ಅಮರ ಸಂಘಟನಾ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ವನಮಹೋತ್ಸವ ಪ್ರಯುಕ್ತ ಸುಳ್ಯದಲ್ಲಿ ಸಾರ್ವಜನಿಕ ಉಚಿತ 1000 ಸಸಿ ವಿತರಣೆ ಕಾರ್ಯಕ್ರಮ ಜೂ. 30 ಆದಿತ್ಯವಾರದಂದು ಸುಳ್ಯದ ಪ್ರಭು ಬುಕ್ಸ್ ಸ್ಟಾಲ್ ಹತ್ತಿರ ನಡೆಯಲಿದೆ.
ಎಲ್ಲಾ ಸಾರ್ವಜನಿಕ ಪರಿಸರ ಪ್ರೇಮಿಗಳಿಗೆ ಗಿಡ ವಿತರಣೆಯು ಉಚಿತವಾಗಿರುತ್ತದೆ. ಒಬ್ಬರಿಗೆ ಎರಡು ಸಸಿಗಳನ್ನು ಮಾತ್ರ ನೀಡಲಾಗುವುದು. ಸಸಿ ವಿತರಣೆ ಕಾರ್ಯಕ್ರಮವು ಬೆಳಿಗ್ಗೆ 9.30 ರಿಂದ 12.30ರವರೆಗೆ ನಡೆಯುವುದು, ಇಲ್ಲಿ ಬಾದಾಮಿ, ನೆಲ್ಲಿ, ನೇರಳೆ, ರಾಂಪತ್ರೆ, ಸಿಹಿಹುಣಸೆ, ಹಲಸು, ರಂಬುಟಾನ್ ಗಿಡಗಳು ಲಭ್ಯ. ಹೆಚ್ಚಿನ ಮಾಹಿತಿಗಾಗಿ ಹರ್ಷಿತ್ ಜಿ.ಜೆ. 7899943160, ಪ್ರವೀಣ್ ಕುಲಾಲ್ 9591792438, ಸಾತ್ವಿಕ್ ಮಡಪ್ಪಾಡಿ 7090335763 ಇವರನ್ನು ಸಂಪರ್ಕಿಸಬಹುದು.