Ad Widget

ಕೆವಿಜಿ ಐಪಿಎಸ್‌ನಲ್ಲಿ ಶಾಲಾ ಸಂಸತ್ ಪದಗ್ರಹಣ ಸಮಾರಂಭ

. . . . .


  ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ 2024-25ರ ಸಾಲಿನ ಶೈಕ್ಷಣಿಕ ವರ್ಷದ  ‘ ಶಾಲಾ ಸಂಸತ್ ಮಂತ್ರಿಮಂಡಲದ ಪದಗ್ರಹಣ ‘ ಸಮಾರಂಭವು ಜೂ.28 ರಂದು ಸುಳ್ಯದ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ ವಿ ಶುಭ ಹಾರೈಸಿದರು.
     

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾದ ಸುಳ್ಯದ ಸರ್ಕಲ್ ಇನ್ಸ್ಪೆಕ್ಟರ್ ಆಗಿರುವ  ಶ್ರೀ ಸತ್ಯನಾರಾಯಣ , ಎ ಓ ಎಲ್ ಇ ಕಮಿಟಿ ಬಿ ವಿಭಾಗದ ಕಾರ್ಯದರ್ಶಿ  ಡಾ. ಜ್ಯೋತಿ ಆರ್ ಪ್ರಸಾದ್,ಸೇಲ್ಸ್ ಫೋರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಲ್ಲಿ ಇಂಜಿನಿಯರ್ ಆಗಿರುವ ಯಶಿಕಾ ಪಡ್ಡಂಬೈಲ್, ಕೆವಿಜಿ ಐಪಿಎಸ್ ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ  ಡಾ.ಉಜ್ವಲ್  ಯು. ಜೆ,   ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲಿನ ಆಡಳಿತ ಮಂಡಳಿಯ ಸದಸ್ಯರಾಗಿರುವ ಬಾಲ ಗೋಪಾಲ್ ಸೇರ್ಕಜೆ  ಇವರನ್ನು ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ , ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು. ಜೊತೆಗೆ ವಿದ್ಯಾರ್ಥಿ ನಾಯಕರು ಪಥಸಂಚಲನದ ಮೂಲಕ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ದೀಪ ಬೆಳಗಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.


         ಶಾಲಾ ನಾಯಕನಾಗಿ ಅಧಿಕಾರವನ್ನು ಪಡೆದ ವರ್ಷಿತ್ ಎಂ ಎನ್ , ಉಪನಾಯಕ   ಅಬ್ದುಲ್ ಮನನ್ , ಶಾಲಾ ನಾಯಕಿ ಮಿಥಿಲಾಶ್ರೀ ಕೆ ಎಸ್ , ಉಪನಾಯಕಿ ಸೋನಾ ನಾರ್ಕೋಡು , ಸಾಂಸ್ಕೃತಿಕ ಮಂತ್ರಿ ರಿಮ ಫಾತಿಮಾ , ಉಪ ಸಾಂಸ್ಕೃತಿಕ ಮಂತ್ರಿ ಅಲಿಸ್ಬ ಸಾರ, ಶಿಕ್ಷಣ ಮಂತ್ರಿ ಶ್ರೀಯ ಡಿ.ಬಿ , ಉಪ ಶಿಕ್ಷಣ ಮಂತ್ರಿ ಮನ್ವಿತಾ ಸಿ ಎಚ್ , ಶಿಸ್ತಿನ ಮಂತ್ರಿ ಅನೀಶ್ ಕೆ ಎ , ಉಪಶಿಸ್ತಿನ ಮಂತ್ರಿ ವಿಜ್ಞ ಎ ಎಸ್  , ಆರೋಗ್ಯ ಮತ್ತು ನೈರ್ಮಲ್ಯ ಮಂತ್ರಿ ಅದ್ವಿತ್. ಕೆ. ಪಿ ಉಪ ಆರೋಗ್ಯ ಮತ್ತು ನೈರ್ಮಲ್ಯ ಮಂತ್ರಿ ಸಂಜನಾ ಎ. ಎಮ್ , ಕ್ರೀಡಾ ಮಂತ್ರಿ  ಪುನರ್ವಿ ಕೆ , ಉಪ ಕ್ರೀಡಾ ಮಂತ್ರಿ ಸೀಮಾ ಆಯಿಶಾ , ಮಾಧ್ಯಮ ವೃಂದದವರು ಮತ್ತು ಶಾಲೆಯ ನಾಲ್ಕು ತಂಡದ ನಾಯಕರುಗಳಿಗೆ   ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಪದವಿ ಪದಕ ನೀಡಿ, ವಿದ್ಯಾರ್ಥಿಗಳು ನಾಯಕತ್ವದ ಗುಣವನ್ನು ಅಳವಡಿಸಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು. ಆಮೇಲೆ ಪ್ರಾಂಶುಪಾಲರಾದ ಅರುಣ್ ಕುಮಾರ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ನಾಯಕರು ಬರಿ ನಾಯಕರಾಗದೆ, ಜವಾಬ್ದಾರಿಯುತ ಆಡಳಿತಗಾರರಾಗ ಬೇಕು. ಪ್ರತಿಯೊಬ್ಬರೂ ಕೊಟ್ಟ ಅವಕಾಶವನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಬೇಕು ಎಂದರು. ವಿದ್ಯಾರ್ಥಿ ತಂಡದ ನಾಯಕ ವರ್ಷಿತ್ ಎಂ ಎನ್  , ನಾಯಕಿ ಮಿಥಿಲಾಶ್ರೀ ಕೆ ಎಸ್  ‘ ನಾವು ನಮ್ಮ ಕರ್ತವ್ಯವನ್ನು ಅತಿ ಶ್ರದ್ಧೆಯಿಂದ ಮತ್ತು ಜವಾಬ್ದಾರಿಯಿಂದ ಮಾಡುತ್ತೇವೆ ‘ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಸತ್ಯನಾರಾಯಣ್ ‘ ಮಕ್ಕಳು ಒಬ್ಬ ವ್ಯಕ್ತಿಯನ್ನು ಮಾದರಿಯಾಗಿ ಸ್ವೀಕರಿಸಬೇಕು. ವಿಶೇಷವಾಗಿ ಮಕ್ಕಳು ಶಿಕ್ಷಕರನ್ನೇ ಆದರ್ಶವಾಗಿಟ್ಟು ಮುಂದುವರಿಯಬೇಕು. ಕಲಿಕೆಯಲ್ಲಿ ಮಾತ್ರ ಮುಂದುವರಿಯದೆ ಎಲ್ಲಾ ಚಟುವಟಿಕೆಯಲ್ಲಿ ಮುಂದುವರಿದು ಕೆವಿಜಿ ಶಿಕ್ಷಣ ಸಂಸ್ಥೆಗೆ ಒಂದು ಒಳ್ಳೆಯ ಹೆಸರನ್ನು ತಂದು ಕೊಡ ಬೇಕು. ಮೊಬೈಲಿನಿಂದ ದೂರವಿದ್ದು ಗುರಿಯ ಕಡೆಗೆ ಮುನ್ನುಗ್ಗಿ ‘ಎಂದು ಕಿವಿ ಮಾತನ್ನು ಹೇಳಿದರು.  ಕೆವಿಜಿ ಐಪಿಎಸ್ ನ   ನಿರ್ದೇಶಕಿ ಡಾ.ಜ್ಯೋತಿ ಆರ್ ಪ್ರಸಾದ್ ‘ ಶಾಲಾ ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಸಿಕ್ಕಿದ ಉತ್ತಮ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿಕೊಂಡು ನಿಮ್ಮ ನಾಯಕರುಗಳಿಗೆ ಪ್ರೋತ್ಸಾಹ ನೀಡಿ’ ಎಂದು ಹೇಳಿದರು. ಬಳಿಕ ಮಾತಾಡಿದ ಯಶಿಕಾ ಪಡ್ಡಂಬೈಲ್’ ಕನಸು ಇದ್ರೆ ಗುರಿ ಸಾಧನೆ ಸುಲಭ. ಎಲ್ಲರೊಂದಿಗೂ ಸ್ನೇಹದಿಂದ ಇದ್ದು, ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಿ’ ಎಂದು ಹೇಳಿದರು.


       ಕೆವಿಜಿ ಐಪಿಎಸ್ ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಉಜ್ವಲ್ ಯು. ಜೆ ‘ ವಿದ್ಯಾರ್ಥಿಗಳಿಗೆ ನಾಯಕತ್ವ ಕೊಡುವುದು ಅತಿ ಉತ್ತಮ. ನಾಯಕತ್ವದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ನಮ್ಮಲ್ಲಿ ಯಾವಾಗಲೂ  ಧನಾತ್ಮಕ ಯೋಚನೆ ಇದ್ದು, ಶಿಸ್ತುಬದ್ಧರಾಗಿ ಕರ್ತವ್ಯ ನಿರ್ವಹಿಸಬೇಕು . ಇದರಿಂದ ವಿದ್ಯಾರ್ಥಿಗಳು ತಮ್ಮ ಕೆಲಸವನ್ನು ಉತ್ತಮವಾಗಿ ನಿರ್ವಹಿಸಿ ಉತ್ತಮ ಪ್ರಜೆಗಳಾಗಿ   ಬೆಳೆಯಲು ಸಾಧ್ಯವಾಗುತ್ತದೆ’ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.   ಈ ಕಾರ್ಯಕ್ರಮವನ್ನು ಹತ್ತನೇ ತರಗತಿಯ   ಶಶಾಂಕ್ ಮತ್ತು  ಸಾನ್ವಿ  ನಿರೂಪಿಸಿದರು.  ಉತ್ಸವ್ ಸ್ವಾಗತಿಸಿ, ಧನ್ವಿ ವಂದಿಸಿದಳು.     

ಈ ಕಾರ್ಯಕ್ರಮದಲ್ಲಿ ಕೆ ವಿ ಜಿ ಐಟಿಐ  ಕಾಲೇಜಿನ ಪ್ರಾಧ್ಯಾಪಕ ಭವಾನಿ ಶಂಕರ್ ಅಡ್ತಲೆ, ಕೆವಿಜಿ ಡೆಂಟಲ್ ಕಾಲೇಜಿನ ಮಾಧವ ಬಿ. ಟಿ, ಕೆವಿಜಿ ಆಡಳಿತ ಮಂಡಳಿಯ ಪ್ರಸನ್ನ ಕಲ್ಲಾಜೆ,  ಕಮಲಾಕ್ಷ ಮತ್ತು  ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕ ಮತ್ತು  ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.ಅಂತಿಮವಾಗಿ ರಾಷ್ಟ್ರಗೀತೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮವು ಮುಕ್ತಾಯವಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!