ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 99 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನನ್ನಾಗಿ ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿಯವರನ್ನು ಆಯ್ಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಆಲೆಟ್ಟಿ ಗ್ರಾಮ ಕಾಂಗ್ರೆಸ್ ಸಮಿತಿ ವತಿಯಿಂದ ಶ್ರೀ ಸದಾಶಿವ ದೇವಸ್ಥಾನ ನಾಗಪಟ್ಟಣ ಇಲ್ಲಿ ರಾಹುಲ್ ಗಾಂಧಿಯವರ ಹೆಸರಿನಲ್ಲಿ ಶಿವಪೂಜೆ ಹಾಗೂ ರುದ್ರಾಭಿಷೇಕ ಸೇವೆ ಮಾಡಿದರು. ಈ ಮೂಲಕ, ರಾಹುಲ್ ಗಾಂಧಿಯವರು ವಿರೋಧ ಪಕ್ಷದ ನಾಯಕನಾಗಿ ಸಮರ್ಥವಾಗಿ ಮುನ್ನಡೆಸಲಿ ಹಾಗೂ ಇವರ ಮುಂದಿನ ರಾಜಕೀಯ ಭವಿಷ್ಯ ಇನ್ನು ಉತ್ತಮವಾಗಿರಲಿ ಎಂದು ವಿಶೇಷ ಪೂಜೆಯನ್ನ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸಿಹಿ ತಿಂಡಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯರಾದ ಎಂ ವೆಂಕಪ್ಪ ಗೌಡ, ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಇದರ ಪ್ರಧಾನ ಕಾರ್ಯದರ್ಶಿ ಪಿ ಎಸ್ ಗಂಗಾಧರ, ರಾಜ್ಯ ಅರಭಾಷೆ ಸಾಹಿತ್ಯ ಅಕಾಡೆಮಿ ಇದರ ಅಧ್ಯಕ್ಷರಾದ ಸದಾನಂದ ಮಾವಜಿ, ಸುಳ್ಯ ಮಹಿಳಾ ಬ್ಲಾಕ್ ಕಾಂಗ್ರೆಸ್ ಸಮಿತಿ ಇದರ ಅಧ್ಯಕ್ಷರಾದ ಗೀತಾ ಕೊಲ್ಚಾರು, ಆಲೆಟ್ಟಿ ಗ್ರಾಮ ಕಾಂಗ್ರೆಸ್ ಸಮಿತಿ ಇದರ ಅಧ್ಯಕ್ಷರಾದ ಸತ್ಯಕುಮಾರ ಆದಿಂಜ, ಗ್ರಾಮ ಪಂಚಾಯಿತಿ ಸದಸ್ಯರಾದ ಧರ್ಮಪಾಲ ಕೊಯ೦ಗಾಜೆ, ಕುಸುಮ ಬಿಲ್ಲರಮಜಲು, ಮೀನಾಕ್ಷಿ ಕುಡೇಕಲ್ಲು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಧಾಕೃಷ್ಣ ಪರಿವಾರಕಾನ, ಅರೆ ಭಾಷೆ ಸಾಹಿತ್ಯ ಅಕಾಡೆಮಿ ಇದರ ನಿರ್ದೇಶಕರಾದ ಲತಾ ದೇವಿಪ್ರಸಾದ, ತೇಜಕುಮಾರ ಬಡ್ಡಡ್ಕ, ನಗರ ಪಂಚಾಯತ್ ಇದರ ನಾಮನಿರ್ದೇಶಿತ ಸದಸ್ಯರಾದ ರಾಜ್ ಪಂಡಿತ್ ಸುಳ್ಯ, ಕಾರ್ಯಕರ್ತರಾದ ಆನಂದ ನಾಗಪಟ್ಟಣ, ಜೀವ ರತ್ನ ನಾಗಪಟ್ಟಣ, ಗಣೇಶ್ ನಾಗಪಟ್ಟಣ, ಕುಕ್ಕಪ್ಪ ರೈ ಅರಂಬೂರು, ನಾರಾಯಣ ರೈ ಅರಂಬೂರು, ರೇವತಿ ನಾಗಪಟ್ಟಣ, ದೇವಿ ನಾಗಪಟ್ಟಣ, ಮಾಲಾ ನಾಗಪಟ್ಟಣ, ವಿನೋದ ಅಜ್ಜಾವರ, ಕೇಶವ ಮೋರಂಗಲ್ಲು, ಚಂದ್ರಶೇಖರ ಕೆ ವಿ, ಸತ್ಯನಾರಾಯಣ ಕುಡೇಕಲ್ಲು, ರಾಮಕೃಷ್ಣ ಮೂಲೆ ಬಡ್ದಡ್ಕ, ಪುರುಷೋತ್ತಮ ಬಡ್ಡಡ್ಕ, ರಮೇಶ ಬಡ್ಡಡ್ಕ ಮೊದಲಾದವರು ಉಪಸ್ಥಿತರಿದ್ದರು
- Thursday
- November 21st, 2024