
ಸುಳ್ಯ: ಬಿಜೆಪಿ ರಾಷ್ಟ್ರೀಯ ನಾಯಕ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಎರಡು ದಿನಗಳ ಜಿಲ್ಲಾ ಪ್ರವಾಸದಲ್ಲಿದ್ದು ಇದೀಗ ಕುಕ್ಕೆ ಸುಬ್ರಹ್ಮಣ್ಯ ದೇವಾಲಕ್ಕೆ ಆಗಮಿಸಿದ್ದು ಮಾಜಿ ಮುಖ್ಯಮಂತ್ರಿಗಳನ್ನು ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ಶಾಲು ಹೊದಿಸಿ ಹೂ ಗುಚ್ಚ ನೀಡಿ ಆತ್ಮಿಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರು ಜೊತೆಗಿದ್ದರು. ಪೂಜಾ ಕಾರ್ಯ ಮುಗಿದ ಬಳಿಕ ಇಂದು ಮಧ್ಯಾಹ್ನ ಬಿಜೆಪಿ ಭದ್ರ ಕೋಟೆಯಾದ ಸುಳ್ಯಕ್ಕೆ ಆಗಮಿಸಿ ಎರಡು ಅಂತಸ್ತಿನ ನೂತನ ಬಿಜೆಪಿ ಕಛೇರಿಯನ್ನು ಸುಳ್ಯದಲ್ಲಿ ಉದ್ಘಾಟಿಸಲಿದ್ದಾರೆ.
