Ad Widget

ನಾವೂರಲ್ಲಿ ತಡೆ ಗೋಡೆ ಕುಸಿತ, ಮನೆಗೆ ಹಾನಿ ಅಧಿಕಾರಿಗಳ ಭೇಟಿ

ಕರಾವಳಿಯ ಜಿಲ್ಲೆಯಾಧ್ಯಂತ ಭಾರೀ ಮಳೆ ಸುರಿದ ಪರಿಣಾಮ ಸುಳ್ಯ ನಗರದ ನಾವೂರು ಎಂಬಲ್ಲಿ ತಡೆಗೋಡೆ ಕುಸಿದ ಘಟನೆ ವರದಿಯಾಗಿದ್ದು, ಈ ತಡೆಗೋಡೆಯು ಸಾಜೀದ್‌ ಎಂಬವರಿಗೆ ಸೇರಿದ್ದು ಇದು ಕುಸಿತವಾದ ಕಾರಣದಿಂದ ಪಕ್ಕದ ಮನೆಯವರಾದ ರವಿ

ಎಂಬುವವರ ಮನೆಯ ಕಡೆಗೆ ಬಿದ್ದಿದ್ದು ಮನೆಗೆ ಹಾನಿಯಾಗಿದೆ ಎಂದು ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ ತಿಳಿಸಿದ್ದು ಸದ್ಯ ಸ್ಥಳಕ್ಕೆ ನಗರ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Related Posts

error: Content is protected !!