
ಅಂತರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಜಿಲ್ಲೆ 317 D ಇದರ ರೀಜನ್ 6 ರ ವಲಯ 2 ರ ವಲಯ ಅಧ್ಯಕ್ಷರಾಗಿ ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನ ಸ್ಥಾಪಕ ಅಧ್ಯಕ್ಷ ಪ್ರೊ .ರಂಗಯ್ಯ ಶೆಟ್ಟಿಗಾರ್ ನಿಯುಕ್ತಿ ಗೊಂಡಿರುತ್ತಾರೆ ಲಯನ್ಸ್ ವಲಯ 6 ರ ಕ್ಲಬ್ ಗಳಾಗಿ ಕಡಬ ,ಸುಬ್ರಹ್ಮಣ್ಯ, ಹಾಗೂ ಪಂಜ ಇರುತ್ತದೆ . ಶ್ರೀ ಯುತರು ಕಳೆದ ವರ್ಷ ವಲಯ NOEY ಆಗಿ ಕಾರ್ಯನಿರ್ವಹಿಸಿರುವರು. ರಂಗಯ್ಯ ಶೆಟ್ಟಿಗಾರ ಅವರು ಸುಬ್ರಹ್ಮಣ್ಯ ಕೆ.ಎಸ್.ಎಸ್. ಮಹಾ ವಿದ್ಯಾಲಯದಲ್ಲಿ 1983 ರಲ್ಲಿ ಉಪನ್ಯಾಸಕರಾಗಿ ಸೇವೆಗೆ ಸೇರಿ 36 ವರ್ಷಗಳ ಸೇವಾ ಅವಧಿಯಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿ, ಉಪ ಪ್ರಾಂಶುಪಾಲರಾಗಿ, ತದನಂತರ ಎರಡೂವರೆ ವರ್ಷಗಳ ಕಾಲ ಪ್ರಾಂಶುಪಾಲರಾಗಿ ದುಡಿದು ನಿವೃತ್ತಿ ಹೊಂದಿರುತ್ತಾರೆ.