
ದೇವಚಳ್ಳ ಗ್ರಾಮದ ದೇವ ಪಡ್ಪು ದಿ.ಆನಂದ ಗೌಡರ ಧರ್ಮಪತ್ನಿ ನಾಗಮ್ಮ ಅಲ್ಪ ಕಾಲದ ಅಸೌಖ್ಯದಿಂದ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಗ್ರಾ.ಪಂ.ಸದಸ್ಯ ರಮೇಶ್ ಪಡ್ಪು, ಪುತ್ರಿಯರಾದ ಲಲಿತ ದೇವರಾಜ್ ಚಿಕ್ಕಮಗಳೂರು, ಶಶಿ ಕಲಾ ತಿರುಮಲೇಶ್ವರ ಬೊಳ್ಳೂರು, ಹಿತಾಕ್ಷಿ ಚೆನ್ನಕೇಶವ ಚಿಕ್ಕಮಗಳೂರು, ಸುಮತಿ ಚಂದ್ರಶೇಖರ ಗಟ್ಟಿಗಾರು, ಜಯಶ್ರೀ ಕೇಶವ ಕರ್ಮಾಜೆ, ಸೊಸೆ ಮೀನಾಕ್ಷಿ ಪಡ್ಪು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.
