
ಶತಮಾನೋತ್ಸವ ಆಚರಿಕೊಂಡ ಕಂದ್ರಪ್ಪಾಡಿ ಶಾಲಾ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಅವಿನಾಶ್ ಜಿ ಎಸ್ ಹಾಗೂ ಶ್ರೀಮತಿ ಸ್ವಪ್ನಾ ಅವರು ಅವಿರತ ಫೌಂಡೇಶನ್ ನ ಸಹಯೋಗದೊಂದಿಗೆ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಮಾಡಿದರು.
ಅವಿನಾಶ್ ಜಿ ಎಸ್ ಹಾಗು ಶ್ರೀಮತಿ ಸ್ವಪ್ನಾ ಅವರು ತಮ್ಮ ಮಗನಾದ ನಿರ್ಮಯ್ ಅವರ ಹೆಸರಿನಲ್ಲಿ ಗ್ರಾಮೀಣ ಪರಿಸರದ ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗಬೇಕು ಎಂಬ ಸದುದ್ದೇಶದಿಂದ ಅವಿರತ ಫೌಂಡೇಶನ್ ನ ಸಹಯೋಗದೊಂದಿಗೆ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಶ್ರೀಯುತ ಕಾಳಿಕಾ ಪ್ರಸಾದ್ ಮುಂಡೋಡಿ ಆಡಳಿತ ಮೊಕ್ತೇಸರರು ಶ್ರೀ ರಾಜ್ಯ ದೈವ ಮತ್ತು ಪುರುಷದೈವ ಗಳ ದೈವಸ್ಥಾನ ಕಂದ್ರಪ್ಪಾಡಿ, ಶ್ರೀಯುತ ದಿವಾಕರ ಮುಂಡೋಡಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ದೇವಚಳ್ಳ, ಶ್ರೀಮತಿ ವನಸುಮ ಶಾಲೆಯ ಹಿರಿಯ ವಿದ್ಯಾರ್ಥಿಗಳು,ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀಮತಿ ವಾಣಿ ಎಂ ವಿ, ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ವಾಣಿ ಕೆ ಎಸ್ ,ಅಧ್ಯಾಪಕ ವೃಂದದವರು,ಶಾಲಾ ಎಸ್ ಡಿ ಎಂ ಸಿ ಸದಸ್ಯರುಗಳು, ಪೋಷಕರು ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಶ್ರೀಮತಿ ಸ್ವಪ್ನಾ ರವರು ಅವಿರತ ಫೌಂಡೇಶನ್ ನ ವತಿಯಿಂದ ನಡೆಯುವ ಸಮಾಜ ಮುಖಿ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.ಅತಿಥಿಗಳು ಶುಭ ಹಾರೈಸಿದರು.ಶಾಲೆಯ ಪದವೀಧರ ಪ್ರಾಥಮಿಕ ಶಿಕ್ಷಕರಾದ ಅಜಯ ಕೆ ಎಂ ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ವಾಣಿ ಕೆ. ಎಸ್ ರವರು ದಾನಿಗಳಿಗೆ ಕೃತಜ್ಞತೆ ಸಲ್ಲಿಸಿ ಎಲ್ಲರಿಗೂ ವಂದಿಸಿದರು.
