ವಾಹನದ ಅಡಿಗೆ ಬಿದ್ದು ಕೈಗೆ ಗಂಭೀರ ಗಾಯಗೊಂಡು ನೋವಿನಿಂದ ನರಳುತ್ತಿದ್ದ ನಾಯಿಗೆ ಯುವಕರ ತಂಡ ಚಿಕಿತ್ಸೆ ನೀಡಿದ್ದು, ಈ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಜಗತ್ತಿನಲ್ಲಿ ಅತ್ಯಂತ ವಿಶ್ವಾಸರ್ಹ ಪ್ರಾಣಿ ಅಂದರೆ ಅದು ನಾಯಿ ಅಂತಹ ಪ್ರಾಣಿಗಳನ್ನು ಬೀದಿಯಲ್ಲಿ ಬಿಡೋ ಕಾಲದಲ್ಲಿ, ಬೀದಿಯಲ್ಲಿ ಇದ್ದ ನಾಯಿಯ ನೋವು ಅರ್ಥೈಯಿಸಿ ಚಿಕಿತ್ಸೆ ನೀಡಲು ಮನಸ್ಸು ಮಾಡುವುದೆಂದರೇ ಮೆಚ್ಚಲೇಬೇಕು. ಈ ನಾಯಿ ಗುತ್ತಿಗಾರಿನ ಪಿ ಎ ಸಿ ಬ್ಯಾಂಕ್ ಪೆಟ್ರೋಲ್ ಪಂಪ್ ಆವರಣದಲ್ಲಿ ವಾಸವಿದ್ದು ಪಂಪ್ ರಾತ್ರಿ ಬಂದ್ ಆದ ನಂತರ ಯಾರೇ ಬಂದರೂ ಕೂಡ ಅವರನ್ನು ಗದರಿಸಿ, ಯಾರು ಬಾರದಂತೆ ಕರ್ತವ್ಯ ಪಾಲನೆ ಮಾಡುತ್ತಿತ್ತು. ಆ ನಾಯಿಯು ಯಾವುದೋ ವಾಹನದ ಅಡಿಗೆ ಬಿದ್ದು ಕಾಲಿಗೆ ಜಜ್ಜಿದ ಗಾಯ ಗೊಂಡು ನಡೆಯಲು ಕಷ್ಟ ಪಟ್ಟು ರಕ್ತ ಸೋರುತ್ತಿತ್ತು. ಇದನ್ನ ಗಮನಿಸಿದ ಪೆಟ್ರೋಲ್ ಪಂಪ್ ಸಿಬ್ಬಂದಿಗಳು, ಸಮಾಜ ಸೇವಕರಾಗಿರುವ ಆಟೋ ಚಾಲಕ ಚಂದ್ರಶೇಖರ ಕಡೋಡಿ ಅವರಿಗೆ ತಿಳಿಸಿ, ಅವರೊಂದಿಗೆ ಸಿಬ್ಬಂದಿಗಳಾದ ಕಾರ್ತಿಕ್ ಪೈಕ, ದಿನೇಶ್ ಮೊಟ್ಟೆ ಮನೆ ಮತ್ತು ದೀಕ್ಷಿತ್ ಕುಕ್ಕುಜೆ ಸೇರಿ ಗಾಯಗೊಂಡ ನಾಯಿ ಸೂಕ್ತ ಚಿಕಿತ್ಸೆ ಮಾಡಿದ್ದಾರೆ. ಈಗ ನಾಯಿ ಚೇತರಿಸಿಕೊಂಡಿದೆ.