
ಕಾಂತಮಂಗಲ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘ ಪುನರ್ ರಚನೆ ಬಗ್ಗೆ ಜೂ. 23ರಂದು ಸಭೆ ನಡೆಯಿತು. ಈ ಸಭೆಯಲ್ಲಿ ಅಧ್ಯಕ್ಷರಾಗಿ ಮನಮೋಹನ ಪುತ್ತಿಲ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಹರ್ಷಿತ್ ದೊಡ್ಡೇರಿ ಮತ್ತು ಸರಿತಾ ಟಿ.ಎಸ್., ಕಾರ್ಯದರ್ಶಿಯಾಗಿ ಮುಖ್ಯೋಪಾಧ್ಯಾಯಿನಿ ಸ್ವರ್ಣಲತಾ, ಜತೆ ಕಾರ್ಯದರ್ಶಿಯಾಗಿ ದಯಾನಂದ ಡಿ. ಕೆ., ಕೋಶಾಧಿಕಾರಿಯಾಗಿ ವಾಸುದೇವ ಪುತ್ತಿಲ, ಗೌರವ ಸಲಹೆಗರಾರರಾಗಿ ರವೀಂದ್ರ ಹೆಚ್. ಹನಿಯಡ್ಕ, ಆನಂದ ರಾವ್ ಕಾಂತಮಂಗಲ ಹಾಗೂ ಸದಸ್ಯರಾಗಿ ನಾರಾಯಣ ಕಾಂತಮಂಗಲ, ಗಂಗಾಧರ ಕೊಂಬರಡ್ಕ, ಜ್ಞಾನನಂದ ಎಚ್., ರಾಮಣ್ಣ ಬಿ., ಸತೀಶ ಕೆ., ಜಯರಾಮ ಕೆ., ಚಂದ್ರಶೇಖರ ಡಿ. ಕೆ., ಚಿದಾ ಗಂಧದಗುಡ್ಡೆ ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಜಯರಾಮ್ ಅತ್ಯಡ್ಕ, ಪಿಡಿಓ ಜಯಮಾಲ, ಗ್ರಾ.ಪಂ.ಸದಸ್ಯೆ ರತ್ನಾವತಿ, ಆನಂದ ರಾವ್ ಕಾಂತಮಂಗಲ, ಮನಮೋಹನ ಪುತ್ತಿಲ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಮಂಜುಳಾ ಬಡಿಗೇರ್, ಸ್ವರ್ಣಲತಾ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕಿ ಜಯಶೀಲಾ ನಿರೂಪಿಸಿದರು.
