Ad Widget

ನಾಳೆ (ಜೂ.15)ವಿವಿಧೆಡೆ ವಿದ್ಯುತ್ ವ್ಯತ್ಯಯ

ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಕಲ್ಲುಗುಂಡಿ ಪೀಡರಿನ ಕೇಬಲ್‌ನ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 11ಕೆ.ವಿ ಡಿಪ್ಲೊ, ತೋಡಿಕಾನ, ಕಲ್ಲುಗುಂಡಿ ಫೀಡರುಗಳಲ್ಲಿ ಜೂ.15 ರಂದು ಬೆಳಿಗ್ಗೆ 9:00 ರಿಂದ ಸಾಯಂಕಾಲ 6:00 ರ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆಯಲ್ಲಿ...

ಮಂಡೆಕೋಲು: ಮೈಲೆಟ್ಟಿಪಾರೆ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಕ್ಕೆ ಕಿರಿಯ ಪಶುವೈದ್ಯಕೀಯ ಪರೀಕ್ಷಕರಾಗಿ ರೋಹಿತ್ ಕೆ.ಎ. ನೇಮಕ

ಮಂಡೆಕೋಲು ಮೈಲೆಟ್ಟಿಪಾರೆ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಕ್ಕೆ ಕಿರಿಯ ಪಶುವೈದ್ಯಕೀಯ ಪರೀಕ್ಷಕರಾಗಿ ರೋಹಿತ್ ಕೆ.ಎ. ಕೊಯಿಂಗಾಜೆಯವರು ನೇಮಕಗೊಂಡಿದ್ದಾರೆ.6 ತಿಂಗಳ ಹಿಂದೆ ಸರಕಾರದಿಂದ ಕಿರಿಯ ಪಶುವೈದ್ಯಕೀಯ ಪರಿವೀಕ್ಷಕರಾಗಿ ನೇಮಕಗೊಂಡಿರುವ ರೋಹಿತ್ ರವರು ಸುಳ್ಯಕ್ಕೆ ಬಂದು ಕರ್ತವ್ಯ ನಿರ್ವಹಿಸುತಿದ್ದರು. ಕಳೆದ ಎರಡು ವಾರಗಳಿಂದ ಮಂಡೆಕೋಲು ಕರ್ತವ್ಯಕ್ಕೆ ಹಾಜರಾಗಿರುವ ಇವರು ಪ್ರತೀ ದಿನ ಸೋಮವಾರ ದಿಂದ ಶನಿವಾರದವರೆಗೆ ಮಧ್ಯಾಹ್ನದ ತನಕ...
Ad Widget

ಬೆಳ್ಳಾರೆ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಗೆ ವಿಶ್ವ ಕೌಶಲ್ಯ ಮಂಡಳಿಯಿಂದ ಮಾನ್ಯತೆ

ಭಾರತ ಸರಕಾರದ ಅಭಿವೃದ್ಧಿ ಏಜನ್ಸಿಯಿಂದ ಪ್ರವರ್ತಿತ ಭಾರತ್ ಸೇವಕ ಸಮಾಜದ ಅಂಗೀಕೃತ ಸಂಸ್ಥೆಯಾದ ಬೆಳ್ಳಾರೆಯ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಗೆ ಬ್ರಿಟನ್ ರಾಜಧಾನಿ ಲಂಡನ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೌಶಲ್ಯ ಶಿಕ್ಷಣದ ಜಾಗತಿಕ ಪ್ರವರ್ತಕ ವಿಶ್ವ ಕೌಶಲ್ಯ ಮಂಡಳಿಯ(ವರ್ಲ್ಡ್ ಸ್ಕಿಲ್ ಕೌನ್ಸಿಲ್) ಮಾನ್ಯತೆ ಲಭಿಸಿದೆ. ಭಾರತ್ ಸೇವಕ್ ಸಮಾಜವು ತನ್ನ ಎಲ್ಲಾ ಕೋರ್ಸ್ ಗಳನ್ನು ಇನ್ನು ಮುಂದೆ...

ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾದ ಕಾರ್ಯದರ್ಶಿಯಾಗಿ ಚಂದ್ರಶೇಖರ ಪನ್ನೆ, ಸದಸ್ಯರಾಗಿ ಸೋಮನಾಥ ಪೂಜಾರಿ, ಗಂಗರತ್ನ ಪೆರಾಭೆ ನೇಮಕ

ಬಿಜೆಪಿ ಜಿಲ್ಲಾ  ಹಿಂದುಳಿದ ಮೋರ್ಚಾದ ಕಾರ್ಯದರ್ಶಿಯಾಗಿ ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಶೇಖರ ಪನ್ನೆ ಹಾಗೂ ಸದಸ್ಯರಾಗಿ ಸೋಮನಾಥ ಪೂಜಾರಿ ಮತ್ತು ಗಂಗರತ್ನ ಪೆರಾಭೆ ಯವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ರವರು ನೇಮಕ ಮಾಡಿದ್ದಾರೆ.ಕಾರ್ಯದರ್ಶಿಯಾಗಿ ಆಯ್ಕೆಯಾದ ಚಂದ್ರಶೇಖರ ಪನ್ನೆ ಯವರು ಬೆಳ್ಳಾರೆ ಪಂಚಾಯತ್ ಮಾಜಿ ಅಧ್ಯಕ್ಷರಾಗಿ ಕಳೆದ ಅವಧಿಯಲ್ಲಿ ಸೇವೆ ಸಲ್ಲಿಸಿದ್ದರು. ಸುಳ್ಯ...

ಮರ್ಕಂಜ : ವಿದ್ಯಾರ್ಥಿನಿಗೆ ಹೊಡೆದ ಶಿಕ್ಷಕಿಯ ವಿರುದ್ಧ ದೂರು ನೀಡಿದ ಪೋಷಕರು

ಮುಡ್ನೂರು ಮರ್ಕಂಜ ಶಾಲೆಯ  ಶಿಕ್ಷಕಿಯೊಬ್ಬರು ತರಗತಿಯಲ್ಲಿ ಚೇಷ್ಟೆ ಮಾಡುತ್ತಿದ್ದ ಎಲ್ಲಾ ಮಕ್ಕಳಿಗೆ ಹೊಡೆದಿದ್ದರೆನ್ನಲಾಗಿದೆ. ಪರಿಣಾಮವಾಗಿ ವಿದ್ಯಾರ್ಥಿಯೊರ್ವಳ ಅಂಗೈಯಲ್ಲಿ ರಕ್ತ ಕಂದು ಹೋಗಿರುವುದನ್ನು ಕಂಡು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಲ್ಲದೆ, ಶಿಕ್ಷಕಿ ಮೇಲೆ ಪೋಲೀಸ್ ದೂರು ನೀಡಿದ ಘಟನೆ ಜೂ.13 ರಂದು ವರದಿಯಾಗಿದೆ.

“ರಕ್ತದಾನ ಜೀವದಾನ”

ಪ್ರತಿ ವರ್ಷ ಜೂನ್ 14 ರಂದು “ವಿಶ್ವ ರಕ್ತದಾನಿಗಳ ದಿನ” ಎಂದು ಆಚರಿಸಲಾಗುತ್ತದೆ. ಈ ಆಚರಣೆಯ ಉದ್ದೇಶ ಏನೆಂದರೆ ಪ್ರತಿಯೊಬ್ಬರೂ ಇದರಿಂದ ಪ್ರೇರಿತರಾಗಿ ಹೆಚ್ಚು ಹೆಚ್ಚು ಜನರು ರಕ್ತದಾನಕ್ಕೆ ಪ್ರೇರಣೆಗೊಳ್ಳಬೇಕೆಂಬುದು ನಮ್ಮೆಲ್ಲರ ಆಶಯ.ಜಗತ್ತಿನ ಅತೀ ದೊಡ್ಡ ಸಂಶೋಧನೆ ಎಂದರೆ, ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು...
error: Content is protected !!