
ಮಂಗಳೂರಿನ ನಡೆದ ಬಿಜೆಪಿ ವಿಜಯೋತ್ಸವದ ಸಂದರ್ಭದಲ್ಲಿ ಬೊಳಿಯಾರಿನಲ್ಲಿ ಚೂರಿ ಇರಿತಕ್ಕೆ ಒಳಗಾಗಿ ಮಂಗಳೂರು ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತರನ್ನು ಸುಳ್ಯ ಶಾಸಕರಾದ ಕು.ಭಾಗೀರಥಿ ಮುರುಳ್ಯ ಇಂದು ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಯಕರ್ತರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸಂತೋಷ್ ಕುತ್ತಮೊಟ್ಟೆ,ದೀಪಕ್ ಕುತ್ತಮೊಟ್ಟೆ, ಕೇಶವ ಅಡ್ತಲೆ, ದಯಾನಂದ ಕುರುಂಜಿ,ಭವಾನಿ ಚಿಟ್ಟನ್ನೂರು,ವಿಜೇತ್ ಮರುವಳ, ಪ್ರಸಾದ್ ಕಾಟೂರು ಉಪಸ್ಥಿತರಿದ್ದರು.
