
ಕಲ್ಚರ್ಪೆಯಲ್ಲಿ ಮಳೆನೀರಿಗೆ ಸಿಲುಕಿ ಹರಿದು ಹೋಗಿ ಪಯಸ್ವಿನಿಗೆ ಸೇರಬಹುದಾದ ಕಸವನ್ನು ತೆರವುಗೊಳಿಸುವ ಕಾರ್ಯಕ್ಕೆ ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ವಿನಯಕುಮಾರ್ ಕಂದಡ್ಕ ಪ್ರಯತ್ನಿಸಿದ್ದು, ಜತೆಗೆ ಅಧಿಕಾರಿಗಳ ವಿರುದ್ದ ಆಕ್ಷೇಪ ವ್ಯಕ್ತಪಡಿಸಿದ್ದರು. ಜನರಿಗೆ ಸಮಸ್ಯೆಗಳು ಆಗುತ್ತಿರುವಾಗ ಕೆಲಸ ಮಾಡಿಸಲು ಗಮನಿಸಲು ಅರೋಗ್ಯ ಶಾಖೆಗೆ ಸಮಯವಿಲ್ಲ. ಅಧಿಕಾರಿಗಳಿಗೆ ಊರವರು ಮನವಿಕೊಟ್ಟು ಪ್ರಯೋಜನವಿಲ್ಲ ಎಂಬಂತಾಗಿದ್ದು ಗುತ್ತಿಗೆದಾರರಿಗೆ ಹಿಟಾಚಿ ಸಿಗೋದಿಲ್ಲ ಎನ್ನುವ ಪರಿಸ್ಥಿತಿ ಎದುರಾಗಿದೆ. ಊರಿನ ಅರೋಗ್ಯ ಸುರಕ್ಷತೆಗೆ, ನಗರ ಪಂಚಾಯತ್ ನ ಮರ್ಯಾದೆ ಹರಾಜಾಗುವುದನ್ನು ತಡೆಯಲು ನಾವೇ ನಿಂತು ಕೆಲಸ ಮಾಡಿಸಬೇಕಿದೆ ಎಂದು ಹೇಳಿಕೆ ಕೊಟ್ಟಿದ್ದರು.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಧ್ಯಕ್ಷರ ಈ ಕಾರ್ಯಕ್ಕೆ ಟೀಕೆ ವ್ಯಕ್ತವಾಗಿದ್ದು ಅಧಿಕಾರ ಇದ್ದಾಗ ಕೆಲಸ ಮಾಡದವರು ಈಗ ನಾಟಕ ಮಾಡುತ್ತಿದ್ದಾರೆ. ಆಡಳಿತದಲ್ಲಿರುವಾಗ ಅಧಿಕಾರಿಗಳಿಗೆ ಬಿಸಿ ಮುಟ್ಟಿಸದೇ ಈಗ ಹೇಳಿ ಏನು ಪ್ರಯೋಜನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
