
ಜ್ಯೋತಿ ಪೆರಾಜೆ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರದ ಹರೀಶ್ಚಂದ್ರ ಮುಡುಕಜೆ, ಜ್ಯೋತಿ ವಿದ್ಯಾಸಂಘದ ಉಪಾಧ್ಯಕ್ಷರಾದ ಪದ್ಮಯ್ಯ ಕೆ. ಕೆ, ಶಾಲಾ ಸ್ಥಳ ದಾನಿಗಳಾದ ಶಕುಂತಲಾ ಉಮಸುಂದರ್ ರೈ, ಡಾ. ಸಾಯಿ ಗೀತಾ ಜ್ಞಾನೇಶ್, ಭರತ್ ಉದ್ಯಮಿಗಳು,ಕೆವಿಜಿ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು, ಶಾಲಾ ಮುಖ್ಯ ಶಿಕ್ಷಕರು ನಾಗರಾಜ್ ಸರ್, ಶಾಲಾ ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕೆವಿಜಿ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಯೋಗದ ಪ್ರಾಮುಖ್ಯತೆ ಬಗ್ಗೆ ಮಾಹಿತಿ ಹಾಗೂ ಯೋಗಾಭ್ಯಾಸವನ್ನು ನಡೆಸಿಕೊಟ್ಟರು.