Ad Widget

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಮೈತ್ರಿ ಕಾರ್ಯಕರ್ತರು : ಅರ್ಜಿ ಆಹ್ವಾನ

ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ ( ಬಾಳುಗೋಡು, ಸಂಪಾಜೆ, ಅಮರ ಪಡ್ನೂರು ಮತ್ತು ಜಾಲ್ಸೂರು ಗ್ರಾಮಗಳನ್ನು  ಹೊರತು ಪಡಿಸಿ ಈಗಾಗಲೇ ನೇಮಕಾತಿ ಆಗಿದೆ) ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮೈತ್ರಿ( Multipurpose Artificial insemination worker in rural India ) ಕಾರ್ಯಕರ್ತರಾಗಿ ಕಾರ್ಯನಿರ್ವಹಿಸಲು ಇಚ್ಛೆಯುಳ್ಳವರು ಕೂಡಲೇ ಪಶು ಆಸ್ಪತ್ರೆ ಸುಳ್ಯದ ಕಚೇರಿಗೆ ತಮ್ಮ ಮಾಹಿತಿಯನ್ನು ನೀಡಲು ಕೋರಿದೆ.  ವಯೋಮಿತಿ 18 ರಿಂದ 40 ವರ್ಷದ ಒಳಗಿನ ಯುವಕ ಅಥವಾ ಯುವತಿಯರು.
ಕನ್ನಡ ಮತ್ತು ಆಂಗ್ಲ ಭಾಷೆ ಓದಲು ಬರೆಯಲು ಗೊತ್ತಿರಬೇಕು.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆದ ನಂತರ ಇಲಾಖೆಯ ಮುಂದಿನ ನಿರ್ದೇಶನದಂತೆ ಆಯ್ಕೆಯಾದವರಿಗೆ ಮೂರು ತಿಂಗಳ ತರಬೇತಿಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕಾಗುತ್ತದೆ.

ತರಬೇತಿಯ ನಂತರ ಆಯ್ಕೆಯಾದ ಮೈತ್ರಿ ಕಾರ್ಯಕರ್ತರು ಇಲಾಖೆಯ ವಿವಿಧ ಕಾರ್ಯಕ್ರಮಗಳಾದ ಜಾನುವಾರುಗಳಿಗೆ ಲಸಿಕೆ ಕೃತಕ ಗರ್ಭಧಾರಣೆ ಜಾನುವಾರು ಸಮೀಕ್ಷೆ ಮುಂತಾದವುಗಳಲ್ಲಿ ಇಲಾಖೆಯೊಂದಿಗೆ ಸಹಕರಿಸಬೇಕಾಗುತ್ತದೆ

ಹೆಚ್ಚಿನ ಮಾಹಿತಿಗಾಗಿ
ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ಸುಳ್ಯ ಇವರನ್ನು ಸಂಪರ್ಕಿಸಬಹುದು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!