
ಗುತ್ತಿಗಾರಿನ ಸ್ವಾತಿ ಕಾಂಪ್ಲೆಕ್ಸ್ ನಲ್ಲಿ ಪ್ರತಿದಿನ ಸಂಗೀತ ತರಗತಿ ಆರಂಭಗೊಳ್ಳಲಿದ್ದು, ಜೂ.16 ರಂದು ಸುಬ್ರಮಣ್ಯ ಭಟ್ ಎಂ. ಉದ್ಘಾಟನೆ ನೆರವೇರಿಸಿದರು. ಪ್ರತಿ ಆದಿತ್ಯವಾರ ಅಪರಾಹ್ನ 2:30 ರಿಂದ ಸಂಗೀತ ತರಗತಿ ನಡೆಯಲಿದ್ದು ಸಂಗೀತ ಗುರುಗಳಾದ ಅನುಷಾಲಕ್ಷ್ಮಿ ಅಡಿಕೆಹಿತ್ತಿಲು ತರಬೇತಿ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಚಂದ್ರಶೇಖರಯ್ಯ, ಶ್ರೀಮತಿ ಸುಶೀಲಾ, ಅನುಷಾಲಕ್ಷ್ಮಿ ಅಡಿಕೆಹಿತ್ತಿಲು, ಕೆ.ಶಕುಂತಲಾ ಭಟ್, ಶಿವಶಂಕರಿ ಹಾಗೂ ಸಂಗೀತಾಸಕ್ತರು ಉಪಸ್ಥಿತರಿದ್ದರು.
