
ಸುಳ್ಯ: ಸುಳ್ಯ ಕಾಂತಮಂಗಲ ಶಾಲೆಯ ಊಟದ ಹಾಲ್ ಮುಂಭಾಗದಲ್ಲಿ ಕೊಲೆ ಮಾದರಿಯಲ್ಲಿ ಶವ ಪತ್ತೆಯಾಗಿದ್ದು ಸುಬ್ರಹ್ಮಣ್ಯ ತನಿಖಾ ಠಾಣಾ ಎಸೈ ಮಹೇಶ್ ನೇತೃತ್ವದಲ್ಲಿ ತನಿಖೆ ಆರಂಭಿಸಿದ್ದು ಇದೀಗ ಸ್ಥಳಕ್ಕೆ ಪುತ್ತೂರು ಡಿವೈಎಸ್ ಪಿ ಆಗಮಿಸಿದ್ದು ಪರಿಶೀಲನೆ ನಡೆಸಲಾಗುತ್ತಿದ್ದು ಮೃತಪಟ್ಟ ವ್ಯಕ್ತಿಯು ಅಪರಿಚಿತನಾಗಿದ್ದು, ಶವದ ಬಳಿಯಲ್ಲಿ ಒಂದು ಸಿಮ್ ಕಾರ್ಡ್ ಲಭ್ಯವಾಗಿದ್ದು ಅಲ್ಲದೆ ತಲೆ ಕಲ್ಲಿನಿಂದ ಜಜ್ಜಿದ ಮಾದರಿಯಲ್ಲಿ ಕೆಂಪು ಕಲ್ಲಿನ ಹುಡಿಗಳು ಶವದ ಸ್ಥಳದಲ್ಲಿ ಕಂಡುಬರುತ್ತಿದ್ದು ಇದೀಗ ತನಿಖೆ ಮುಂದುವರೆಸಲಾಗಿದೆ.