
ಮೊನ್ನೆ ಮೊನ್ನೆ ಪೆಟ್ರೋಲ್ ಡಿಸಿಲಿಗೆ 3 ರೂಪಾಯಿ ದರ ಹೆಚ್ಚಳವಾದಾಗ ಬೀದಿಗಿಳಿದ ಬಿಜೆಪಿ ಸೈನ್ಯಕ್ಕೆ ಇದೀಗ ಜಿಯೋ ಸೇವಾದರ ರಿಚಾರ್ಜ್ ಶೇಕಡ 12 ರಿಂದ 27ಕ್ಕೆ ಏರಿಕೆ ಮಾಡಿರುವುದು ಮಾತ್ರವಲ್ಲದೆ ಅದರ ಬೆನ್ನಲ್ಲೇ ಏರ್ಟೆಲ್ ರಿಚಾರ್ಜ್ ದರ ಕೂಡ ಏರಿಕೆ ಆಗಿರುವುದು ಕಣ್ಣಿಗೆ ಕಾಣದೆ ಇರುವುದು ತೀರ ಸೂಚನೀಯವಾಗಿದೆ, ಬಿಜೆಪಿಗರು ಈ ಸೇವಾದರ ಏರಿಕೆ ಕುರಿತು ದೇಶಾದ್ಯಂತ ಪ್ರತಿಭಟನೆ ಮಾಡಿ ನಮ್ಮ ದೇಶದ ಪ್ರಧಾನಿಗೆ ಮುಟ್ಟಿಸಿದರೆ ಅದರಿಂದ LKG ಮಕ್ಕಳಿಂದ ಹಿಡಿದು ಶತಾಯುಷಿ ಗ್ರಾಹಕರ ತನಕ ಗ್ರಾಹಕರಿಗೆ ಪ್ರಯೋಜನವಾಗಿರುತ್ತಿತ್ತು. ಈ ಬಗ್ಗೆ ಇನ್ನಾದರೂ ಬಿಜೆಪಿಗರು ಚಿಂತಿಸುವರೆ, ಎಂದು ಈ ಮೂಲಕ ಎಮ್ .ವೆಂಕಪ್ಪ ಗೌಡ ಪ್ರಶ್ನಿಸಿದ್ದಾರೆ.