
ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ವತಿಯಿಂದ ಇಂದು ಕುಮಾರಧಾರ ದೋಣಿಮಕ್ಕಿ ಜೇಸಿ ಭವನದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ಅಧ್ಯಕ್ಷರಾದ ಡಾ. ರವಿ ಕಕ್ಕೆ ಪದವು ಅವರು ಯೋಗ ವಿಶ್ವ ಯೋಗ ದಿನಾಚರಣೆ ಬಗ್ಗೆ ಮಾತನಾಡಿದರು. ಸೀನಿಯರ್ ಚೇಂಬರ್ ಸ್ಥಾಪಕ ಅಧ್ಯಕ್ಷ ಹಾಗೂ ಯೋಗ ತರಬೇತುದರರಾದ ವಿಶ್ವನಾಥ ನಡು ತೋಟ ರವರು ಯೋಗದ ಬಗ್ಗೆ ವಿವರಗಳನ್ನು ನೀಡಿ ಪ್ರಾತ್ಯಕ್ಷತೆಯೊಂದಿಗೆ ಯೋಗ ಅಭ್ಯಾಸ ಮಾಡಿಸಿದರು. ಕುಮಾರಧಾರ ದೋಣಿಮಕ್ಕಿ ಪರಿಸರದ ನಿವಾಸಿಗಳು ವಿದ್ಯಾರ್ಥಿಗಳು ಹಾಗೂ ಆಸಕ್ತರು ಈ ಅಭ್ಯಾಸ ವರ್ಗದಲ್ಲಿ ಭಾಗವಹಿಸಿದ್ದರು.