ಗುತ್ತಿಗಾರು ಪೇಟೆಯ ಆಯ್ದ ಭಾಗಗಳಲ್ಲಿ ವರ್ತಕರ ಸಂಘ ಗುತ್ತಿಗಾರು ಗ್ರಾಮ ಪಂಚಾಯತ್ ಇವುಗಳ ಜಂಟಿ ಆಶ್ರಯದಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳ ವರ್ತಕರ ಮತ್ತು ದಾನಿಗಳ ನೆರವಿನೊಂದಿಗೆ ಅಳವಡಿಸಿದ ಸಿಸಿಟಿವಿ ಹಾಗೂ ಎಲ್ಐಸಿ ಯಿಂದ ವಿಮಾ ಗ್ರಾಮದ ಬಗ್ಗೆ ಬಾಕಿಲದಲ್ಲಿ ಅಳವಡಿಸಿದ ಸೋಲಾರ್ ಬೀದಿ ದೀಪ ಉದ್ಘಾಟನಾ ಕಾರ್ಯಕ್ರಮ ಇಂದು ನಡೆಯಿತು.
ಬೀದಿ ದೀಪವನ್ನು ಎಲ್ಐಸಿಯ ಪುತ್ತೂರು ಶಾಖೆಯ ಹಿರಿಯ ವ್ಯವಸ್ಥಾಪಕರಾದ ಉಜ್ವಲ್ ಹೆಚ್ ರವರು ಹಾರ ಹಾಕುವುದರ ಮೂಲಕ ಉದ್ಘಾಟಿಸಿದರು. ನಂತರ ಪೇಟೆಯಲ್ಲಿ ಅಳವಡಿಸಿದ ಸಿಸಿ ಕ್ಯಾಮರಗಳನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮಿತ್ರ ಮೂಖಮಲೆ, ಗುತ್ತಿಗಾರು ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ಅಧ್ಯಕ್ಷ ವೆಂಕಟ್ ದಂಬೆಕೋಡಿ, ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಉದ್ಘಾಟಿಸಿದರು. ನಂತರ ಮುತ್ತಪ್ಪೇಶ್ವರ ದೈವಸ್ಥಾನ ಇಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ವಹಿಸಿದ್ದರು. ವೇದಿಕೆಯಲ್ಲಿ ಗುತ್ತಿಗಾರು ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ಅಧ್ಯಕ್ಷ ವೆಂಕಟ್ ದಂಬೆಕೊಡಿ. ಎಲ್ಐಸಿ ಯಾ ಪುತ್ತೂರು ಬ್ರಾಂಚಿನ ಹಿರಿಯ ವ್ಯವಸ್ಥಾಪಕರಾದ ಉಜ್ವಲ್ ಎಚ್. , ಗುತ್ತಿಗಾರು ಗ್ರಾ.ಪಂ. ಸದಸ್ಯ ಹಾಗೂ ಮಾಜಿ ಅಧ್ಯಕ್ಷ ವೆಂಕಟ್ ವಳಲಂಬೆ, ಎಲ್ಐಸಿ ಯಾ ಸುಳ್ಯ ಶಾಖೆಯ ಮೆನೇಜರ್ ಗುರುದತ್ತ ನಾಯಕ್, ಗುತ್ತಿಗಾರು ವರ್ತಕರ ಸಂಘದ ಅಧ್ಯಕ್ಷ ಶಿವರಾಮ ಕರುವಜೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪಂಚಾಯಿತಿನ ಸದಸ್ಯರುಗಳು ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು ವರ್ತಕರ ಸಂಘದ ಉಪಾಧ್ಯಕ್ಷ ಲಿಜೊಜೋಶ್. ಸ್ವಾಗತಿಸಿ ಖಜಾಂಜಿ. ದಿನೇಶ್ ಹಾಲೆಮಜಲು ವಂದಿಸಿದರು.
ಈ ಸಂದರ್ಭದಲ್ಲಿ ಎಲ್ ಐಸಿ ಪ್ರತಿನಿಧಿ ಶಿವರಾಮ ಕರುವಜೆ ಮತ್ತು ಎಲ್ಐಸಿ ಹಿರಿಯ ವ್ಯವಸ್ಥಾಪಕರಾದ ಉಜ್ವಲ ಎಚ್ ರವರು ಶಾಲು ಹೊದಿಸಿ ಗೌರವಿಸಿದರು.