
ಹರಿಹರ ಪಲ್ಲತ್ತಡ್ಕ ಗ್ರಾಮದ ಕಲ್ಲೇಮಠ ನಿವಾಸಿ ದೇವಮ್ಮ(67) ಎಂಬುವವರು ಜೂ.03 ರಂದು ನಾಗರಹಾವು ಕಡಿದು ಮೃತಪಟ್ಟಿದ್ದು, ಅವರು ತಮ್ಮ ಮನೆಯ ಕೋಳಿ ಕಾಪುವಿಗೆ ಕೈ ಹಾಕಿದ ಸಂದರ್ಭದಲ್ಲಿ ಹಾವು ಕಡಿದಿದ್ದು, ಆಸ್ಪತ್ರೆಗೆ ತೆರಳುವ ದಾರಿ ಮಧ್ಯೆ ದೇವಮ್ಮ ಕೊನೆಯುಸಿರೆಳೆದಿದ್ದರು.
ಇಂದು 10 ದಿನಗಳ ಬಳಿಕ ಆ ಮನೆಯಲ್ಲಿ ನಾಗರಹಾವು ಪ್ರತ್ಯಕ್ಷಗೊಂಡಿದ್ದು, ಇದೇ ಹಾವು ಕಡಿದು ದೇವಮ್ಮ ಅವರು ಮೃತಪಟ್ಟಿದ್ದು ಎಂದು ನಂಬಲಾಗಿದೆ.
ಸುಬ್ರಹ್ಮಣ್ಯದ ಮಾಧವ ಎಂಬುವವರನ್ನು ಕರೆಸಿ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ ಎಂದು ತಿಳಿದುಬಂದಿದೆ.
