
ಸುಬ್ರಹ್ಮಣ್ಯ ಜೂನ್ 22 : ಸುಬ್ರಹ್ಮಣ್ಯದ ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಏನೆಕಲ್ ಸರಕಾರಿ ಪ್ರೌಢಶಾಲೆಯ 2023-24ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಆರ್ಥಿಕವಾಗಿ ಹಿಂದುಳಿದ ಐದು ಮಂದಿ ವಿದ್ಯಾರ್ಥಿಗಳಿಗೆ ಶನಿವಾರ ಶಿಷ್ಯವೇತನವನ್ನು ವಿತರಿಸಲಾಯಿತು.
ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾl ಎ.ಎ ತಿಲಕ್ ಹಾಗೂ ನಿರ್ದೇಶಕಿ ಶ್ರೀಮತಿ ಗಾಯತ್ರಿ ತಿಲಕ್ ಶಿಷ್ಯವೇತನವನ್ನು ವಿದ್ಯಾರ್ಥಿಗಳಾದ ಅಂಜಲಿ ಬಿ, ಅಜಯ ಕೆ.ಸಿ, ರಿಜಿತ್, ಶ್ರಾವ್ಯಾ ಹಾಗೂ ಚಂದ್ರಕಲಾ ಆರ್ ಅವರಿಗೆ ವಿತರಿಸಿದರು.
ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ರಮೇಶ್ ಸಭಾಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಅನ್ನಪೂರ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಟ್ರಸ್ಟ್ ನ ಅಧ್ಯಕ್ಷರು ಹಾಗೂ ನಿರ್ದೇಶಕರು ಟ್ರಸ್ಟ್ ನ ಧ್ಯೇಯೋದ್ದೇಶಗಳನ್ನು ತಿಳಿಸಿದರು.
ಶಿಕ್ಷಕರುಗಳಾದ ಗಾಯತ್ರಿ.ಬಿ, ಶಾರದಾ ಕೆ, ದೀಪ ಕಟಾರೆ ,ಅತಿಥಿ ಶಿಕ್ಷಕರಾದ ಶ್ರೀಕಾಂತ್ ಹಾಗೂ ಪ್ರಥಮ ದರ್ಜೆ ಸಹಾಯಕಿ ಜಯಶ್ರೀ ಉಪಸ್ಥಿತರಿದ್ದರು.