Ad Widget

ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಸುಳ್ಯ ನೇತೃತ್ವದಲ್ಲಿ ನಾಢ ಪ್ರಭು ಕೆಂಪೇಗೌಡ ಜಯಂತಿ ಆಚರಣೆ , ಸನ್ಮಾನ.

ಸುಳ್ಯ:ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಸುಳ್ಯ ನೇತೃತ್ವದಲ್ಲಿ ನಾಢ ಪ್ರಭು ಕೆಂಪೇಗೌಡ ಜಯಂತಿ ಆಚರಣೆಯು ಶ್ರೀ ಶಾರದಾ ಪದವಿ ಪೂರ್ವ ಕಾಲೇಜು ಸುಳ್ಯ ಇಲ್ಲಿ ಜರುಗಿತು . ಕಾರ್ಯಕ್ರಮ ಸಭಾ ಅಧ್ಯಕ್ಷತೆಯನ್ನು ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ವಹಿಸಿ ದೀಪ ಬೆಳಗಿ , ಪುಸ್ಪಾರ್ಚನೆಗೈದು ಉದ್ಘಾಟಿಸಿ ಮಾತನಾಡುತ್ತಾ ನಮ್ಮ ಸುಳ್ಯ ತಾಲೂಕು ಅತೀ ಹೆಚ್ಚು ಗೌಡ ಸಮುದಾಯದ ಜನತೆ ಇರುವ ತಾಲೂಕು ಇಂತಹ ತಾಲೂಕಿನಲ್ಲಿ ಇಂತಹ ಸಾಂಕೇತಿಕವಾಗಿ ಅಲ್ಲ ಇಂತಹ ಮಹಾತ್ಮರ ಕಾರ್ಯಕ್ರಮಗಳನ್ನು ಭಹಳಷ್ಟು ವಿಜ್ರಂಭಣೆಯಿಂದ ಮಾಡಬೇಕು ಅಲ್ಲದೇ ಕೆಂಪೇ ಗೌಡರ ಮಾದರಿಯಲ್ಲಿ ಕೈ ಕಾಲುಗಳು ಹೋದಲ್ಲಿ ಎಲ್ಲ ನಮ್ಮ ಸಾಧನೆಗಳನ್ನು ಮಾಡಬಹುದು ಎಂದು ಹೇಳಿದರು. ತಹಾಶೀಲ್ದಾರ್ ಮಂಜುನಾಥ್ ಜಿ ನಾಡ ಪ್ರಭು ಕೆಂಪೇಗೌಡರ ವ್ಯಕ್ರಿತ್ವದ ಕುರಿತಾಗಿ ಮಾತನಾಡಿ ನಾಡಿನ ಸಮಸ್ತ ಜನತೆಗೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಕೃಷಿ ವಿಭಾಗದಲ್ಲಿ ಸಾಧನೆಗೈದ ಲಿಂಗಪ್ಪ ಗೌಡ ಪಡ್ಪು ಅಮರ ಪಡ್ನೂರು ಮತ್ತು ಲತಾ ಜೋಗಿಮೂಲೆ ಮರ್ಕಂಜ ಗ್ರಾಮ ಇವರನ್ನು ಸನ್ಮಾನಿಸಲಾಯಿತು. ತಾಲೂಕಿನಲ್ಲಿ ಪಿಯುಸಿ ಮತ್ತು ಹತ್ತನೇ ತರಗತಿ ಮತ್ತು ಕೆಂಪೇಗೌಡ ಜಯಂತಿ ಹಿನ್ನಲೆಯಲ್ಲಿ ಆಯೋಜಿಸಿದ್ದ ಚಿತ್ರಕಲೆ , ಪ್ರಬಂಧ ದಲ್ಲಿ ಪ್ರಥಮ ದ್ವೀತಿಯ ತೃತೀಯ ಸ್ಥಾನಗಳನ್ನು ಪಡೆದ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಮುಖ್ಯ ಭಾಷಣಕಾರರಾಗಿ ಆಗಮಿಸಿ ಸಂಜೀವ ಕುದ್ಪಾಜೆ ಮತನಾಡುತ್ತಾ ಮೊದಲು ಮಾತುಗಳನ್ನು ಕೇಳುವಂತರಾಗಬೇಕು ಅಲ್ಲದೇ ಕೆಂಪೇಗೌಡರು ಮಾಡಿದ ಸಾಧನೆಗಳನ್ನು ಸ್ಮರಿಸಿದರು. ಚಂದ್ರಕೋಲ್ಚಾರ್ ಕೆಂಪೇಗೌಡರ ಗುಣಗಾನ ಮಾಡಿದರು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಆಶಾ ನಾಯಕ್ ಸ್ವಾಗತಿಸಿ ದಯಾಮಣಿ ವಂದಿಸಿ ದಾಮೋದರ ಎನ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಸಭಾ ವೇದಿಕೆಯಲ್ಲಿ ಅರೆಭಾಷೆ ಸಂಸ್ಕೃತಿ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ , ಇ ಒ ರಾಜಣ್ಣ , ಕಾಲೇಜು ಪ್ರಾಂಶುಪಾಲೆ ದಯಾಮಣಿ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!