Ad Widget

ಸುಳ್ಯ : ತಾಲೂಕಿನ ಒಕ್ಕೂಟದ ಅಧ್ಯಕ್ಷರುಗಳ ಕೇಂದ್ರ ಸಮಿತಿಯ ಸಭೆ

. . . . . . . . .

ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿಟ್ರಸ್ಟ್ (ರಿ.) ಸುಳ್ಯ ತಾಲೂಕಿನ ಒಕ್ಕೂಟ ಅಧ್ಯಕ್ಷರುಗಳ ಸಭೆಯನ್ನು ಕೇಂದ್ರ ಸಮಿತಿಯ ಅಧ್ಯಕ್ಷರಾದ ಸುರೇಶ್ಕಣೆಮರಡ್ಕರವರ ಅಧ್ಯಕ್ಷತೆಯಲ್ಲಿ ಸುಳ್ಯ ಯೋಜನಾ ಕಛೇರಿಯ ಸಭಾಂಗಣದಲ್ಲಿ ನಡೆಯಿತು. ಕರಾವಳಿ ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕರಾದ ಶ್ರೀದುಗ್ಗೇಗೌಡರವರು ದೀಪಬೆಳಗಿಸಿ ಉದ್ಘಾಟನೆಯನ್ನು ಮಾಡಿ ಮಾತನಾಡುತ್ತ,

. . . . . . .

ಗ್ರಾಮಾಭಿವೃಧ್ಧಿಯೋಜನೆಯು 1982 ರಲ್ಲಿ ಆರಂಭವಾಗಿದ್ದು, ಯೋಜನೆಯ ಪ್ರಾರಂಭಕ್ಕೆ ಮೊದಲು ಸದಸ್ಯನ ಸ್ಥಿತಿಗತಿ ಹೇಗೆ ಇತ್ತು. ಅದೇ ಸದಸ್ಯನ ಪ್ರಸ್ತುತ ಸ್ಥಿತಿಗತಿಯನ್ನು ಗಮನಿಸಿದರೆ ತುಂಬಾ ಪ್ರಗತಿಯನ್ನು ಹೊಂದಿದ್ದಾರೆ. ಒಕ್ಕೂಟದ ಅಧ್ಯಕ್ಷರುಗಳು ಜವಾಬ್ದಾರಿಯುತವಾಗಿ ಸೇವೆಯನ್ನು ಮಾಡಿದಾಗ ಆ ಒಕ್ಕೂಟದ ಸದಸ್ಯರ ಕುಟುಂಬ ಮತ್ತು ಸಮುದಾಯವು ಪ್ರಗತಿ ಹೊಂದಲು ಸಾಧ್ಯವಿದೆ. ಯೋಜನೆಯುಬಿ.ಸಿಟ್ರಸ್ಟ್ ಆಗಿದ್ದು, ಟ್ರಸ್ಟ್ ಮತ್ತು ಬ್ಯಾಂಕ್ಗೆ ಇರುವ ವ್ಯತ್ಯಾಸದ ಬಗ್ಗೆಮಾಹಿತಿ ನೀಡಿದರು. ಒಕ್ಕೂಟದ ಅಧ್ಯಕ್ಷರುಗಳು ತಮ್ಮ ಒಕ್ಕೂಟಕ್ಕೆ ಯಾವುದೇ ಸಮಸ್ಯೆಗಳು ಎದುರಾಗದಂತೆ ಒಮ್ಮ ತದಿಂದ ಸೇವೆಸಲ್ಲಿಸಬೇಕೆಂದು ಪ್ರೇರಣೆಯ ಮಾತನ್ನು ಹೇಳಿದರು. ಈ ಸಂದರ್ಭದಲ್ಲಿ 2023-24 ನೇಸಾಲಿನಲ್ಲಿ ವಿವಿಧ ವಿಷಯಗಳಲ್ಲಿ ಸಾಧನೆ ಮಾಡಿದ ಒಕ್ಕೂಟಗಳನ್ನು ಗುರುತಿಸಲಾಯಿತು. ಈ ಸಂದರ್ಭದಲ್ಲಿ ದಕ್ಷಿಣಕನ್ನಡಜಿಲ್ಲೆ 2 ರ ಜಿಲ್ಲಾನಿರ್ದೇಶಕರಾದ ಪ್ರವೀಣ್ಕುಮಾರ್ರವರು, ಎಲ್ಲಾವಲಯದ ಒಕ್ಕೂಟಗಳ ವಲಯಾಧ್ಯಕ್ಷರುಗಳು ಉಪಸ್ಥಿತರಿದ್ದರು. ಈಸಭೆಯಲ್ಲಿ ತಾಲೂಕಿನ ಎಲ್ಲಾಒಕ್ಕೂಟದ ಅಧ್ಯಕ್ಷರುಗಳು, ಎಲ್ಲಾಮೇಲ್ವಿಚಾರಕರು, ಕೃಷಿಮೇಲ್ವಿಚಾರಕರು, ಆಂತರಿಕ ಲೆಕ್ಕ ಪರಿಶೋಧಕರು ಭಾಗವಹಿಸಿದರು. ಈಕಾರ್ಯಕ್ರಮವನ್ನು ತಾಲೂಕಿನ ಕ್ಷೇತ್ರಯೋಜನಾಧಿಕಾರಿಯವರಾದ ಮಾಧವರವರು ಸ್ವಾಗತಿಸಿದರು. ಗುತ್ತಿಗಾರು ಮೇಲ್ವಿಚಾರಕರಾದ ಬಾಲಕೃಷ್ಣಗೌಡರವರು ಕಾರ್ಯನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading