
ಸುಬ್ರಹ್ಮಣ್ಯ ಜೂನ್ 22 : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಇದರ ವತಿಯಿಂದ ಶನಿವಾರ ಕುಲ್ಕುಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು. ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಸುಬ್ರಹ್ಮಣ್ಯ ಇದರ ಅಧ್ಯಕ್ಷ ಡಾ| ರವಿ ಕಕ್ಕೆಪದವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುಸ್ತಕಗಳ ಪ್ರಾಯೋಜಕರಾದ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಸುಬ್ರಹ್ಮಣ್ಯ ಲಿಜನ್ ಸ್ಥಾಪಕಾಧ್ಯಕ್ಷರಾದ ವಿಶ್ವನಾಥ ನಡುತೋಟ ಮಕ್ಕಳಿಗೆ ಪುಸ್ತಕಗಳನ್ನ ವಿತರಿಸಿದರು. ಮುಖ್ಯ ಅತಿಥಿಗಳಾಗಿ ಸೀನಿಯರ್ ರೋ.ಚಂದ್ರಶೇಖರ ನಾಯರ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸೀನಿಯರ್ ರೋ.ವೆಂಕಟೇಶ ಎಚ್ ಎಲ್. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಪೂರ್ಣಿಮಾ, ಅಂಗನವಾಡಿ ಶಿಕ್ಷಕಿ ದೀಪಿಕಾ, ಶಾಲಾ ಮುಖ್ಯೋಪಾಧ್ಯಾಯರಾದ ಮಲ್ಲೇಶಪ್ಪ ಹಾಗೂ ವಿದ್ಯಾರ್ಥಿಗಳ ಪೋಷಕರು, ಮಕ್ಕಳು ಉಪಸ್ಥಿತರಿದ್ದರು.