Ad Widget

ಪೇರಡ್ಕ ಸಂಭ್ರಮದ ಬಕ್ರೀದ್ ಆಚರಣೆ

ಗೂನಡ್ಕದ ಪೇರಡ್ಕ ಮೋಹಿದ್ದಿನ್ ಜುಮಾ ಮಸ್ಜಿದಲ್ಲಿ ಬಕ್ರೀದ್ ಹಬ್ಬದ ಮಹತ್ವ ಬಗ್ಗೆ ಸಮಾಜದಲ್ಲಿ ಮತ್ತು ಊರಿನಲ್ಲಿ ಸಹಬಾಳ್ವೆ ಅಗತ್ಯದ ಬಗ್ಗೆ ಖತೀಬ್ ನಹೀಮ್ ಫೈಜಿ ಮಾಹಿತಿ ನೀಡಿ ದೇಶದ ಜನರ ಒಳಿತಿಗೆ, ಅಭಿವೃದ್ಫಿ, ಶಾಂತಿಗಾಗಿ ವಿಶೇಷ ಪ್ರಾರ್ಥನೆ ನಡೆಸಿದರು, ಎಲ್ಲರು ಪರಸ್ಪರ ಬಕ್ರೀದ್ ಹಬ್ಬದ ಶುಭಾಶಯ ವಿನಿಮಯ ಮಾಡಿ ಖಬರಸ್ಥಾನದಲ್ಲಿ ಮತ್ತು ಪೇರಡ್ಕ ಗೂನಡ್ಕ ದರ್ಗಾದಲ್ಲಿ...

ನಿಂತಿಕಲ್ಲು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಬಕ್ರೀದ್ ಆಚರಣೆ

ತ್ಯಾಗ ಬಲಿದಾನ ದ ಹಬ್ಬವಾದ ಬಕ್ರೀದ್ ಹಬ್ಬವನ್ನು ನಿಂತಿಕಲ್ಲು ಬದ್ರಿಯಾ ಜುಮಾ ಮಸೀದಿಯಲ್ಲಿ ವಿಜೃಂಭಣೆ ಯಿಂದ ಆಚರಿಸಲಾಯಿತು. ಜಮಾತ್ ಖತೀಬ್ ಜಾಪರ್ ಸಹದಿ ಯವರು ಖುತುಬಾ ಕ್ಕೆ ನೇತೃತ್ವ ನೀಡಿ ಬಕ್ರೀದ್ ಸಂದೇಶ ನೀಡಿದರು. ಮುಸ್ತಪಾ ಜುಹುರಿ, ಜಮಾತ್ ಪದಾದಿಕಾರಿಗಳು. ಸದಸ್ಯರು ವಿದ್ಯಾರ್ಥಿಗಳು ಊರವರು ಉಪಸ್ಥಿತರಿದ್ದರು.
Ad Widget

ಕಾಂತಮಂಗಲ ಕೊಲೆ ಮಾದರಿಯಲ್ಲಿ ಶವ ಪತ್ತೆ ಹಿನ್ನಲೆ ಪೋಲಿಸ್ ಇಲಾಖೆ ತನಿಖೆ ಆರಂಭ

ಸುಳ್ಯ: ಸುಳ್ಯ ಕಾಂತಮಂಗಲ ಶಾಲೆಯ ಊಟದ ಹಾಲ್ ಮುಂಭಾಗದಲ್ಲಿ ಕೊಲೆ ಮಾದರಿಯಲ್ಲಿ ಶವ ಪತ್ತೆಯಾಗಿದ್ದು ಸುಬ್ರಹ್ಮಣ್ಯ ತನಿಖಾ  ಠಾಣಾ ಎಸೈ ಮಹೇಶ್ ನೇತೃತ್ವದಲ್ಲಿ ತನಿಖೆ ಆರಂಭಿಸಿದ್ದು ಇದೀಗ ಸ್ಥಳಕ್ಕೆ ಪುತ್ತೂರು ಡಿವೈಎಸ್ ಪಿ ಆಗಮಿಸಿದ್ದು ಪರಿಶೀಲನೆ ನಡೆಸಲಾಗುತ್ತಿದ್ದು ಮೃತಪಟ್ಟ ವ್ಯಕ್ತಿಯು ಅಪರಿಚಿತನಾಗಿದ್ದು, ಶವದ ಬಳಿಯಲ್ಲಿ ಒಂದು ಸಿಮ್ ಕಾರ್ಡ್ ಲಭ್ಯವಾಗಿದ್ದು ಅಲ್ಲದೆ ತಲೆ ಕಲ್ಲಿನಿಂದ ಜಜ್ಜಿದ...

ಕಾಂತಮಂಗಲ:  ಶಾಲಾ ಮಕ್ಕಳ ಊಟದ ಜಗಲಿಯಲ್ಲಿ ಯುವಕನ ಶವ ಪತ್ತೆ!  

ಯುವಕನೊಬ್ಬನ ತಲೆಗೆ ಕಲ್ಲು ಹೊತ್ತು ಹಾಕಿ ಕೊಲೆ ಮಾಡಿರುವ ರೀತಿಯಲ್ಲಿ ಯುವಕನ ಶವ ಪತ್ತೆಯಾದ ಘಟನೆ ಅಜ್ಜಾವರ ಗ್ರಾಮದ ಕಾಂತಮಂಗಲದ ಶಾಲಾ ಮಕ್ಕಳ ಊಟದ ಜಗಲಿಯಲ್ಲಿ ನಡೆದಿದೆ.ಸುಮಾರು 25 – 30 ವರ್ಷದ ಅಪರಿಚಿತ ಯುವಕನ ಶವ ಎಂದು ಅಂದಾಜಿಸಲಾಗಿದೆ. ಪೋಲೀಸರು ಸ್ಥಳಕ್ಕೆ ಬಂದಿದ್ದು‌ ಪರಿಶೀಲನೆ   ನಡೆಸುತಿದ್ದಾರೆ. ಊರವರು ಜಮಾಯಿಸಿದ್ದಾರೆ.

ಅರಂತೋಡು : ವಿದ್ಯುತ್ ಕಂಬಕ್ಕೆ ಗುದ್ದಿ ಪರಾರಿಯಾದ ವಾಹನ

ಆರಂತೋಡು ಪೆಟ್ರೋಲ್ ಪಂಪ್ ಸಮೀಪ ವಿದ್ಯುತ್ ಕಂಬಕ್ಕೆ ಕಾರೊಂದು ಗುದ್ದಿ ಪರಾರಿಯಾದ ಘಟನೆ ನಡೆದಿದೆ. ರಾತ್ರಿ ಅಂದಾಜು ಎರಡು ಗಂಟೆ ವೇಳೆಗೆ ಘಟನೆ ನಡೆದಿದ್ದು ಕಾರು ಗುದ್ದಿದ ರಭಸಕ್ಕೆ ವಿದ್ಯುತ್ ಕಂಬ ಮುರಿದಿದೆ. ವಾಹನ ಹಾಗೂ ಪ್ರಯಾಣಿಕರಿಗೆ ಹಾನಿಯಾದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಕುಕ್ಕೆ ಸುಬ್ರಹ್ಮಣ್ಯ: ಡಾ. ರವಿ ಕಕ್ಕೆ ಪದವು ಅವರಿಗೆ ರೋಟರಿಯಿಂದ ತೆರೆಮರೆಯ ನಾಯಕ ಪ್ರಶಸ್ತಿ

        ಸುಬ್ರಹ್ಮಣ್ಯ ಜೂನ್ 16. ಕುಕ್ಕೆ ಸುಬ್ರಹ್ಮಣ್ಯದ ರೋಟರಿ ಕ್ಲಬ್ಬಿನ ಕಾರ್ಯ ನಿಕಟ ಪೂರ್ವ ಕಾರ್ಯದರ್ಶಿ, ಕ್ರಿಯಾಶೀಲ ಕೆಲಸಗಾರ ,ಸಮಾಜ ಸೇವಕ, ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕ ಡಾ. ರವಿ ಕಕ್ಕೆಪದವು ಅವರಿಗೆ ರೋಟರಿ ಜಿಲ್ಲೆ 31 81ರ ಈ ವರ್ಷದ ತೆರೆಮರೆಯ ನಾಯಕ ಪ್ರಶಸ್ತಿ ಲಭಿಸುತ್ತದೆ.  ಈ ತಿಂಗಳ...

ಗುತ್ತಿಗಾರು ಲಯನ್ಸ್ ಕ್ಲಬ್ ನ ಅಧ್ಯಕ್ಷರಾಗಿ ಕುಶಾಲಪ್ಪ ಟಿ., ಕಾರ್ಯದರ್ಶಿಯಾಗಿ ವೆಂಕಪ್ಪ ಕೇನಾಜೆ, ಕೋಶಾಧಿಕಾರಿಯಾಗಿ ಮಣಿಯಾನ ಪುರುಷೋತ್ತಮ

ಗುತ್ತಿಗಾರು ಲಯನ್ಸ್ ಕ್ಲಬ್ ನ 24-25ನೇ ಸಾಲಿನ ಅಧ್ಯಕ್ಷರಾಗಿ ಕುಶಾಲಪ್ಪ ಟಿ, ಕಾರ್ಯದರ್ಶಿಯಾಗಿ ವೆಂಕಪ್ಪ ಕೇನಾಜೆ ಹಾಗೂ ಕೋಶಾಧಿಕಾರಿಯಾಗಿ ಮಣಿಯಾನ ಪುರುಷೋತ್ತಮ ನಿಯುಕ್ತಿಗೊಂಡಿರುತ್ತಾರೆ.ಉಪಾಧ್ಯಕ್ಷರುಗಳಾಗಿ ಪ್ರವೀಣ್ ಮುಂಡೋಡಿ ಮತ್ತು ಶಿವರಾಮ ಚಿಲ್ತಡ್ಕ ಅವರನ್ನು ನಿಯುಕ್ತರಾದರು. ಇತರ ಪದಾಧಿಕಾರಿಗಳಾಗಿ ಕೆ ಬಾಲಕೃಷ್ಣ, ಜಯರಾಮ ಕಡ್ಲಾರ್, ಎಂ ಕೆ ಮೋಹನಕುಮಾರ್, ಡಿ ಆರ್ ಉದಯಕುಮಾರ್, ವಿನೋದ್ ಕುಮಾರ್ ಮುಂಡೋಡಿ, ನಿತ್ಯಾನಂದ...

ಕುಕ್ಕೆ:  ಕುಮಾರಧಾರ ಸ್ಥಾನಗಟ್ಟ ನದಿಯಲ್ಲಿ ಸ್ವಚ್ಛತಾ ಕಾರ್ಯ

           ಸುಬ್ರಹ್ಮಣ್ಯ, ಜೂನ್ 16: ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರ ನದಿ ಸ್ನಾನಘಟ್ಟ ನದಿಯಲ್ಲಿ ಸಾವಿರಾರು ಸಂಖ್ಯೆಯ ಬಟ್ಟೆ ಬರೆಗಳು ನದಿಯಲ್ಲಿ ಬಿದ್ದಿದ್ದು ಇಡೀ ನದಿಯ ನೀರು ಮಲಿನ  ಗೊಂಡಿರುವುದಲ್ಲದೆ ಪಕ್ಕದ ಹರಿಯುತ್ತಿರುವ ನದಿಯ ಭಾಗಗಳಲ್ಲಿ ಕೂಡ ವಸ್ತ್ರಗಳು ತೇಲಿಕೊಂಡು ಬಂದು ಇಕ್ಕೆಲಗಳಲ್ಲಿ ಶೇಖರಣೆ ಗೊಂಡಿರುತ್ತದೆ. ಇದನ್ನು ಮನಗಂಡ ರವಿ ಕಕ್ಕೆ ಪದವು ಸಮಾಜ ಸೇವ ಟ್ರಸ್ಟ್...
error: Content is protected !!