ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರವು ಬಿಟ್ಟಿ ಭಾಗ್ಯಗಳನ್ನು ನೀಡಲು ಇದೀಗ ಪೆಟ್ರೋಲ್ ಡೀಸೆಲ್ ಮೇಲೆ ದರವನ್ನು ಹೆಚ್ಚಿಸಿ ಜನರ ಜೇಬಿಗೆ ಕತ್ತರಿ ಹಾಕುವ ಕೆಲಸವಾಗುತ್ತಿದೆ ಎಂದು ಬಿಜೆಪಿ ಮಂಡಲ ಸಮಿತಿ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ಹೇಳಿದರು.
ಸುಳ್ಯ ಹಳೆ ಬಸ್ಸು ನಿಲ್ದಾಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಶಾಸಕಿ ಮಾತನಾಡುತ್ತಾ ರಾಜ್ಯದಲ್ಲಿ ಮಹಿಳೆಯರಿಗೆ ಎರಡು ಸಾವಿರ ಕೊಟ್ಟು ಮನೆಯ ಯಜಮಾನ ಮತ್ತು ಮಕ್ಕಳಿಂದು ಕಿತ್ತುಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಹೀಗೆ ದರ ಏರಿಕೆ ಮುಂದುವರೆಸಿದರೆ ಉಗ್ರ ರೀತಿಯ ಹೋರಾಟವನ್ನು ಬಿಜೆಪಿ ನಡೆಸಲಿದೆ ಅಲ್ಲದೇ ಜನರು ಕೂಡ ತಕ್ಕದಾದ ಉತ್ತರವನ್ನು ನೀಡಲಿದ್ದಾರೆ ಎಂದು ಹೇಳಿದರು.
ಮಂಡಲ ಸಮಿತಿ ಅಧ್ಯಕ್ಷರಾದ ವೆಂಕಟ್ ವಳಲಂಬೆ ಮಾತನಾಡಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ಓಲೈಕೆ ರಾಜಕಾರಣ ಹೆಚ್ಚಾಗಿದ್ದು ಅಲ್ಲದೇ ಕ್ಯಾಪ್ಟನ್ ಬೃಜೇಶ್ ಚೌಟರ ಗೆಲುವಿನ ವಿಜಯೋತ್ಸವ ಸಂದರ್ಭದಲ್ಲಿ ನಡೆದ ದಾಳಿಯನ್ನು ಗಮನಿಸಿದಾಗ ನಾವು ಎಲ್ಲಿದ್ದೆವೆ. ಕಾನೂನು ಹಾಗೂ ಸರಕಾರ ಏನು ಮಾಡುತ್ತಿದೆ ಎಂದು ಸರಕಾರವನ್ನು ಪ್ರಶ್ನಿಸಿದರು . ಕಾಂಗ್ರೆಸ್ ಚುನಾವಣೆಯಲ್ಲಿ ಸೋಲು ಕಾಣುತ್ತಿದ್ದಂತೆ ಜನರಿಗೆ ಖಾಲಿ ಚೊಂಬು ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು . ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ ಮಾತನಾಡಿ ರಾಜ್ಯ ಕಾಂಗ್ರೆಸ್ ಸರಕಾರದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪತ್ರಕರ್ತರ ಮುಂದೆಯೇ ಸುಳ್ಳು ಹೇಳಿ ಅಧಿಕಾರ ಪಡೆದಿದ್ದೇವೆ ಎಂದು ಹೇಳಿದ್ದು ಇವರು ಸುಳ್ಳಿನ ಮೂಲಕವೇ ಅಧಿಕಾರದ ಗದ್ದುಗೆ ಏರಿದ್ದಾರೆ ಅಲ್ಲದೇ ಕಾಂಗ್ರೆಸ್ ನಾಯಕರು ಮತ್ತು ಸಚಿವರುಗಳು ಗ್ಯಾರಂಟಿಗಳನ್ನು ನಿಲ್ಲಿಸುವಂತೆ ಒತ್ತಡ ಹೇರುತ್ತಿದ್ದರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತ್ರ ಇದೀಗ ಇದನ್ನು ತಡೆ ಹಿಡಿಯದಂತೆ ನೋಡಿಕೊಳ್ಳುತ್ತಿದ್ದು ಕಾಂಗ್ರೆಸ್ ಒಳಗೆಯೇ ಗ್ಯಾರಂಟಿ ವಿಚಾರದಲ್ಲಿ ಗೊಂದಲಗಳು ಇವೆ ಎಂದು ಅವರು ಸರಕಾರದ ವಿರುದ್ದ ಕಿಡಿಕಾರಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಎ ವಿ ತೀರ್ಥರಾಮ , ಹರೀಶ್ ಕಂಜಿಪಿಲಿ , ಪ್ರದೀಪ್ ರೈ ,ಸುಬೋದ್ ಶೆಟ್ಟಿ ಮೇನಾಲ ,ಬುದ್ದ ನಾಯ್ಕ , ಪುಲಸ್ಯ ರೈ , ಚಂದ್ರ ಕೋಲ್ಚಾರ್ , ದಯಾನಂದ ಕುರುಂಜಿ , ನವ್ಯ ಚಂದ್ರಶೇಖರ್ , ಜಯರಾಜ್ ಕುಕ್ಕೇಟಿ , ಪ್ರಶಾಂತ್ ಕಾಯರ್ತೋಡಿ , ಬೂಡು ರಾಧಾಕೃಷ್ಣ , ದೇವರಾಜ್ ಕುದ್ಪಾಜೆ , ಜಗನ್ನಾಥ ಜಯನಗರ , ವಿಜಯ ಕುಮಾರ್ ಚಾರ್ಮಾತ, ಅವಿನಾಶ್ ಕೆಮ್ಮಿಂಜೆ , ಇಂದಿರಾ ಬಿ.ಕೆ , ಪಿ ಕೆ ಉಮೇಶ್ , ತೇಜಸ್ವಿನಿ ಕಟ್ಟಪುಣಿ , ನಿಕೇಶ್ , ಸುನಿಲ್ ಕೇರ್ಪಳ , ಸುಧಾಕರ ಆಲೆಟ್ಟಿ , ಗುಣವತಿ ಕೊಲ್ಲಂತಡ್ಕ , ಸತ್ಯವತಿ ಬಸವನಪಾದೆ , ಶಂಕರ ಪೆರಾಜೆ , ಅಶೋಕ್ ಅಡ್ಕಾರ್ , ಶಿವಾನಂದ ಕುಕ್ಕುಂಬಳ , ಸತೀಶ್ ಕೆ ಜಿ , ಚಿದಾನಂದ ಕುದ್ಪಾಜೆ , ಸುಜಾತ ಕುರುಂಜಿ , ಜಯರಾಮ ರೈ ಜಾಲ್ಸೂರು , ಆನಂದ ಬೆಟ್ಟಂಪಾಡಿ , ಚಂದ್ರ ಬೆಟ್ಟಂಪಾಡಿ ಮತ್ತಿತರರು ಉಪಸ್ಥಿತರಿದ್ದರು.