Ad Widget

ಪಡ್ಡಂಬೈಲು ಕರ್ಲಪ್ಪಾಡಿ ಕುಡೆಂಬಿ ಎಸ್ ಟಿ ಕಾಲೋನಿ ರಸ್ತೆಗೆ ಇನ್ನು ಸಿಗದ ಮುಕ್ತಿ – ವಾಹನ ಸವಾರರ ನಿತ್ಯ ನರಕ ಯಾತನೆ

ಅಜ್ಜಾವರ ಗ್ರಾಮದ ಪಡ್ಡಂಬೈಲು ಕರ್ಲಪ್ಪಾಡಿ ಕುಡೆಂಬಿ ಎಸ್ ಟಿ ಕಾಲೋನಿಗೆ ತೆರಳುವ ರಸ್ತೆ ತೀರಾ ಹದಗೆಟ್ಡಿದ್ದು ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ರಸ್ತೆಗೆ ಬಂದ ಅನುದಾನವನ್ನು ಇತರೆ ಸ್ಥಳಗಳಿಗೆ ವರ್ಗಾಯಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಆದ್ದರಿಂದಲೇ ಒಮ್ಮೆಯು ಡಾಮರೀಕರಣ ಅಥವಾ ಕಾಂಕ್ರೀಟ್ ಕಂಡಿಲ್ಲ.

ಕಳೆದ ಹಲವಾರು ವರ್ಷಗಳ ಹಿಂದೆ ಮಾಜಿ ಸಚಿವ ಶಾಸಕರಾದ ಎಸ್ ಅಂಗಾರರವರು ಸ್ಥಳಕ್ಕೆ ಭೇಟಿ ನೀಡಿ ರಸ್ತೆಗೆ ಡಾಮರೀಕರಣ ನಡೆಸಲು ಅನುದಾನ ನೀಡುವುದಾಗಿ ತಿಳಿಸಿ ಜನರ ಸಮಸ್ಯೆಗಳನ್ನು ಆಲಿಸಿ ತೆರಳಿದ್ದರು. ಆ ಬಳಿಕ ಬಂದ ೮೦ ಲಕ್ಷ ಅನುದಾನವನ್ನು ಸ್ಥಳೀಯರ ಕೈವಾಡದಿಂದಾಗಿ ಅನುದಾನವನ್ನು ವಿಂಗಡಿಸಿ ಬೇರೆಡೆಗೆ ವರ್ಗಾಯಿಸಿದ್ದರಿಂದ ಈ ರಸ್ತೆಗೆ ಯಾವುದೇ ಅನುದಾನವಿಲ್ಲದಂತಾಗಿದೆ. ಪ್ರತಿ ಮಳೆಗಾಲ ಸಂದರ್ಭದಲ್ಲಿ ರಸ್ತೆಯಲ್ಲಿ ಒರತೆ ಬರುತ್ತಿದ್ದು ನಿತ್ಯ ದ್ವಿಚಕ್ರ ಮತ್ತು ತ್ರಿಚಕ್ರ , ನಾಲ್ಕು ಚಕ್ರದ ವಾಹನಗಳು ಸಂಚರಿಸಲು ತೊಂದರೆ ಉಂಟಾಗುತ್ತಿದೆ. ಮಳೆಗಾಲಕ್ಕೆ ಬೇಕಾದ ಅಹಾರ ಪದಾರ್ಥಗಳನ್ನು ಮೊದಲೇ ಶೇಖರಿಸಿ ಇಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಅಲ್ಲದೇ ಕೆಲ ಮನೆಗಳು ದ್ವೀಪದ ರೀತಿಯಲ್ಲಾಗಿದ್ದು ಯಾವುದೇ ತುರ್ತು ಸಂದರ್ಭ ಬಂದರು ತೆರಳುವುದು ಅಸಾಧ್ಯವಾಗಿದೆ . ಕಳೆದ ಮಳೆಗಾಲದಲ್ಲಿ ತುರ್ತು ವಾಹನ ರಸ್ತೆಯಲ್ಲಿ ಬಾಕಿಯಾದ ಹಿನ್ನಲೆಯಲ್ಲಿ ಗ್ರಾ.ಪಂ ನಿಂದ ಸತ್ಯವತಿ ಬಸವನಪಾದೆ ಸುಮಾರು ಹತ್ತು ಸಾವಿರ ರೂಪಾಯಿ ಒದಗಿಸಿದ್ದರು. ಹಾಗೂ ಸಾರ್ವಜನಿಕರ ಹಣ ಸೇರಿಸಿ ಒಂದು ಲೋಡ್ ಜಲ್ಲಿ ಮತ್ತು ಜೆಸಿಬಿ ಯಂತ್ರದ ಮೂಲಕ ತಾತ್ಕಾಲಿಕ ದುರಸ್ತಿಯನ್ನು ಪಡಿಸಲಾಗಿತ್ತು. ಆದರೆ ಈ ಅನುದಾನವನ್ನು ಹೊರತು ಪಡಿಸಿದರೆ ಇಲ್ಲಿಯ ತನಕ ಒಂದೇ ಒಂದು ರೂಪಾಯಿಗಳ ಅನುದಾನವನ್ನು ನೀಡದಿರುವುದರಿಂದ ಜನ ಸಮಸ್ಯೆ ಎದುರಿಸುವಂತಾಗಿದೆ. ಸುಳ್ಯದಲ್ಲಿ ನಡೆದ ಜಿಲ್ಲಾ ಜನಸಂಪರ್ಕ ಸಭೆಯಲ್ಲಿ ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಮನವಿ ಸಲ್ಲಿಸಲಾಗಿತ್ತು. ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತು ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವರೇ ಎಂದು ಕಾದು ನೋಡಬೇಕಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!