ಸುಳ್ಯದ ಕಾಂತಮಂಗಲ ಶಾಲೆಯ ಭೋಜನ ಕೊಠಡಿಯ ಮುಂಭಾಗದಲ್ಲಿ ಶವವಾಗಿ ಪತ್ತೆಯಾದ ವ್ಯಕ್ತಿಯನ್ನು ವಸಂತ ಎಂದು ಗುರುತಿಸಲಾಗಿದ್ದು ಕೊಲೆಯಾದ ವ್ಯಕ್ತಿಯು ವಿರಾಜಪೇಟೆ ಮೂಲದವನಾಗಿದ್ದು ಈತನು ಹೆಂಡತಿಯ ಮನೆಯಲ್ಲಿ ವಾಸ್ತವ್ಯವಾಗಿದ್ದು ಸದ್ಯ ಒಂದು ತಿಂಗಳುಗಳಿಂದ ಸವಣೂರಿನಲ್ಲಿ ತೋಟದ ಕೆಲಸ ನಿರ್ವಹಿಸುತ್ತಿದ್ದು ಕೆಲಸ ನಿರ್ವಹಿಸುವ ಮನೆಯಿಂದ ನಿನ್ನೆ ಒಂದು ಸಾವಿರ ರೂಪಾಯಿಗಳನ್ನು ಪಡೆದುಕೊಂಡು ಬಂದಿದ್ದರು ಎಂದು ಎನ್ನಲಾಗಿದೆ. ಸ್ಥಳಕ್ಕೆ ಡಾಗ್ ಸ್ಕಾಡ್ ಮತ್ತು ಮೃತ ವ್ಯಕ್ತಿಯ ಮನೆಯವರು ಬರುತ್ತಿರುವುದಾಗಿ ತಿಳಿದು ಬಂದಿದೆ.
