
ಸುಳ್ಯ ನಗರ ಆಡಳಿತ ವ್ಯಾಪ್ತಿಯ ಅಂಬೆಟಡ್ಕದಲ್ಲಿ ಕಾರ್ಯಚರಿಸುತ್ತಿರುವ ಗೌತಮ್ ಹೋಟೆಲ್ ಮತ್ತು ಮಹಾಲಕ್ಷ್ಮಿ ಗ್ಯಾರಜ್ ನಡುವಿನಲ್ಲಿ ಭಗವತಿ ಸರ್ವಿಸ್ ಸ್ಟೇಶನ್ ಗೆ ತೆರಳುವ ರಸ್ತೆಯಲ್ಲಿ ಮುಖ್ಯ ರಸ್ತೆಗೆ ತಾಗಿಕೊಂಡು ಬೃಹದಾಕಾರದ ಗುಂಡಿ ನಿರ್ಮಾಣವಾಗಿದ್ದು ಈ ಹಿಂದಿನಿಂದಲೂ ಈ ಗುಂಡಿಯ ಕುರಿತು ವರದಿಗಳು ಪ್ರಕಟವಾಗಿದ್ದರು ಅಧಿಕಾರಿಗಳು ಇನ್ನು ಎಚ್ಚೆತ್ತುಕೊಳ್ಳದೇ ಇದ್ದು ಆಡಳಿತಕ್ಕೆ ಹಿಡಿದ ಕೈ ಗನ್ನಡಿಯಾಗಿದೆ. ಇಲ್ಲಿ ಸಂಚರಿಸುವ ಸಾರ್ವಜನಿಕರು ಈ ಗುಂಡಿಯನ್ನು ಮುಚ್ಚುವಂತೆ ಆಗ್ರಹಿಸುತ್ತಿದ್ದು, ಈ ವರದಿಯ ಬಳಿಕವಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುವರೇ ಎಂದು ಕಾದು ನೋಡಬೇಕಿದೆ.
ನಗರ ಪಂಚಾಯತ್ ಮುಖ್ಯಾಧಿಕಾರಿಗಳನ್ನು ಸಂಪರ್ಕಿಸಿ ವಿಚಾರಿಸಿದಾಗ ಎಂ. ಎಚ್. ಸುಧಾಕರ್ ಮಾತನಾಡಿ ಈ ಗುಂಡಿಯನ್ನು ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು .