Ad Widget

ತಾ. ಪಂ. ಸಾಮಾನ್ಯ ಸಭೆ – ಬೆಳೆಯುತ್ತಿರುವ ಸುಳ್ಯದಲ್ಲಿ ವ್ಯವಸ್ಥಿತ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಆದ್ಯತೆ – ಉದಯ ಶೆಟ್ಟಿ



ತಾಲೂಕು ಪಂಚಾಯತ್ ಸಾಮಾನ್ಯ ಸಭೆಯು ಜೂ.19 ರಂದು ನಡೆಯಿತು. ತಾಲೂಕು ಪಂಚಾಯತ್ ಆಡಳಿತಾಧಿಕಾರಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಉದಯ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.


ಸುಳ್ಯ ನಗರದ ತ್ಯಾಜ್ಯ ವಿಲೇವಾರಿಗೆ ನಗರ ಹಾಗೂ ಸುತ್ತಮುತ್ತಲ ಗ್ರಾಮ ವ್ಯಾಪ್ತಿಯಲ್ಲಿ ಜಾಗ ಗುರುತಿಸುವ ಕುರಿತು ಕಳೆದ ಸಭೆಯ ಪಾಲನಾ ವರದಿ ವಿಚಾರ ಸಭೆಯಲ್ಲಿ ಪ್ರಸ್ತಾಪವಾದಾಗ, ವಿವರ ನೀಡಿದ ಮುಖ್ಯಾಧಿಕಾರಿಗಳು ದುಗಲಡ್ಕದಲ್ಲಿ ಜಾಗ ಗುರುತಿಸಲಾಗಿದ್ದು, ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು. ಆರ್ ಎಫ್.ಒ. ಮಂಜುನಾಥ ರು “ದುಗಲಡ್ಕದಲ್ಲಿ ಇರುವ ಜಾಗ ಡೀಮ್ಡ್ ಫಾರೆಸ್ಟ್ 60 ಎಕರೆ ಇದೆ. ಅದು ಬಿಟ್ಟು ಇನ್ನೂ ಕೆ.ಎಫ್.ಡಿ.ಸಿ. ಜಾಗವೂ ಇದೆ. ಅದರಲ್ಲಿ ಹಿಂದೆ ಗುರುತಿಸಲಾಗಿತ್ತು ಎಂದು ಹೇಳಿದರು. “ಡೀಮ್ಡ್ ಫಾರೆಸ್ಟ್ ಹೊರತಾಗಿಯೂ ಜಾಗ ಇದೆ. ಇವತ್ತೇ ಪ್ರಪೋಸಲ್ ಕಳುಹಿಸುವುದಾಗಿ ಮುಖ್ಯಾಧಿಕಾರಿ ಸುಧಾಕ‌ರ್ ಹೇಳಿದರು.

ಈ ಕುರಿತು ಸಮಾಲೋಚನೆ ನಡೆದಾಗ ” ತ್ಯಾಜ್ಯ ವಿಲೇವಾರಿಗೆ ಜಾಗವನ್ನು ಆದಷ್ಟು ಶೀಘ್ರವಾಗಿ ಗುರುತಿಸಿ. ಕೇಂದ್ರ ಸರಕಾರದಿಂದ ಸ್ವಚ್ಛ ಭಾರತ್ ಯೋಜನೆಯಡಿಯಲ್ಲಿ ಅನುದಾನ ತರಿಸಿಕೊಂಡು ತ್ಯಾಜ್ಯ ನಿರ್ವಹಣಾ ಘಟಕ ಮಾಡೋಣ ಎಂದು ಆಡಳಿತಾಧಿಕಾರಿಗಳು ಹೇಳಿದರು. “ಅಜ್ಜಾವರ ಗ್ರಾ.ಪಂ. ವ್ಯಾಪ್ತಿಯಲ್ಲಿ 1 ಎಕ್ರೆ ಜಾಗ ಇದೆಯಲ್ವಾ ಏನಾಗಿದೆ?” ಎಂದು ಆಡಳಿತಾಧಿಕಾರಿ ಉದಯ ಶೆಟ್ಟಿ ಕೇಳಿದಾಗ, “ಜಾಗದ ಆರ್ ಟಿ ಸಿ ನ.ಪಂ. ಹೆಸರಿಗೆ ಇದೆ. ಆದರೆ ಅಲ್ಲಿ ಗ್ರಾ.ಪಂ.ನವರು ಕೂಡಾ ತ್ಯಾಜ್ಯ ಘಟಕ ಬೇಕು ಎಂದು ಹೇಳುತಿದ್ದಾರೆ” ಎಂದು ಮುಖ್ಯಾಧಿಕಾರಿ ಹೇಳಿದರು. “ಅಲ್ಲಿ ನಿರ್ವಹಣಾ ಘಟಕ ಮಾಡಿದರೆ ಅವರಿಗೂ ಉಪಯೋಗವೇ ಆಗುತ್ತದೆ. ಅವರು ಬಳಸಿಕೊಳ್ಳಬಹುದು. ಇದನ್ನು ಅಲ್ಲಿಯ ಪಂಚಾಯತ್ ನವರಿಗೆ ತಿಳಿಸಿ” ಎಂದು ಆಡಳಿತಾಧಿಕಾರಿ ಸಲಹೆ ನೀಡಿದರಲ್ಲದೆ, ಸುಳ್ಯ ಬೆಳೆಯುವ ಏರಿಯ. ಇಲ್ಲಿ ವ್ಯವಸ್ಥಿತ ತ್ಯಾಜ್ಯ ಘಟಕ ಇಲ್ಲವೆಂದರೆ ಶೋಭೆ ತರುವಂತದ್ದಲ್ಲಾ. ಆದ್ದರಿಂದ ಈ ಕುರಿತು ಮೊದಲ ಆದ್ಯತೆಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಮುಖ್ಯಾಧಿಕಾರಿ ಗಳಿಗೆ ಸೂಚನೆ ನೀಡಿದರು.

ಶಿಕ್ಷಣ ಇಲಾಖೆಗೆ ಸಂಬಂಧಿಸಿ ಮಾಹಿತಿಯನ್ನು ನೀಡುತ್ತಾ ಇದೀಗ ಸುಳ್ಯದಲ್ಲಿ 190 ಶಾಲೆಗಳಲ್ಲಿ ಒಟ್ಟು 19,806 ವಿಧ್ಯಾರ್ಥಿಗಳಿದ್ದು ಇದರಲ್ಲಿ ಒಂದನೇ ತರಗತಿಗೆ 1,640 ಮಕ್ಕಳ ಪ್ರವೇಶಾತಿ ಆಗಿದ್ದು ಇನ್ನೂ ಮುಂದುವರೆದಿದೆ. ಅಲ್ಲದೇ ಸರಕಾರಿ ಶಾಲೆಯಲ್ಲಿ 1 ನೇ ತರಗತಿಗೆ 640 ಮಕ್ಕಳು ದಾಖಲಾಗಿದ್ದು ಸರಕಾರಿ ಶಾಲೆಗಳಲ್ಲಿ ಒಟ್ಟಾರೆಯಾಗಿ 14,800 ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ ಎಂದು ಹೇಳಿದರು . ಅಲ್ಲದೇ ಈ ಹಿಂದೆಯೇ ಕೆಲವೊಂದು ಶಾಲೆಗಳಲ್ಲಿ ಕಟ್ಟಡಗಳು ಶಿಥಿಲಾವ್ಯವಸ್ಥೆಯಲ್ಲಿದ್ದು ಅವುಗಳ ಪುನರ್ ರಚನೆಗೆ ಹಣ ಒದಗಿಸುವಂತೆ, ಅಲ್ಲದೇ ತಾಲೂಕು ಪಂಚಾಯತ್ ನೇತೃತ್ವದಲ್ಲಿ ಉದ್ಯೋಗ ಖಾತರಿ ಯೋಜನೆಯ ಮೂಲಕ ಕೊಠಡಿ ರಚನೆಗೆ ಬೇಕಾದ ರೀತಿಯಲ್ಲಿ ಶಿಕ್ಷಕರು ಮತ್ತು ಸಮಿತಿ ಸದಸ್ಯರಿಗೆ ಮನದಟ್ಟು ಮಾಡಿ ಮುಂದಿನ ದಿನಗಳಲ್ಲಿ ಕೆಲವೊಂದು ಶಾಲೆಗಳ ಕೊಠಡಿ ಅಭಿವೃದ್ಧಿ ಪಡಿಸಲು ತಾಲೂಕು ಪಂಚಾಯತ್ ಕೂಡ ಸಹಕಾರ ನೀಡುವುದಾಗಿ ಇಒ ರಾಜಣ್ಣ ತಿಳಿಸಿದರು . ಅಲ್ಲದೇ ಗೃಹಲಕ್ಷ್ಮಿ ಯೋಜನೆಯಲ್ಲಿ ಸುಳ್ಯದ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಮಳೆಗಾಲ ಮಂಜಾಗೃತೆಯಾಗಿ ತಾಲೂಕಿನ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರ : ಪ್ರಾಕೃತಿಕ ವಿಕೋಪ ಕುರಿತು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ತಾ.ಪಂ. ಇ.ಒ. ರಾಜಣ್ಣ ಮಾಹಿತಿ ನೀಡಿದರು. ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರ ತೆರೆಯುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಗ್ರೇಡ್ 2 ತಹಶೀಲ್ದಾರ್ ಮಂಜುನಾಥ್, ಇ.ಒ. ರಾಮಣ್ಣ, ಪರೀಕ್ಷಾರ್ಥ ಐಎಫ್ ಎಸ್ ಅಧಿಕಾರಿ ಅಕ್ಷಯ್ ಅಶೋಕ್ ಪ್ರಕಾಶ್ ಕಾರಂತ್ ಹಾಗೂ ಇಲಾಖಾಧಿಕಾರಿಗಳು ಸಭೆಯಲ್ಲಿದ್ದರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!