ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯು 2020 ರಲ್ಲಿ ಪ್ರಸ್ತುತಪಡಿಸಿದ ‘ಸಾಹೇಬ್ರು ಬಂದವೇ’ ನಾಟಕದಲ್ಲಿ ಮೋನಿಕಾ ಪಾತ್ರದಲ್ಲಿ ಅಭಿನಯಿಸಿದ್ದ ಸುಸ್ಮಿತಾ ಅವರು ಶಿವಮೊಗ್ಗ ಜಿಲ್ಲೆಯ ಸಾಗರದ ನೀನಾಸಂ ರಂಗಶಿಕ್ಷಣ ತರಬೇತಿಗೆ ಪ್ರಸ್ತಕ( 2024-25) ಸಾಲಿಗೆ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ ಅವರು ತಿಳಿಸಿದ್ದಾರೆ.
ಪ್ರತಿಯೊಬ್ಬ ರಂಗಭೂಮಿ ಕಲಾವಿದನ ಕನಸು ಪ್ರತಿಷ್ಠಿತ ನೀನಾಸಂಗೆ ಆಯ್ಕೆ ಆಗಬೇಕು ಎಂಬುದಾಗಿದೆ. ಆ ನಿಟ್ಟಿನಲ್ಲಿ ಅಷ್ಟೇ ಶ್ರದ್ಧೆ ಮತ್ತು ಪರಿಶ್ರಮದ ಅಗತ್ಯತೆ ಇದ್ದು, ಈಗಾಗಲೇ ಸಾವಿರಾರು ಕಲಾವಿದರು ಇಲ್ಲಿ ತರಬೇತಿ ಪಡೆದು ಉತ್ತಮ ಕಲಾವಿದರಾಗಿ ಹೊರಹೊಮ್ಮಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ 2020 ರಲ್ಲಿ ಪ್ರಸಿದ್ದ ಸಾಹೇಬ್ರು ಬಂದವೇ! ನಾಟಕವನ್ನು ರಾಜ್ಯದ ಒಬ್ಬ ಶ್ರೇಷ್ಟ ರಂಗಭೂಮಿ ನಿರ್ದೇಶಕರಾದ ಡಾ.ಜೀವನ್ ರಾಂ ಸುಳ್ಯ ಅವರ ನಿರ್ದೇಶನದಲ್ಲಿ ಸಿದ್ಧಪಡಿಸಲಾಗಿತ್ತು. ರಾಜ್ಯಾದ್ಯಂತ ಸುಮಾರು 20 ಪ್ರದರ್ಶನಗಳನ್ನು ನೀಡಿದ ಈ ನಾಟಕ ರಂಗಭೂಮಿ ಪ್ರೇಕ್ಷಕರ ಮನ ಗೆದ್ದಿತ್ತು. ಇದರಲ್ಲಿ ಎಲ್ಲರೂ ರಂಗಭೂಮಿಗೆ ಹೊಸದಾಗಿ ಪರಿಚಯಗೊಂಡ ಕಲಾವಿದರೇ ಆಗಿದ್ದರು. ಇದರಲ್ಲಿ ಕಲ್ಮಕಾರಿನ ಪ್ರತಿಭೆ ಮಮತಾ ಕಳೆದ ಬಾರಿಯ ನೀನಾಸಂ ತರಬೇತಿಗೆ ಆಯ್ಕೆಯಾಗಿದ್ದರು. ಸಾಹೇಬ್ರು ಬಂದವೇ ನಾಟಕದಲ್ಲಿ ಮೋನಿಕಾ ಪಾತ್ರ ಮಾಡುತ್ತಿದ್ದ ಕೇರಳ ರಾಜ್ಯದ ಕಾಸರಗೋಡಿನ ಸುಶ್ಮಿತಾ ಮೋಹನ್ ಈ ಬಾರಿಯ ರಂಗ ತರಬೇತಿಗೆ ಆಯ್ಕೆ ಆಗುವುದರ ಮೂಲಕ ಅರೆಭಾಷೆಯ ರಂಗಭೂಮಿಗೆ ಮತ್ತೊಂದು ಗರಿ ತಂದಿದ್ದಾರೆ ಎಂದು ಲಕ್ಷ್ಮಿ ನಾರಾಯಣ ಕಜೆಗದ್ದೆ ಅವರು ತಿಳಿಸಿದ್ದಾರೆ.
ಪ್ರಸ್ತುತ ಕಾಸರಗೋಡಿನ ಜಿಲ್ಲೆ ದೇಲಂಪಾಡಿ ಗ್ರಾಮದ ನಿವಾಸಿ ಬೆಳ್ಳಿಪಾಡಿ ಪೆರುಂದಲಪದವು ಮೋಹನ್ ಮತ್ತು ಸುಶೀಲಾ ಅವರ ದ್ವಿತೀಯ ಪುತ್ರಿ.
- Thursday
- November 21st, 2024