Ad Widget

ಜಟ್ಟಿಪಳ್ಳ : ಮಾನಸ ಮಹಿಳಾ ಮಂಡಲದ ನೇತೃತ್ವದಲ್ಲಿ ಯೋಗ ದಿನಾಚರಣೆ

ನೆಹರೂ ಯುವ ಕೇಂದ್ರ ಮಂಗಳೂರು, ಮಾನಸ ಮಹಿಳಾ ಮಂಡಲ (ರಿ) ಜಟ್ಟಿಪಳ್ಳ,ಸಂಸ್ಥೆ ಯ ಬೆಳ್ಳಿ ಹಬ್ಬ ಆಚರಣಾ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಯೋಗದಿಂದಾಗುವ ಆರೋಗ್ಯ ಮಾಹಿತಿ ಮತ್ತು ಯೋಗ ಪ್ರಾತ್ಯಕ್ಷತೆಯು ಜಟ್ಟಿಪಳ್ಳದ ಯುವಸದನ ದಲ್ಲಿ ಜರುಗಿತು..ಡಾ. ಅನುಷಾ ಮಡಪ್ಪಾಡಿ ಯವರು ಸಂಪನ್ಮೂಲ ವ್ಯಕ್ತಿ ಯಾಗಿ ಆಗಮಿಸಿ ವಿವಿಧ ಯೋಗಾಸನ ಮತ್ತು ಪ್ರಾಣಯಾಮಗಳನ್ನು ತಿಳಿಸಿಕೊಟ್ಟರು . ಮಹಿಳಾ ಮಂಡಳದ ಗೌರವಾಧ್ಯಕ್ಷೆ ಚಂದ್ರಾಕ್ಷಿ ಜೆ ರೈ ಸಭಾಧ್ಯಕ್ಷತೆ ವಹಿಸಿ ದ್ದರು. ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಸರೋಜಿನಿ ಪೆಲತಡ್ಕ ದೀಪ ಬೆಳಗಿಸಿ ಉದ್ಘಾಟಿ ಸಿದರು..ಮಹಿಳಾ ಮಂಡಲದ ಅಧ್ಯಕ್ಷರಾದ ಚಿತ್ರಲೇಖ ಮಡಪ್ಪಾಡಿಯವರು ಸ್ವಾಗತಿಸಿದ ಕಾರ್ಯಕ್ರಮ ದಲ್ಲಿ ಜಯಂತಿ ರೈ ಪ್ರಾರ್ಥಿಸಿದರು. ಸವಿತಾ ಲಕ್ಷ್ಮಣ್ ಕಾರ್ಯಕ್ರಮ ನಿರೂಪಿಸಿದರು. ಬೆಳ್ಳಿಹಬ್ಬ ದ ಪ್ರಧಾನ ಕಾರ್ಯದರ್ಶಿ ಸುನೀತ ರಾಮಚಂದ್ರ ವಂದಿಸಿ ದರು. ಕಾರ್ಯಕ್ರಮದಲ್ಲಿ ಮಹಿಳಾ ಮಂಡಲದ ಹೆಚ್ಚಿನ ಸದಸ್ಯರು ಭಾಗವಹಿಸಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading