಿದ್ದು, ಜುಲೈ 09 ರಂದು ಅಪರಾಹ್ನ 3.00 ಗಂಟೆಗೆ ಸುಳ್ಯದಲ್ಲಿ ಸಭೆ ನಡೆಯಲಿದೆ.

ದಿನವಿಡೀ ನಿಂತುಕೊಂಡು 8 ರಿಂದ 12 ಗಂಟೆಯ ಕಾಲ ಕೆಲಸ ಮಾಡುವ ಗೃಹರಕ್ಷಕರಿಗೆ ದೈಹಿಕ ಆರೋಗ್ಯ ಅತೀ ಅಗತ್ಯ. ಟ್ರಾಫಿಕ್ ನಿಯಂತ್ರಣ, ನೆರೆ ನಿಯಂತ್ರಣ ಮತ್ತು ಬೆಂಕಿ ಅವಘಡ ಮುಂತಾದ ಒತ್ತಡದ ಸಂದರ್ಭದಲ್ಲಿ ಕೆಲಸ ನಿರ್ವಹಿಸುವಾಗ ಗೃಹರಕ್ಷಕರಿಗೆ ವಿಪರೀತ ಮಾನಸಿಕ ಒತ್ತಡದ ಸನ್ನಿವೇಶ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಗೃಹರಕ್ಷಕರಿಗೆ ದೈಹಿಕ ಕ್ಷಮತೆ ಮತ್ತು ಮಾನಸಿಕ ಆರೋಗ್ಯಕ್ಕೆ...

All posts loaded
No more posts