
ಸುಬ್ರಹ್ಮಣ್ಯ ಜೂನ್ 21: ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ವತಿಯಿಂದ ಇಂದು ವಿಶ್ವ ಯೋಗ ದಿನಾಚರಣೆಯನ್ನು ಕುಮಾರಸ್ವಾಮಿ ವಿದ್ಯಾಲಯದ ಸಭಾಂಗಣದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಯೋಗದೊಂದಿಗೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸುಬ್ರಮಣ್ಯ ರೋಟೋರಿ ಕ್ಲಬ್ಬಿನ ನಿಯೋಜಿತ ಅಧ್ಯಕ್ಷ ಚಂದ್ರಶೇಖರ ನಾಯರ್, ಝೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ ಎಸ್ಪಿ .ವೈ .ಎಸ್ .ಎಸ್. ಸುಬ್ರಮಣ್ಯ ಘಟಕದ ಅಧ್ಯಕ್ಷ ಪ್ರಭಾಕರ ಪಟ್ರೆ ,ಯೋಗ ಬಂಧುಗಳಾದ ವೆಂಕಟೇಶ್, ನಾಗರಾಜ್, ಶ್ರೀಕೃಷ್ಣ ಶರ್ಮಾ, ಬಸವರಾಜ ಟೋಂಗಳೆ, ಯಶೋಧರ, ಜಯಶ್ರೀ, ಜಯಲಕ್ಷ್ಮಿ, ಲೀಲಾ ಕುಮಾರಿ , ರಾಜೇಶ್ವರಿ, ಶ್ರೀಮತಿ ,ಮುಂತಾದವರು ಉಪಸ್ಥಿತರಿದ್ದರು.