
ಕಾಂಕ್ರೀಟೀಕರಣಗೊಂಡ ದೇವಚಳ್ಳ ಗ್ರಾಮದ ದೇವ ಕಾಲೋನಿ ರಸ್ತೆ ಉದ್ಘಾಟನೆ ಇಂದು ನೆರವೇರಿತು. ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷರಾದ ಕಿಶೋರ್ ಅಂಬೆಕಲ್ಲು ಮತ್ತು ಸಂಜೀವಿನಿ ಒಕ್ಕೂಟದ ತಾರಾ ರವೀಂದ್ರ ಅಡ್ಡನಪಾರೆ ನೆರವೇರಿಸಿದರು. ಕಾಲೋನಿಯ ಹಿರಿಯರಾದ ಬಾಬು ದೇವ ತೆಂಗಿನ ಕಾಯಿ ಒಡೆದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು, ಪಿಡಿಓ ಗುರುಪ್ರಸಾದ್, ರಾಮಚಂದ್ರ ದೇವ, ಕುಸುಮಾಧರ ದೇವ, ಅಲ್ಲದೇ ರಸ್ತೆ ಫಾಲಾನುಭವಿಗಳು ಉಪಸ್ಥಿತರಿದ್ದರು.
