Ad Widget

ನೆಹರು ಮೆಮೋರಿಯಲ್ ಕಾಲೇಜು: “ಮಾದಕ ವ್ಯಸನಮುಕ್ತ ದಕ್ಷಿಣ ಕನ್ನಡ ಜಿಲ್ಲೆ ಅಭಿಯಾನ” ಕರ‍್ಯಕ್ರಮ


ನೆಹರು ಮೆಮೋರಿಯಲ್ ಕಾಲೇಜು ಇಲ್ಲಿನ ಆಂತರಿಕಗುಣಮಟ್ಟ ಖಾತರಿಕೋಶ ಮತ್ತು ಮಾದಕ ದ್ರವ್ಯ ವಿರೋಧಿ ಕೋಶ ಇದರ ಜಂಟಿ ಆಶ್ರಯದಲ್ಲಿ ಮಾದಕ ವ್ಯಸನದ ಬಗ್ಗೆ ಅರಿವು ಕರ‍್ಯಕ್ರಮವನ್ನು ದಿನಾಂಕ.13.06.2024ನೇ ಗುರುವಾರದಂದು ಕಾಲೇಜಿನ ದೃಶ್ಯಶ್ರವಣ ಕೊಠಡಿಯಲ್ಲಿ ಆಯೋಜಿಸಲಾಗಿತ್ತು. ಕರ‍್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎA ಇವರು ವಹಿಸಿದ್ದರು. ಮಾದಕ ವ್ಯಸನವು ಸಮಾಜದ ದೊಡ್ಡ ಕೆಡುಕುಗಳಲ್ಲಿ ಒಂದಾಗಿದೆ ಇದು ವ್ಯಸನಿಯ ಮೇಲೆ ಮಾತ್ರವಲ್ಲದೆ ಅವನ ಕುಟುಂಬ, ಸ್ನೇಹಿತರು, ಸಂಬAಧಿಕರು, ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಯುವ ಶಕ್ತಿಯು ಇದರ ವಿರುದ್ಧ ಹೋರಾಡಬೇಕು ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿಯನ್ನು ನೀಡಿರುವ ಶ್ರೀಮತಿ. ಕೃಪಾ.ಎ ಸಮಾಜಕರ‍್ಯ ವಿಭಾಗ ಮುಖ್ಯಸ್ಥರು ಮಾದಕ ವ್ಯಸನದ ಕೆಟ್ಟ ಪರಿಣಾಮಗಳ ಬಗ್ಗೆ, ವಿವಿಧ ರೀತಿಯ ಮಾದಕ ವ್ಯಸನಗಳ ಬಗ್ಗೆ ಮತ್ತು ಅದು ದೈಹಿಕ ಮತ್ತು ಮಾನಸಿಕವಾಗಿ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವನ್ನು ಮೂಡಿಸಿದರು. ವಿದ್ಯಾರ್ಥಿ ಕ್ಷೇಮಾಪಾಲನಾ ಅಧಿಕಾರಿಗಳಾಗಿರುವ ಶ್ರೀಮತಿ ರತ್ನಾವತಿ.ಡಿ ಕರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀಮತಿ. ಉಷಾ ಯಂ.ಪಿ ಮುಖ್ಯಸ್ಥರು ಗಣಿತಶಾಸ್ತç ವಿಭಾಗ ಸ್ವಾಗತಿಸಿ, ಶ್ರೀಯುತ ಹರಿಪ್ರಸಾದ್.ಎ ಪ್ರಾಧ್ಯಾಪಕರು ವ್ಯವಹಾರ ನಿರ್ವಹಣಾ ವಿಭಾಗ ಕರ‍್ಯಕ್ರಮಕ್ಕೆ ವಂದಿಸಿದರು. ಕುಮಾರಿ ರತ್ನಸಿಂಚನ ಅಂತಿಮ ಬಿ.ಕಾಂ ಪ್ರಾರ್ಥಿಸಿದರು. ಐಕ್ಯೂಎಸಿ ಸಂಯೋಜಕರಾದ ಡಾ. ಮಮತ.ಕೆ ಕರ‍್ಯಕ್ರಮದ ನಿರೂಪಣೆಯನ್ನು ಮಾಡಿದರು. ವಿಷ್ಣುಪ್ರಶಾಂತ್.ಬಿ ಪ್ರಾಧ್ಯಾಪಕರು ಅರ್ಥಶಾಸ್ತç ವಿಭಾಗ ಸಹಕರಿಸಿದರು.

Related Posts

error: Content is protected !!